ಸೌಹಾರ್ದತೆ ಮತ್ತು ಭಕ್ತಿಯಿಂದ ಗಣೇಶ ಹಬ್ಬ ಆಚರಿಸಿ : ಡಿವೈಎಸ್ ಪಿ

ಕೂಡ್ಲಿಗಿ:

      ಶಾಂತಿ, ಸೌರ್ಹಾದತೆ ಹಾಗೂ ಭಕ್ತಿಯಿಂದ ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಕೂಡ್ಲಿಗಿ ಡಿವೈಎಸ್ಪಿ ಬಸವೇಶ್ವರ ಹೇಳಿದರು. ಅವರು ಶನಿವಾರ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಕರೆದಿದ್ದ ಗಣೇಶ ಉತ್ಸವದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

      ಗಣೇಶನ ಹಬ್ಬಕ್ಕೆ ಕೆಲಸಿದ್ಧತೆಗಳು ಮತ್ತು ಆಚರಣೆಗಳನ್ನು ಸಂಘಟಕರು ಕಡ್ಡಾಯವಾಗಿ ಪಾಲಿಸಬೇಕು. ಹಾಗೂ ಇದು ಇಲಾಖೆಯ ನಿರ್ದೇಶನವು ಹೌದು. ಗಣೇಶನನ್ನು ಸಾರ್ವಜನಿಕರು ನಡೆದಾಡುವ ರಸ್ತೆಗೆ ತೊಂದರೆಯಾಗದಂತೆ ಪ್ರತಿಷ್ಠಾಪಿಸಬೇಕು. ಅಲ್ಲದೆ ಗಣೇಶನ ಕೂಡಿಸುವ ಜಾಗವನ್ನು ಪಪಂನಿಂದ ಪರವಾನಿಗೆ ಪಡೆಯಬೇಕು. ಜೊತೆಗೆ ವಿದ್ಯುತ್ ಇಲಾಖೆ ಹಾಗೂ ದ್ವನಿವರ್ದಕಗಳನ್ನು ಬಳಸಲು ಸ್ಥಳಿಯ ಪೋಲೀಸ್ ಠಾಣೆಯಿಂದ ಪರವಾನಿಗೆ ಪಡೆಯಬೇಕು. ಸಂಘಟಕರು ಪರವಾನಿಗೆ ಪಡೆಯಲು ವೃಥಾ ಅಲೆದಾಟ ತಪ್ಪಿಸಲು ಸ್ಥಳಿಯ ಠಾಣೆಗಳಲ್ಲಿಯೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ನಿಮ್ಮ ಅರ್ಜಿ ಪಡೆದ ತಕ್ಷಣವೇ ಪರವಾನಿಗೆ ನೀಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

      ಸಂಘಟಕರು ಪೋಲೀಸ್ ಇಲಾಖೆಗೆ ಮುಚ್ಚಳಿಕೆಯ ಪತ್ರವನ್ನು ಬರೆದುಕೊಡಬೇಕು. ಹಾಗೂ ಗಣೇಶನನ್ನು ಪ್ರತಿಷ್ಠಾಪಿಸುವವರು ರಾತ್ರಿ ಹೊತ್ತು ಪಾಳಿಯ ಪ್ರಕಾರ ಗಣೇಶನನ್ನು ನೋಡಿಕೊಳ್ಳುವ ಜವಾಬ್ದಾರಿ ಇರಬೇಕು. ಅಲ್ಲದೆ ಮೆರವಣಿಗೆಗೆ ಡಿಜೆ ದ್ವನಿವರ್ಧಕ ಬಳಸುವಂತಿಲ್ಲ. ರಾತ್ರಿ 10ಗಂಟೆಯ ಒಳಗೆ ಎಲ್ಲಾ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು. ಇನ್ನೂ ಗಣೇಶ ಉತ್ಸವ ದಿನಗಳಲ್ಲಿ ಮದ್ಯ ನಿಷೇಧಿಸುವಂತೆ ಹಿರಿಯ ಅಧಿಕಾರಿಗಳಿಗೂ ತಿಳಿಸಲಾಗಿದ್ದು ಆದಷ್ಟು ಉತ್ಸವವನ್ನು ತುಂಬಾ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿ ಪೋಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

      ಸಿಪಿಐ ಟಿ.ಆರ್. ನಹೀಮ್ ಅಹ್ಮದ್, ಪಪಂ ಮುಖ್ಯಾಧಿಕಾರಿ ಉಮೇಶ್ ಹಿರೇಮಠ್, ನಾಗರೀಕ ಹಿತರಕ್ಷಣಾ ವೇದಿಕೆ ಕಾವಲಿ ಶಿವಪ್ಪ ನಾಯಕ ಮಾತನಾಡಿದರು. ಗುಡೋಕೋಟೆ ಪಿಎಸ್‍ಐ ಮೋಹನ್ ಕುಮಾರ್. ಜೆಸ್ಕಾಂ ಇಲಾಖೆಯ ಕೆ.ಎಂ.ಚಿದಾನಂದ, ಚೋರನೂರು ಶಿವಣ್ಣ, ಗುರಿಕಾರ ರಾಘವೇಂದ್ರ, ಸಿ.ಬಿ.ಸಿದ್ದೇಶ್, ವೆಂಕಟೇಶ್, ಸೋಮನಾಥ, ಭೀಮ ಜಲ್ಸಾ, ಸೊಲ್ಲೇಶ್, ಬುಟ್ಟ ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link