ಬೆಂಗಳೂರು:
ಕೆಲ ದಿನಗಳ ಹಿಂದಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿದೇಶ ಪ್ರವಾಸ ಹೋಗಿದ್ದಾರೆ, ಈಗ ಹಾಲಿ ಉಪ-ಮುಖ್ಯಮಂತ್ರಿ ಡಾ:ಜಿ. ಪರಮೇಶ್ವರ್ ರವರು 3 ದಿನಗಳ ಕಾಲ ಅಮೇರಿಕ ಪ್ರವಾಸಕ್ಕೆ ಹೊರಟಿದ್ದಾರೆ.
ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸೆಪ್ಟೆಂಬರ್ 10ರಿಂದ ನಡೆಯಲಿರುವ ಗ್ಲೋಬಲ್ ಕ್ಲೈಮೇಟ್ ಟೆಕ್ ಸಮಿತ್ ನಲ್ಲಿ ಭಾಗವಹಿಸಲು ವಿದೇಶಕ್ಕೆ ತೆರಳಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ, ಅಮೆರಿಕಾದಲ್ಲಿ ಮೂರು ದಿನಗಳ ಕಾಲ ಕಾರ್ಯಾಗಾರ ನಡೆಯಲಿದ್ದು, ಬದಲಾಗುತ್ತಿರುವ ಮಾಲಿನ್ಯದ ಕುರಿತು ಕೆಲ ವಿಭಾಗದಲ್ಲಿ ವಿಚಾರ ಮಂಡನೆ ಮಾಡಲಿದ್ದೇನೆ. ವಿಶ್ವದ ಇತರೆ ದೇಶದ ರಾಜಕೀಯ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಹಾಗೆಯೇ ನನಗೂ ಆಹ್ವಾನ ಬಂದಿದೆ. ಎಂದು ತಿಳಿಸಿದ್ದಾರೆ.
ಈ ವೇಳೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವಾರು ಅಧಿಕಾರಿಗಳು ಮುಖ್ಯಮಂತ್ರಿಯವರಿಗೆ ಸಾಥ್ ನೀಡಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
