“ಸ್ಲಂ ನಿವಾಸಿಗಳು ಸಾಮಾಜಿಕ ನ್ಯಾಯಕ್ಕಾಗಿ ಮತ ಚಲಾಯಿಸಿ”

ತುಮಕೂರು

               ಮಹಾನಗರ ಪಾಲಿಕೆ ಚುನಾವಣೆ 31-8-2018 ರಂದು ನಡೆಯುತ್ತಿದ್ದು ಇದರ ಅಂಗವಾಗಿ ಸ್ಲಂ ಜನಾಂದೊಳನಾ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿವತಿಯಿಂದ ಸ್ಲಂ ನಿವಾಸಿಗಳ ಸಾಮಾಜಿಕ ನ್ಯಾಯಕ್ಕಾಗಿ ಮತ ಜಾಗೃತಿ ಆಂದೋಲನಾ ಕರಪತ್ರ ಬಿಡುಗಡೆ ಕಾರ್ಯಕ್ರಮವನ್ನು ಜಿಲ್ಲಾ ಕೊಳಗೇರಿ ನಿವಾಸಿಗಳ ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು

               ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಾ.ಹಾ ರಮಾಕುಮಾರಿ ಚುನಾವಣೆಯಲ್ಲಿ ಆಶದಾಯಕವಾದ ಕೆಲಸ ಮಾಡುವವರನ್ನು ಆಯ್ಕೆ ಮಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ ಈ ಅವಕಾಶ ಭಾರತದಲ್ಲಿ ಸ್ವಲ್ಪ ದಿನಗಳಲ್ಲೇ ಕಣ್ಮರೇಯಾಗುವ ಸಂದರ್ಭ ಎದುರಾಗಿದೆ, ಸ್ಲಂ ಸಮಿತಿಯಿಂದ ನಗರ ವಂಚಿತರಿಗೆ ಬಡವರಿಗೆ ಚುನಾವಣೆ ಸಂದರ್ಭದಲ್ಲಿ ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ ಇತರೇ ಬಡವಾಣೆಗಳಲ್ಲೂ ಸಹಾ ನಾಗರೀಕ ಸಮಿತಿಗಳು ಇಂತಹ ಅರಿವನ್ನು ಕೈಗೊಳ್ಳಬೇಕಿದೆ ಏಕೆಂದರೆ ನಗರಾಡಳಿತದಲ್ಲಿ ಜನರಿಗೆ ಭ್ರಮೆಯನ್ನು ನಿರ್ಮಾಣ ಮಾಡಿ ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ಕುತಂತ್ರಕ್ಕೆ ಸಾಮಾನ್ಯ ಜನರು ಅವಕಾಶ ನೀಡಬಾರದು ವಿದ್ಯಾವಂತರು ಚುನಾವಣೆಯ ಬಗ್ಗೆ ನಿರಾಸೆಯಾಗಿ ಪ್ರಜಾಪ್ರಭುತ್ವದಿಂದ ದೂರ ಉಳಿಯುವುದರಿಂದ ರಾಜಕೀಯ ಪ್ರಭುದ್ದತೆಯಿಲ್ಲದಿರುವವರು ಆಯ್ಕೆಯಾಗುತ್ತಿರುವುದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಲಿಕಿದೆ ವಂಚಿತರಿಗೆ ಅಧಿಕಾರ ಸಿಗಬೇಕು ಯಾರು ಸ್ಲಂ ನಿವಾಸಿಗಳ ಸಾಮಾಜಿಕ ನ್ಯಾಯಕ್ಕೆ ದ್ವನಿಯೇತ್ತುವ ಹೋರಾಟಗಾರರಿಗೆ ಮತ ಚಲಾಯಿಸಿ ಬದಲಾವಣೆ ತರಬೇಕೆಂದರು.

“ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲ”- ಸಿ.ಯತಿರಾಜು

               ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಸ್ವರಾಜ್ ಸಂಘಟನೆಯ ಮುಖಂಡರಾದ ಸಿ,ಯತಿರಾಜ್ ಚುನಾವಣೆ ರಾಜಕೀಯ ಅಧಿಕಾರ ಹಿಡಿಯುವ ಪ್ರಕ್ರಿಯೆಯಾಗಿದ್ದು ಬಡವರ ಮತಗಳ ಖರೀದಿಗೆ ರಾಜಕೀಯ ಪಕ್ಷಗಳು ಮುದಾಗಿವೆ ಹಣ ಮತ್ತು ಜಾತಿ ಪ್ರಭಾವ ಬೆಳಸಿ ಮತ ಕೇಳುತ್ತಿದ್ದಾರೆ ಆದರೇ ಇಂದು ನಮ್ಮ ಕೆಲಸ ಮಾಡುವಜವಾಬ್ದಾರಿ ಇರುವವರು ಬೇಕಾಗಿದ್ದಾರೆ, ಸ್ಮಾರ್ಟ್ ಸಿಟಿ  ಜನರಿಗೆ ಮಾಡಿದ ಮಹಾ ಮೋಸ ಇದರಲ್ಲಿ ಜನಪ್ರತಿನಿಧಿಗಳ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ, ನಗರದ ಆಡಳಿತವನ್ನು ಒಂದು ಕಂಪನಿ ನಿಯಂತ್ರಿಸಿ ಸಂವಿಧಾನದ 74ನೇ ತಿದ್ದುಪಡಿಯ ವಿಕೇಂದ್ರಕೃತ ಆಡಳಿತವನ್ನು ನಾಶ ಮಾಡಿ ಕಂಪೆನಿ ಆಡಳಿತವನ್ನು ಸೃಷ್ಟಿಸುವುದಾಗಿದೆ. ಈ ಬಗ್ಗೆ ಹಿಂದಿನ ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸದಂತವರು ಪುನಃ ಮತ ಕೇಳಲು ಬರುತ್ತಿದ್ದಾರೆ. ಆದರೆ ನಾವು ಆಯ್ಕೆ ಮಾಡುವವರಿಗೆ ಅಧಿಕಾರವಿಲ್ಲದಿದ್ದರೇ ನಾವು ಏಕೆ ಮತ ಆಕಬೇಕು ಬೃಷ್ಠರನ್ನು ಕೋಮುವಾದಿಗಳನ್ನು ಮತ್ತು ಜಾತಿವಾದಿಗಳನ್ನು ಈ ಚುನಾವಣೆಯಲ್ಲಿ ಸೋಲಿಸಬೇಕೆಂದರು.

ಚುನಾವಣೆಗಳಲ್ಲಿ ಬಡವರು ಮತ್ತು ವಂಚಿತರ ಪಾತ್ರ ಮುಖ್ಯ – ಕೆ.ದೊರೈರಾಜ್

                  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಿಯುಸಿಎಲ್ ಜಿಲ್ಲಾಧ್ಯಕ್ಷರಾದ ಪ್ರೋ ಕೆ.ದೊರೈರಾಜ್ ಪ್ರಜಾಪ್ರಭುತ್ವದಲ್ಲಿ ಬಡಜನರ ಪಾತ್ರದ ಬಗ್ಗೆ ಸ್ಲಂ ಸಮಿತಿಯಿಂದ ಹಿಂದಿನಿಂದಲು ಜಾಗೃತಿ ಮೂಡಿಸುತ್ತಾ ಬರುತ್ತಿರುವುದು ಅಭಿನಂಧನೀಯ ಕಾರನ ಭಾರತದ ಸಂದರ್ಭದಲ್ಲಿ ಬಡವರಿಗೆ ಚುನಾವಣೆಗಳು ಬಹಳ ಮುಖ್ಯ ನಾವು ಈ ಸಂಧರ್ಭದಲ್ಲಿ ಜಾಗೃತರಾಗಬೇಕು. ಯಾರು ನಮ್ಮ ಪರವಾಗಿ ಕೆಲಸ ಮಾಡುತ್ತಾರೆ. ಯಾರು ನಮ್ಮ ಪರವಾಗಿ ಹೋರಾಟ ಮಾಡುತ್ತಾರೆ ಅಂತವರಿಗೆ ಆಯ್ಕೆ ಮಾಡಬೇಕು ಇಂತಹ ಪ್ರಯೋಗವನ್ನು ಕೊಳಗೇರಿ ಸಮಿತಿ 2013 ರ ನಗರ ಸಭಾ ಚುನಾವಣೆಯಲ್ಲಿ ಮಾಡಿ 8 ಜನ ಕೌನ್ಸ್‍ಲರ್‍ಗಳನ್ನು ಆಯ್ಕೆ ಮಾಡಿದ್ದರಿಂದ ರಚನಾತ್ಮಕವಾದ ಕೆಲಸಗಳಾಗಿವೆ.

                  ಮೊಟ್ಟಮೊದಲನೇಯದಾಗಿ ತುಮಕೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುತ್ತಿದ್ದು ಈ ಚುನಾವಣೆಯಲ್ಲಿ ವಂಚಿತ ಸಮುದಾಯಗಳು ಭೂಮಿಯ ಹಕ್ಕು ಮತ್ತು ನಾಗರೀಕ ಮೂಲಭೂತ ಸೌಲಭ್ಯಗಳಿಗೆ ಅಭ್ಯಾರ್ಥಿಗಳನ್ನು ಒತ್ತಾಯಿಸಬೇಕು. ಜಾತಿ ಧರ್ಮ ಮತ್ತು ಹಣದ ಆಡಳಿತಕ್ಕೆ ಬದಲಾಗಿ ಸಂವಿದಾನಾತ್ಮಕವಾದ ಆಡಳಿತ ಜಾರಿಗೆ ಬರಬೇಕು ಆಗ ನಮ್ಮ ರಕ್ಷಣೆಯಾಗುತ್ತದೆ. ಸ್ಮಾರ್ಟ್ ಸಿಟಿ ಮಾರುಕಟ್ಟೆ ವಿಸ್ತರಿಸುವ ಅಭಿವೃದ್ಧಿಯೇ ಹೊರತು ಜನರ ಅಭಿವೃದ್ಧಿಯಲ್ಲ ಎಂದರು. ನಂತರ ಕಾರ್ಯಕ್ರಮದಲ್ಲಿ ಡಾ. ಅರುಂಧತಿ ಸಂವಿಂಧಾನ ಉಳಿಸಿ ಆಂದೋಲನದ ತಾಜುದ್ದೀನ್.

                  ಸಿಐಟಿಯು ಜಿಲ್ಲಾ ಖಜಾಂಚಿ ಲೋಕೇಶ್ ಮಾತನಾಡಿ ಜನರ ಪರವಾಗಿರುವವರನ್ನು ನಾವು ಆಯ್ಕೆ ಮಾಡಬೇಕು ಈ ಚುನಾವಣೆಯಲ್ಲಿ ಪೈಪೋಟಿ ಹೆಚ್ಚಿರುವುದರಿಂದ ಪಕ್ಷಗಳು ಹಣವಿರುವವರಿಗೆ ಮತ್ತು ರೌಡಿ ಹಿನ್ನಲೆಯಿರುವವರಿಗೆ ಬಿ.ಫಾರಂ ನೀಡಿರುವುದು ದುರದೃಷ್ಟಕರ ಆದ್ದರಿಂದ ನಮ್ಮ ಪರವಾಗಿ ಧ್ವನಿಯೆತ್ತುವ ಹೋರಾಟಗಾರರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

                  ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಲಂ ಜನಾಂದೋಲನದ ಎ.ನರಸಿಂಹಮೂರ್ತಿ 2013ರ ನಗರಸಭಾ ಚುನಾವಣೆಯಲ್ಲಿ 12 ಅಭ್ಯರ್ಥಿಗಳನ್ನು ಸ್ಲಂ ಸಮಿತಿ ಬೆಂಬಲಿಸಿದ್ದರಿಂದ 8 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆಯ್ಕೆಯಾದವರು ಸ್ಲಂ ಜನರ ಪರವಾಗಿ ಮತ್ತು ಬಡವರ ಪರವಾಗಿ ನಿಂತಂತಹ ಉದಾಹರಣೆಗಳಿವೆ, ಕೆಲವೊಬ್ಬರು ಅರ್ಧದಲ್ಲೇ ಬಿಟ್ಟಂತಹ ಸಂದರ್ಭವಿದ್ದರೂ ನಮ್ಮ ಸಂಘಟಿತ ಪ್ರಯತ್ನದಿಂದ ನಗರ ಪಾಲಿಕೆಯಲ್ಲಿ ಹಕ್ಕುಪತ್ರ ಮತ್ತು ಇತರೆ ನಾಗರೀಕ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿದೆ.

                  ಈ ಚುನಾವಣೆಯಲ್ಲಿ 3 ವಾರ್ಡ್‍ಗಳಲ್ಲಿ ಸಮಿತಿಯ ಕಾರ್ಯಕರ್ತರನ್ನು ಚುನಾವಣೆಗೆ ಇಳಿಸಲಾಗಿದ್ದು, 13 ವಾರ್ಡ್‍ಗಳಲ್ಲಿ ಸ್ಲಂ ನಿವಾಸಿಗಳು ನಿರ್ಣಾಯಕವಾಗಿರುವುದರಿಂದ ಸಂವಿಧಾನದ ಸಾಮಾಜಿಕ ನ್ಯಾಯಕ್ಕೆ ಬದ್ದರಾಗಿರುವವರನ್ನು ಆಯ್ಕೆ ಮಾಡಬೇಕಾಗಿದೆ. ಇದಕ್ಕಾಗಿ ಈ ಜಾಗೃತಿ ಆಂದೋಲನವನ್ನು ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ನಿರೂಪಣೆಯನ್ನು ಶೆಟ್ಟಾಳಯ್ಯ, ಸ್ವಾಗತವನ್ನು ದೀಪಿಕಾ,ಮತ್ತು ವಂದನಾರ್ಪಣೆಯನ್ನು ಅರುಣ್ ನೆರವೇರಿಸಿದರು
ಕಾರ್ಯಕ್ರಮದಲ್ಲಿ 20 ಸ್ಲಂಗಳ ಶಾಖಾ ಸಮಿತಿಯ ಪದಾಧಿಕಾರಿಗಳು ಬಾಗವಹಿಸಿದ್ದರು.

Recent Articles

spot_img

Related Stories

Share via
Copy link