ಸ್ಥಾನಿಕ ಸಂಪಾದಕರ ಗಮನಕ್ಕೆ

 

ಬಳ್ಳಾರಿ:

    ಮೈನಿಂಗ್ ಮಾಫಿಯಾ ಮತ್ತೆ ನಡೆಯದಂತೆ ಕಾರ್ಯಕತಂತ್ರ ರೂಪಿಸಲು ಹಾಗೂ ಗಣಿಬಾಧಿತ ತಾಲೂಕುಗಳ ಅಭಿವೃಧ್ಧಿ ಕುರಿತು ಜಿಲ್ಲೆಯ ಸಂಡೂರು ಪಟ್ಟಣದ ವೀರಶೈವ ಮಂಗಲ ಭವನದಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ಆ.30ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಅವರು ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈಗಾಗಲೇ ಗಣಿ ನಾಡು ಬಳ್ಳಾರಿ ಜಿಲ್ಲೆ ಮೈನಿಂಗ್ ಮಾಫಿಯಾದಿಂದ ದೇಶ ವಿದೇಶಗಳಲ್ಲಿ ನಾನಾ ರೀತಿ ಸದ್ದು ಮಾಡಿದ್ದು, ಅಭಿವೃಧ್ಧಿ ಕೆಲಸಗಳು ಮರಿಚಿಕೆಯಾಗಿವೆ. ಪ್ರಭಾವಿಗಳು, ಚುನಾಯಿತ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಜಿಲ್ಲೆಯಲ್ಲಿ ಮತ್ತೆ ಮೈನಿಂಗ್ ಮಾಫಿಯಾ ತಲೆ ಎತ್ತದಂತೆ ಎರಡು ದಿನಗಳ ಕಾರ್ಯಾಗಾರದಲ್ಲಿ ಕಾರ್ಯತಂತ್ರ ರೂಪಿಸಲಾಗುವುದು. ಇದರ ಜೊತೆಗೆ ಗಣಿಬಾಧಿತ ಪ್ರದೇಶಗಳ ಅಭಿವೃಧ್ಧಿ ಕುರಿತು ಕಾರ್ಯಾಗಾರದಲ್ಲಿ ಚೆರ್ಚಿಸಿ ಸರ್ಕಾರದ ಹಾಗೂ ನ್ಯಾಯಾಲಯದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು. ಬೆಂಗಳೂರು ನಗರದ ಸೆಂಟ್ರಲ್ ಕಾಲೇಜಿನ ಫ್ರೊ.ಡಾ.ವಿ.ವಿಷ್ಣುಕಾಮತ್ ಅವರು ಆ.30ರಂದು ಎರುಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

   ಗಣಿಬಾಧಿತ ಜನರ ಅಭಿವೃಧ್ಧಿ ಸಮೀತಿ ಆಶ್ರಯದಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಈ ವೇಳೆ ಗಣಿಬಾಧಿತ ಜನರ ಕೃಷಿ, ಶಿಕ್ಷಣ, ಆರೋಗ್ಯ, ಶುದ್ದ ಕುಡಿವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ಗಣಿಬಾಧಿತ ತಾಲೂಕುಗಳ ಅಭಿವೃಧ್ಧಿ ಕುರಿತು ಚೆರ್ಚಿಸಲಾಗುವುದು. ಜಾರಿಗೊಳಿಸುವ ಯೋಜನೆಗಳು ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಹಾಗೂ ಸಹಕಾರಿ ಸಂಘಗಳ ರಚನೆ ಮೂಲಕ ಯೋಜನೆ ಅನುಷ್ಠಾನಕ್ಕೆ ತರುವ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ತುಮಕೂರು, ಚಿತ್ರದುರ್ಗ ಬಳ್ಳಾರಿ ಜಿಲ್ಲೆಯಿಂದ 40ಕ್ಕೂ ಹೆಚ್ಚು ಮುಖಂಡರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದರು.
ನಿರಂತರ ಹೋರಾಟದಿಂದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ ಜನರ 1500ಕ್ಕೂ ಹೆಚ್ಚು ಹೆಕ್ಟೇರ್ ಅರಣ್ಯ ಜಮೀನನ್ನು, ಅರಣ್ಯ ಹಾಗೂ ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂರಕ್ಷಿಸಿದ್ದು, ಈ ಕುರಿತು ಅಧಿಕಾರಿಗಳು ಆದೇಶ ಹೊರಡಿಸಿರುವುದು ಸಂತಸ ಮೂಡಿಸಿದೆ. ಕಳೆದ 3ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ ಎಂದರು. ಈ ಸಂದರ್ಭದಲ್ಲಿ ಜನ ಸಂಗ್ರಾಮ ಪರಿಷತ್‍ನ ಶಿವಕುಮಾರ್ ಸಂಡೂರು, ಮಲ್ಲಿಕಾರ್ಜುನ ರೆಡ್ಡಿ, ಎಸ್‍ಯುಸಿಐನ ಡಿ.ನಾಗಲಕ್ಷ್ಮೀ, ಸೋಮಶೇಖರಗೌಡ ಇದ್ದರು.

Recent Articles

spot_img

Related Stories

Share via
Copy link