ಸ್ವಾರ್ಥದಿಂದ ಸಮಾಜದ ಅವನತಿ: ಜಿಪಂ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್

ಹರಪನಹಳ್ಳಿ:

              ಸ್ವಾರ್ಥದಿಂದ ವ್ಯಕ್ತಿ ಮತ್ತು ಸಮಾಜದ ಅವನತಿಯಾಗುತ್ತದೆ. ನಿಸ್ವಾರ್ಥವಿದ್ದರೆ ಮಾತ್ರ ಸಮಾಜದ ಏಳಿಗೆ ಸಾದ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್ ಹೇಳಿದರು.

           ಪಟ್ಟಣದ ತಾಲೂಕು ಪಂಚಾಯಿತಿ ಆವರಣದ ಸಾಮಥ್ರ್ಯಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿದ್ದ ಭಗವಾನ್ ಶ್ರೀ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ದೇಹ ಅಳಿದರೂ ಆತ್ಮ ಅಳಿಯದು ಅಳಿದು ಹೋಗದ ಆತ್ಮಕ್ಕೆ ಸಮಾನವಾದದ್ದು ವಿಶ್ವಕರ್ಮ ಸಮಾಜ. ಸೃಷ್ಟಿಯ ನಿರ್ವಹಣೆಗೆ ವಿಶ್ವಕರ್ಮ ಸಮಾಜ ಉಗಮವಾಗಿದೆ. ಇಂತಹ ಸಮಾಜ ರಾಜಕೀಯ ಆರ್ಥಿಕ ಹಾಗೂ ಸಾಮಾಜಿಕವಾಗಿ ತುಳಿಯಲ್ಪಟ್ಟಿದೆ ಎನ್ನುವುದೇ ವಿಷಾಧ. ಸಮಾಜದ ಅಭಿವೃದ್ದಿಗೆ ಸರ್ಕಾರದ ತಾರತಮ್ಯ ನೀತಿ ಸಲ್ಲದು ಎಂದರು.

           ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆಯಿರುವ ವಿಶ್ವಕರ್ಮ ಸಮಾಜದ ಬೇಡಿಕೆಗಳಲ್ಲಿ ಕೆಲವೇ ಕೆಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಸಫಲವಾಗಿದೆಯೇ ಹೊರತು ಬಹು ಬೇಡಿಕೆಗಳನ್ನು ನೆನೆಗುದಿಗೆ ಬಿಟ್ಟಿದೆ. ಸರ್ಕಾರದ ಗಮನ ಸೆಳೆಯುವಲ್ಲಿ ಸಮಾಜವೂ ವಿಫಲವಾಗಿದೆ ಎಂದರು.

          ಜಿಪಂ ಸದಸ್ಯ ಡಾ.ಮಂಜುನಾಥ್ ಉತ್ತಂಗಿ ಮಾತನಾಡಿ. ಸರಳ ಹಾಗೂ ನಂಬಿಕೆಗೆ ಅರ್ಹವಾದ ಸಮಾಜ ವಿಶ್ವಕರ್ಮ ಸಮಾಜವಾಗಿದೆ. ಚಾಣಾಕ್ಷತನಕ್ಕೂ ಹೆಸರಾದ ಸಮಾಜ ಕಾಯಕದಲ್ಲಿ ಎಲ್ಲರನ್ನೂ ಮೀರಿಸುವಂತವರಾಗಿರುವ ಇವರು ಇತರೆ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

          ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಸಂತೋಷ್ ಕುಮಾರ್, ಉಪಾಧ್ಯಕ್ಷ ಮಂಜ್ಯಾನಾಯ್ಕ್, ಸಮಾಜದ ಗೌರವಾಧ್ಯಕ್ಷ ಮಾನಪ್ಪ ಆರ್.ಬಡಿಗೇರ್, ತಾಲೂಕು ಅಧ್ಯಕ್ಷ ಬಿ.ಚನ್ನಪ್ಪಾಚಾರ್, ಉಪನ್ಯಾಸಕ ಬಿ.ರುದ್ರೇಶ್, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ನಿಚ್ವವ್ವನಹಳ್ಳಿ ಭೀಮಪ್ಪ, ಉಪ ತಹಸಿಲ್ದಾರ್ ಪಾತೀಮಾ, ಶಿಕ್ಷಕಿ ರುದ್ರಮ್ಮ, ಮಹೇಶ್ವರಾಚಾರ್, ವಿಜಯ್ ಗುಳೇದಗುಡ್ಡ, ರುದ್ರಾಚಾರ್, ಪಮ್ಮಾರ್, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಬಿ.ಹೆಚ್.ಚಂದ್ರಪ್ಪ, ಪಂಪಾಚಾರ್, ರಮೇಶಾಚಾರ್ ಹಾಗೂ ಇತರರು ಉಪಸ್ಥಿತರಿದ್ದರು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link