ಸೇವಾ ಮಿಲನ

ತುರುವೇಕೆರೆ:

              ತುರುವೇಕೆರೆ ಲಯನ್ಸ್ ಕ್ಲಬ್ ಹಲವಾರು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರ ಪ್ರಯೊಜನವನ್ನು ನೀವೆಲ್ಲಾ ಪಡೆದುಕೊಳ್ಳಿ ಎಂದು 317 ಎ ಮೊದಲನೆ ಉಪ ಜಿಲ್ಲಾ ರಾಜ್ಯಪಾಲ ಲ|| ವಿ.ನಾಗರಾಜ್ ಬೈರಿ ತಿಳಿಸಿದರು.
ಲಯನ್ಸ್ ಕ್ಲಬ್ ತುರುವೇಕೆರೆ, ಬೆಂಗಳೂರು ಎಲ್‍ಸಿಬಿ ಗಳಾದ ಕಿಂಗ್ಸ್, ವಸುಂದರೆ, ಸಂಟಿನಿಯಲ್ ಜಯವಿಜಯ, ಬ್ರೈಟ್, ಹನುಮಂತನಗರ, ಸೆಂಚುನರಿ ಪ್ರೆಂಡ್ಸ್, ಸೆಂಟಿನಿಯಲ್ ಸ್ಪಂದನ, ಬನಶಂಕರಿ, ಕಾವೇರಿ, ಮಹಾನಗರ ಹಾಗು ಎಲ್‍ಸಿ ಗಳಾದ ಕುಣಿಗಲ್, ತುಮಕೂರು ಅಮೃತ, ನೊಣವಿನಕೆರೆ ಹಾಗು ತಾಲೂಕು ಅರಣ್ಯ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ “ಸೇವಾ ಮಿಲನ” ಎಂಬ ಮೆಗಾ ಟ್ವಿನಿಂಗ್ ಕಾರ್ಯಕ್ರಮದ ಅಂಗವಾಗಿ ಮಾಯಸಂದ್ರ ಸುಬ್ರಹ್ಮಣ್ಯ ಸ್ವಲೀನತೆ ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
              ಬಡವರ ಹಾಗೂ ಧೀನದಲಿತರ ಆಶಾಕಿರಣವಾಗಿರುವ ಲಯನ್ಸ್ ಕ್ಲಬ್ ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ತನ್ನದೇ ಅದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು ಇದರ ಅವಶ್ಯಕತೆಯಿರುವವರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಪ್ರಾಂತ್ಯಾಧ್ಯಕ್ಷ ಲ|| ಟಿಎವಿ ಗುಪ್ತಾ ಮಾತನಾಡಿ ಲಯನ್ಸ್ ಸಂಸ್ಥೆ ಉಚಿತವಾಗಿ ನೀಡುವ ಯಾವುದೆ ಸೇವೆಗಳನ್ನು ತಾವುಗಳು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ನಮ್ಮ ಸೇವೆ ಸಾರ್ಥಕವಾಗಲಿದೆ ಎಂದರು.
              ಇದರ ಅಂಗವಾಗಿ ತಾಲ್ಲೋಕಿನಾದ್ಯಂತ ಅನೇಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಗ್ರಾಮದೇವತೆ ಉಡುಸಲಮ್ಮ ದೇವಾಲಯದ ಆವರಣದಲ್ಲಿ ತಾಲೂಕಿನ ಪ್ರವಾಸಿ ಸ್ಥಳಗಳ ಮಾಹಿತಿ ಫಲಕ ಉಧ್ಘಾಟನೆ, ದೆಬ್ಬೇಘಟ್ಟ ಸರ್ಕಾರಿ ಫ್ರೌಢಶಾಲೆಯಲ್ಲಿ ಸಸಿ ನೆಡುವುದು, ಶಾಲಾ ಮಕ್ಕಳ ರಕ್ತಗುಂಪು ಪರೀಕ್ಷೆ ಹಾಗು ರಕ್ತಧಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು, ಕಡೇಹಳ್ಳಿ ಗುಡ್ಡ ಪ್ರದೇಶದಲ್ಲಿ 2000 ಕ್ಕೂ ಹೆಚ್ಚು ಬೀಜದುಂಡೆ ಬಿತ್ತನೆ, ಹುಲಿಕಲ್ ಫ್ರೌಢಶಾಲಾ ಮಕ್ಕಳಿಗೆ ತಟ್ಟೆಲೋಟ ವಿತರಣೆ ಹಾಗು ಸಸಿ ನೆಡುವ ಕಾರ್ಯಕ್ರಮ, ಆಲದಹಳ್ಳಿ ಶಾಲೆಗೆ ಕ್ರೀಡಾ ಸಾಮಗ್ರಿಗಳ ವಿತರಣೆ, ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ ಹಾಗು ನೇತ್ರ ಧಾನ ನೊಂದಣಿ, ವಾಲಿಬಾಲ್ ಕೋರ್ಟ್ ಆವರಣ ಸುತ್ತ ಸ್ವಚ್ಚತಾ ಕಾರ್ಯಕ್ರಮ ಸೇರಿದಂತೆ ಒಂದೆ ದಿನ ಹತ್ತಾರು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದುದು ತುರುವೇಕೆರೆ ಲಯನ್ಸ್ ಸಂಸ್ಥೆಯ ವಿಶೇಷವಾಗಿತ್ತು. ಸೇವಾ ಚಟುವಟಿಕೆಗಳ ನಂತರ ಪಾಲ್ಗೋಂಡಿದ್ದ ಎಲ್ಲಾ ಕ್ಲಬ್ ನಿರ್ಧೇಶಕರುಗಳ ಜಂಟಿ ಸಭೆ ನಡೆಸಲಾಯಿತು.
           ತಾ|| ಅದ್ಯಕ್ಷ ಲ|| ಹೆಚ್.ಕೆ.ನಂಜೇಗೌಡ ಅಧ್ಯಕ್ಷತೆಯಲ್ಲಿ ನೆಡೆದ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಟಿ.ವಿ.ಮಹೇಶ್, ಡಾ|| ನಾಗರಾಜು, ಲಯನ್ಸ್ ಕಾರ್ಯದರ್ಶಿ ಬಸವರಾಜು, ಖಜಾಂಚಿ ನಟೇಶ್, ಪದಾಧಿಕಾರಿಗಳಾದ ಗಂಗಾದರ ದೇವರಮನೆ, ರುದ್ರಯ್ಯ ಎಂ.ಹಿರೇಮಠ್, ಚೈತ್ರ ಶ್ರೀನಿವಾಸ್, ಮಿಹಿರಾ ಕುಮರ್, ಸುರೇಶ್, ಸುನಿಲ್‍ಬಾಬು, ವಿನಯ್ ಕೃಷ್ಣ, ಹುಲಿಕೆರೆ ಲೋಕಿ, ಶಿವಾನಂದ್,ಮನು, ಮಹೇಂದರ್ ಸೇರಿದಂತೆ ಇತತೆ ಕ್ಲಬ್ ಸದಸ್ಯರುಗಳು ಪಾಲ್ಗೋಂಡಿದ್ದರು.

Recent Articles

spot_img

Related Stories

Share via
Copy link