ಹರಪ್ಪನಹಳ್ಳಿ:
ಸ್ಮಶಾನ ಭೂಮಿಯನ್ನು ಬೀಡದೇ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದು ಇದರಿಂದ ಸ್ಮಶಾನದಲ್ಲಿನ ತಲೆ, ಕಾಲುಗಳ ಮೂಳೆಗಳು ಹೊರಗೆ ಹಾಕಿದ ಘಟನೆ ತಾಲೂಕಿನ ಕಂಚಿಕೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ರುದ್ರಭೂಮಿಯಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ಅವ್ಯಹತವಾಗಿ ನಡೆಯುತ್ತಿದ್ದು ಇದರಿಂದ ಸ್ಮಶಾನದಲ್ಲಿ ಊಳಲಾಗಿದ್ದ ಶವಗಳ ತಲೆಬುರಡಿ, ಕಾಲುಗಳ ಮೂಳೆಗಳು ಎಲ್ಲೆಂದರಲ್ಲಿ ಬಿದ್ದಿವೆ ಅಂದಾಜು 20ಕ್ಕೂ ಹೆಚ್ಚು ಶವಗಳ ಅವಶೇಷಗಳು ರಾಶಿಯಾಗಿ ಹೊರಗೆ ಬಿದ್ದಿವೆ. ಅಲ್ಲದೇ 10-15 ಕಣಗಳಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಣೆಯನ್ನು ಮಾಡಿದ್ದಾರೆ. ಮರಳನ್ನು ರಾತ್ರೋ ರಾತ್ರಿ ಕಳ್ಳತನ ಮಾಡಲಾಗುತ್ತಿದೆ ಈ ರೀತಿಯಾಗಿ ನಿರಂತರವಾಗಿ ಅಕ್ರಮ ಮರಳ ಲೂಟಿ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಮಶಾನದಲ್ಲಿನ ಮೃತ ಅವಶೇಷಗಳನ್ನು ಗ್ರಾಮಸ್ಥರು ನೋಡಿ ಭಯಬೀತರಾಗಿದ್ದಾರೆ ಅಲ್ಲದೇ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರುದ್ರಭೂಮಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕಂದಾಯ ಅಧಿಕಾರಿಗಳಿಗೆ, ತಹಶೀಲ್ದಾರರಿಗೆ ಮನವಿ ನೀಡಿದ್ದಾರೆ.
ಉಪವಿಭಾಗಾಧಿಕಾರಿ ಜಿ.ನಜ್ಮಾ ಅವರ ಸೂಚನೇ ಮೇರಿಗೆ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದ ರುದ್ರಭೂಮಿಗೆ(ಸ್ಮಶಾನಕ್ಕೆ) ತಹಶೀಲ್ದಾರ ಡಾ.ಮಧು ಹಾಗೂ ಉಪತಹಶೀಲ್ದಾರ ಪಾತೀಮಾ ಸೇರಿದಂತೆ ಕಂದಾಯ ಅಧಿಕಾರಿಗಳು ಪರಿಶೀಲನೇ ನಡೆಸಿ ಸೂಕ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದು ನಂತರ ಸಂಗ್ರಹಣೆ ಮಾಡಲಾಗಿದ್ದ ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದಾರೆ.
ನಂತರ ತಹಶೀಲ್ದಾರ ಡಾ.ಮಧು ಮಾತನಾಡಿ ಗಮನಕ್ಕೆ ಬಂದ ಕೂಡಲೇ ಗ್ರಾಮಕ್ಕೆ ಬೇಟಿ ನೀಡಿದ್ದೇನೆ ಅವಹೇಳನಕಾರಿ ಕೃತ್ಯ ಮಾಡಿದ್ದಾರೆ. ಅಲ್ಲದೇ ಕಂಚಿಕೇರಿ ಕೆರೆಯ ಹಿಂಬಾಗ ಕೂಡ ಪರಿಶೀಲನೇ ಮಾಡಲಾಗುವುದು ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿ, ಉಪವಿಭಾಗಾದಿಕಾರಿ ಹಾಗೂ ಪೋಲಿಸ್ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಮತ್ತು ಇದಕ್ಕೆ ಗ್ರಾಮಸ್ಥರು ಮನವಿ ನೀಡಬೇಕು ಜತೆಗೆ ಸಹಕಾರ ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬಹುದು ಹಾಗೂ ಮುಂದೇ ಈ ರೀತಿ ಆಗದಂತೆ ಗ್ರಾಮಲೆಕ್ಕಾಧಿಕಾರಿಗಳಿಗೆ ಕ್ರಮವಹಿಸಲು ಸೂಚನೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಲೆಕ್ಕಾದಿಕಾರಿ, ಕಂದಾಯ ಅಧಿಕಾರಿಗಳು, ಗ್ರಾಮಸ್ಥರಾದ ಜಿ.ಕೆ.ನಾಗರಾಜ, ಚಂದ್ರಪ್ಪ, ಹನುಮಪ್ಪ, ಎಂ.ಮಾರುತಿ, ಡಿ.ಕೆಂಚಪ್ಪ, ಆರ್.ರವಿ, ಎಂ.ಮಹೇಶ್, ಪಕ್ಕಿರಪ್ಪ, ಮಂಜಪ್ಪ, ಎಸ್.ಪ್ರಭು, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ