ತುರುವೇಕೆರೆ:
ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಂಧರ್ಭದಲ್ಲಿ ಶಾಲಾ ಮಕ್ಕಳಿಗೆ ನೀಡಿದ್ದ ತಿಂಡಿ ಹಾಗು ಹಾಲಿನ ಪ್ಲೇಟ್ಗಳು ಕ್ರೀಡಾಂಗಣದ ತುಂಬೆಲ್ಲಾ ಹರಡಿದ್ದು ವಾಯುವಿಹಾರ ಮಾಡಲು ಮುಜುಗರವಾಗುತ್ತಿದೆ ಎಂದು ನಾಗರೀಕರು ದೂರಿದ್ದಾರೆ.
ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 72 ನೇ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭವನ್ನು ಪಟ್ಟಣದ ಕ್ರೀಡಾಂಗಣದಲ್ಲಿ ಬಹಳ ವಿಶೇಷವಾಗಿ ಆಚರಿಸಲಾಗಿತ್ತು. ಸ್ವಾತಂತ್ರೋತ್ಸವದಲ್ಲಿ ಬಾಗವಹಿಸಿದ್ದ ಸಾವಿರಾರು ಮಕ್ಕಳಿಗೆ ಈ ಬಾರಿ ವಿಶೇಷವಾಗಿ ಬಾದಾಮಿಹಾಲು ಹಾಗು ತಿಂಡಿ ವ್ಯವಸ್ಥೆ ಸ್ಥಳದಲ್ಲಿಯೇ ಆಯೋಜಿಸಲಾಗಿತ್ತು. ಮಕ್ಕಳು ಹಾಲಿನ ಕಪ್ಪು ಹಾಗೂ ತಿಂಡಿ ಪ್ಲೇಟ್ ಗಳನ್ನು ಎಲ್ಲಂದರಲ್ಲಿ ಎಸೆದಿದ್ದು ಗಾಳಿಗೆ ಕ್ರೀಡಾಂಗಣದ ತುಂಬೆಲ್ಲ ಹಾರಾಡುತ್ತಿವೆ. ಜೊತೆಗೆ ಮಕ್ಕಳು ಅರ್ಧಂಬರ್ದ ತಿಂದು ಬಿಸಾಡಿದ ತಿಂಡಿಪದಾರ್ಥಗಳಿಂದ ಕೆಟ್ಟವಾಸನೆ ಬರುತ್ತಿದ್ದು ವಾಯುವಿಹಾರ ಮಾಡುವವರು ಮೂಗು ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ. ಕಾರ್ಯಕ್ರಮ ಮುಗಿದು ಎರಡು ದಿನ ಕಳೆದರೂ ಸಹಾ ಸಂಬಂದಿಸಿದವರು ಇತ್ತ ಗಮನ ಹರಿಸದಿರುವುದು ವಿಷಾದದ ಸಂಗತಿ. ಇಲ್ಲಿ ಪ್ರತಿದಿನ ನೂರಾರು ಜನ ನಾಗರೀಕರು ಹಾಗೂ ವಿಧ್ಯಾರ್ಥಿಗಳು ಹಾಗು ಮಕ್ಕಳಿಂದ ಹಿಡಿದು ವಯೋವೃದ್ದರಾಗಿ ಇಲ್ಲಿ ಆಗಮಿಸುತ್ತಾರೆ. ಬೆಳಿಗ್ಗೆ ವಾಯುವಿಹಾರಕ್ಕೆ ಹೆಂಗಸರು ಮಕ್ಕಳಾದಿಯಾಗಿ ವಾಯುವಿಹಾರಕ್ಕೆ ಹಾಗು ಆಟವಾಡುವ ಉದ್ದೇಶದಿಂದ ಆಗಮಿಸುತ್ತಾರೆ. ಆದರೆ ಇಲ್ಲಿಯ ಪರಿಸರ ಅನೈರ್ಮಲ್ಯದಿಂದ ಕೂಡಿದ್ದು ಬೆಳಗಿನ ವೇಳೆ ವಾಕ್ ಮಾಡುವವರು ಮುಜುಗರ ಅನುಭವಿಸುವಂತಾಗಿದೆ. ಪಕ್ಕದ ಮಹಿಳಾ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ನೀರಿನ ಟ್ಯಾಂಕರ್ ತುಂಬಿ ಕ್ರೀಡಾಂಗಣಕ್ಕೆ ಹರಿದ ನೀರು ಕಟ್ಟೆಯಂತಾಗಿದ್ದು ಇದರ ಬಗ್ಗೆ ಈ ಹಿಂದೆ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದರೂ ಸಹಾ ಕಾಲೇಜು ಸಿಬ್ಬಂದಿ ಮಾತ್ರ ನಮಗೂ ಅದಕ್ಕೂ ಸಂಬಂದವಿಲ್ಲವೇನೋ ಎಂಬಂತೆ ಇದುವರೆವಿಗೆ ಯಾವುದೇ ಕ್ರಮ ಕೈಗೊಂಡಂತಿಲ್ಲ.
ಇದರಿಂದ ವಾಯುವಿಹಾರಿಗಳಿಗೆ ಹಾಗೂ ಮಕ್ಕಳು ಓಡಾಡಲು ತುಂಬಾ ತೊಂದರೆಯಾಗುತ್ತಿದೆ. ಇಷ್ಠೆಲ್ಲದರ ನಡುವೆ ನಾಯಿಗಳ ಹಿಂಡು ಪ್ರತಿದಿನ ಕ್ರೀಡಾಂಗಣದಲ್ಲಿ ಬೀಡುಬಿಟ್ಟಿದ್ದು ಪ.ಪಂ. ಇವುಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಾಯಿಗಳ ಓಡಾಟದಿಂದ ಭಯಭೀತರಾದ ಅದೆಷ್ಠೊ ಮಹಿಳೆಯಾರಾದಿಯಾಗಿ ಮಕ್ಕಳು ವಾಯುವಿಹಾರಕ್ಕೆ ಬರಲು ಹಿಂಜರಿಯುತ್ತಿದ್ದಾರೆ.
ಇಷ್ಟಲ್ಲದೆ ಕ್ರೀಡಾಂಗಣದಲ್ಲಿ ಸಂಜೆ ವೇಳೆ ಇನ್ನೂ ಅನೇಕ ಚಟುವಟಿಕೆಗಳು ನೆಡೆಯುತ್ತಿದ್ದು ಸಂಬಂದಿಸಿದವರು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ ವಾಯುವಿಹಾರಿಗಳಿಗೆ ಸ್ವಚ್ಚ ಹಾಗು ಮುಕ್ತ ವಾತಾವರಣ ಕಲ್ಪಿಸಿಕೊಡಲಿ ಎಂದು ವಾಯುವಿಹಾರಿ ವೇದಿಕೆಯ ಶಂಕರಪ್ಪ, ರೇಣುಕೇಶ್, ಟಾಕೀಸ್ ಸತೀಶ್, ಡಿ.ಜೆ.ರಂಗಸ್ವಾಮಿ, ರೈತಸಂಘದ ಅಧ್ಯಕ್ಷ ಶ್ರೀನಿವಾಸ್‍ಗೌಡ, ಬಾರ್ ಉಮೇಶ್, ಸೋಮು, ಶಿವಬಸವಯ್ಯ, ನಂದೀಶ್, ವಡಾಕರ್, ರಂಗಸ್ವಾಮಿ, ಪರಮೇಶ್, ವೃಷಭೇಂದ್ರ, ಅಭಿ ಸೇರಿದಂತೆ ಅನೇಕ ನಾಗರೀಕರು ಒತ್ತಾಯಿಸಿದ್ದಾರೆ.
.
