ಸ್ನೇಹಿತರೇ ಎಚ್ಚರ ಬಂದಿದೆ ಮೆದುಳು ತಿನ್ನುವ ಅಮೀಬಾ…!

ನವದೆಹಲಿ :

      ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುವ ‘ನಾಗ್ಲೆರಿಯಾ ಫೌಲೆರಿ’ ಅಥವಾ ಮೆದುಳು ತಿನ್ನುವ ಅಮೀಬಾ ಪಾಕಿಸ್ತಾನದಲ್ಲೂ ಜೀವ ತೆಗೆಯುತ್ತಿದೆ. ಕರಾಚಿ ಯುವಕನೊಬ್ಬ ವಿಪರೀತ ಜ್ವರ ಅಂತಾ ಆಸ್ಪತ್ರೆಗೆ ಸೇರಿದ್ದ. ಆ ಹುಡುಗನ ಮೆದುಳಿಗೆ ನುಗ್ಗಿತ್ತು ಅಮೀಬಾ. ಹೀಗಾಗಿ ಆತ ವಿಪರೀತ ವಾಂತಿ & ಜ್ವರದಿಂದ ನರಳುತ್ತಿದ್ದ.

    ಹುಡುಗನನ್ನ ಬದುಕಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರೂ ಕೊನೆಗೂ ಉಳಿಸಿಕೊಳ್ಳಲು ಆಗಲೇ ಇಲ್ಲ ಎಂದಿದ್ದಾರೆ ಪಾಕಿಸ್ತಾನದ ವೈದ್ಯರು. ಹಾಗಾದ್ರೆ ಹೇಗೆಲ್ಲಾ ಹರಡುತ್ತೆ ಈ ಮೆದುಳು ತಿನ್ನುವ ಅಮೀಬಾ  ತಿಳಿಯೋಣ ಬನ್ನಿ.

ಮೊದಲು ಮೂಗು.. ನಂತರ ಮೆದುಳು!

    ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ವೈರಸ್ ಒಂದು ಏಕಕೋಶ ಜೀವಿ, ಅಂದ್ರೆ ಇದು ಅಮೀಬಾ. ಮೊದಲು ಮನುಷ್ಯನ ಮೂಗಿನ ಒಳಗೆ ಪ್ರವೇಶ ಮಾಡುವ ವೈರಸ್, ಅಲ್ಲಿಂದ ನೇರ ಮೆದುಳು ಸೇರಿ ನಂತರ ಬೆನ್ನುಹುರಿಗೂ ನುಸುಳುತ್ತದೆ. ಹೀಗೆ ಮೆದುಳು ಸೇರಿದ ವೈರಸ್ ಮನುಷ್ಯನ ಮೆದುಳನ್ನ ತಿನ್ನಲು ಪ್ರಾರಂಭಿಸಿ, ಕೊನೆಗೆ ಜೀವ ತೆಗೆಯುತ್ತದೆ. ಹೀಗಾಗಿ ‘ನಾಗ್ಲೆರಿಯಾ ಫೌಲೆರಿ’ ಡೆಡ್ಲಿ ವೈರಸ್ ಆಗಿದ್ದು, ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದೀಗ ಪಾಕಿಸ್ತಾನಕ್ಕೂ ಎಂಟ್ರಿ ಕೊಟ್ಟು ಬೆಚ್ಚಿಬೀಳಿಸಿದೆ.

ಮನೆ ಟ್ಯಾಂಕರ್‌ನಲ್ಲೂ ಮೆದುಳು ತಿನ್ನುವ ವೈರಸ್!

    ಉತ್ತರ ಅಮೆರಿಕ ಹಾಗೂ ದಕ್ಷಿಣ ಅಮೆರಿಕದಲ್ಲಿ ಹಲವು ಕಡೆ ವ್ಯಾಪಕವಾಗಿ ಈ ಮೆದುಳು ತಿನ್ನುವ ವೈರಸ್ ಹರಡುತ್ತಿದೆ. ಇದೀಗ ಏಷ್ಯಾಗೂ ಕಾಲಿಟ್ಟು ಭಾರತದಲ್ಲೂ ತಲ್ಲಣ ಸೃಷ್ಟಿಸುತ್ತಿದೆ. ಈ ವೈರಸ್ ಬದುಕಿ ಉಳಿಯಲು ಬೆಚ್ಚಗಿನ ನೀರು ಅಗತ್ಯ. ಮಣ್ಣು & ಬೆಚ್ಚಗಿನ ಶುದ್ಧ ನೀರಲ್ಲಿ ಮೆದುಳು ತಿನ್ನುವ ವೈರಸ್ ಹೆಚ್ಚಾಗಿ ಕಂಡುಬರುತ್ತಿದೆ. ಇದರ ಜೊತೆಗೆ ಮನೆ ನೀರಿನ ಟ್ಯಾಂಕರ್ ಮತ್ತು ಹೀಟರ್ ಅಥವಾ ಪೈಪ್‌ಗಳಲ್ಲೂ ಮೆದುಳು ತಿನ್ನುವ ವೈರಸ್ ಕಂಡುಬರುತ್ತದೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ತಜ್ಞರು ಮೊದಲಿನಿಂದಲೂ ಸಲಹೆ ನೀಡುತ್ತಾ ಬಂದಿದ್ದಾರೆ.

1 ವಾರದಲ್ಲಿ ಜೀವ ಹೋಗುತ್ತೆ ಹುಷಾರ್!

   ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ಅದೆಷ್ಟು ಡೇಂಜರಸ್ ಅಂದ್ರೆ, ಸೋಂಕಿಗೆ ಸರಿಯಾದ ಔಷಧ ಲಭ್ಯವಿಲ್ಲ. ಅಕಸ್ಮಾತ್ ನಾಗ್ಲೆರಿಯಾ ಫೌಲೆರಿ ಮನುಷ್ಯನ ಮೆದುಳು ಸೇರಿದರೆ ಆ ಕ್ಷಣದಿಂದಲೇ ಮೆದುಳಿನ ಮೇಲೆ ದಾಳಿ ಮಾಡಿ ತಿನ್ನಲು ಆರಂಭಿಸುತ್ತದೆ. 1 ವಾರದಲ್ಲಿ ಆತನ ಜೀವವನ್ನೇ ತೆಗೆದುಬಿಡುತ್ತದೆ. ಇದ್ಯಾವುದೂ ಸೋಂಕಿತನ ಗಮನಕ್ಕೆ ಬರುವುದೇ ಇಲ್ಲ. ಅಷ್ಟರಮಟ್ಟಿಗೆ ಖತರ್ನಾಕ್ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿ. ಇದೇ ಕಾರಣಕ್ಕೆ ಮೆದುಳು ತಿನ್ನುವ ಅಮೀಬಾ ಬಗ್ಗೆ ಎಲ್ಲರಿಗೂ ಭಯ ಭಯ.

ಜ್ವರ, ವಾಂತಿ, ತಲೆನೋವು ಲಕ್ಷಣ

    ಮೆದುಳು ತಿನ್ನುವ ಅಮೀಬಾ ದೇಹ ಪ್ರವೇಶಿಸಿದರೆ ಮೆಲ್ಲಗೆ ತನ್ನ ಕೆಲಸ ಆರಂಭಿಸುತ್ತದೆ. ಸೂಕ್ಷ್ಮಾಣು ಜೀವಿ ಕೆಲಸ ಆರಂಭಿಸಿದ ಒಂದೆರಡು ದಿನದಲ್ಲಿ ಜ್ವರ & ತಲೆನೋವು ಶುರು ಆಗುತ್ತದೆ. ಹೀಗೆ ಆರಂಭವಾಗುವ ಸೋಂಕಿನ ಲಕ್ಷಣ ಭಾರಿ ವಾಂತಿಯಾಗುವಂತೆ ಮಾಡುತ್ತೆ. ಮನುಷ್ಯನ ರೋಗನಿರೋಧಕ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿ, 1 ವಾರದ ಒಳಗಾಗಿ ಸೋಂಕಿತ ವ್ಯಕ್ತಿ ಮೃತಪಡುತ್ತಾನೆ. ಅಷ್ಟರೊಳಗೆ ಅಮಿಬಾ ವಂಶಕ್ಕೆ ಸೇರಿದ ಈ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿ ಮೆದುಳನ್ನು ತಿಂದು ಮುಗಿಸಿರುತ್ತದೆ.

ಮೂಗಿನ ಒಳಗೆ ನೀರು ಹಾಕಬೇಡಿ!

    ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿ ಅಮೆರಿಕದ ಹಲವು ಕೆರೆಗಳಲ್ಲಿ ಕಂಡುಬಂದಿದೆ. ಹೀಗಾಗಿ ಅಲ್ಲಿನ ಅಧಿಕಾರಿಗಳು ಜನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಹಲವು ನಗರಗಳ ನೇರವಾಗಿ ಕೆರೆ ಅಥವಾ ನಲ್ಲಿ ನೀರನ್ನು ಮೂಗಿನ ಒಳಗೆ ಸೇರಿಸಬೇಡಿ ಎಂದಿದ್ದಾರೆ. ಏಕೆಂದರೆ ಮೂಗಿಗೆ ನೀರು ಹೋದರೆ, ವೈರಸ್ ಮೆದುಳು ಸೇರುವುದು ಸುಲಭ. ಮೆದುಳು ಸೇರುವ ಸೂಕ್ಷ್ಮಾಣು ಜೀವಿ ನಾಗ್ಲೆರಿಯಾ ಫೌಲೆರಿ ತಕ್ಷಣ ಮೆದುಳನ್ನ ತಿನ್ನಲು ಶುರುಮಾಡುತ್ತದೆ. ಕಡೆಗೆ ಸೋಂಕಿತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಸಿಗದೆ ಆತ ನರಳಿ ಪ್ರಾಣಬಿಡುತ್ತಾನೆ. ಹೀಗಾಗಿ ಮೂಗಿನ ಒಳಗೆ ನೀರು ಸೇರಿಸಬೇಡಿ ಎಂದು ಅಮೆರಿಕದಲ್ಲಿ ಎಚ್ಚರಿಕೆ ನೀಡಲಾಗಿದ್ದು, ಜೊತೆಗೆ ಪಾಕಿಸ್ತಾನದಲ್ಲೂ ಅಲರ್ಟ್ ಘೋಷಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap