ಸ್ವಾವಲಂಬನೆಯ ಬದುಕಿಗೆ ಬ್ಯಾಂಕ್ ಖಾತೆ ಅತ್ಯವಶ್ಯ: ವ್ಯವಸ್ಥಾಪಕ ಯರ್ರಿಸ್ವಾಮಿ

ಹರಪನಹಳ್ಳಿ:

      ಸ್ವಾವಲಂಬನೆ ಜೀವನ ಸಾಗಿಸಲು ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಿದಲ್ಲಿ ಸ್ವಾವಲಂಭನೆಯ ಬದುಕು ಸಾಗಿಸಲು ಸಾದ್ಯ. ಎಂದು ದಾವಣಗೆರೆ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎನ್.ಟಿ.ಯರ್ರಿಸ್ವಾಮಿ ಹೇಳಿದರು.

      ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ದಾವಣಗೆರೆ ಲೀಡ್ ಬ್ಯಾಂಕ್ ಹಾಗೂ ಹರಪನಹಳ್ಳಿ ಕೆನರಾ ಬ್ಯಾಂಕ್ ಇವರ ಆಶ್ರಯದಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಿಳಿವಳಿಕೆ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ಬ್ಯಾಂಕ್ ವ್ಯವಹಾರಗಳು ಮೊದಲಿಗಿಂತ ಈಗ ಸುಲಭ ಮತ್ತು ಸರಳವಾಗಿವೆ. ಬಡವರು, ರೈತರಿಗೆ ಸಂಕಷ್ಟಗಳಿಗೆ ಸ್ಪಂದಿಸಲು ಜನರ ಬಳಿಯೇ ಬ್ಯಾಂಕಗಳು ಬರುತ್ತಿವೆ. ಸರ್ಕಾರದಿಂದ ಹೇಗಾದರೂ ಸಾಲಮನ್ನಾ ಮಾಡುತ್ತಾರೆ ಎಂದು ದುಡಿಮೆ ಮರೆತು ಕೈಕಟ್ಟಿ ಕೂರದೆ ಸ್ವಾವಲಂಭನೆಯ ಬದುಕು ನಿಮ್ಮದಾಗಿಸಿಕೊಳ್ಳಿ. ನಿಮ್ಮ ದುಡಿಮೆ ನಂಬಿ ಜೀವನ ಮಾಡುವುದನ್ನು ಕಲಿಯಿರಿ. ನಿಮ್ಮ ಸಹಾಯಕ್ಕೆ ಬ್ಯಾಂಕ್ ನಿಮ್ಮೊಂದಿಗಿದೆ ಎಂದರು.

      ಬೆಂಗಳೂರು ರಿಸರ್ವ್ ಬ್ಯಾಂಕ್ ವ್ಯವಸ್ಥಾಪಕ ಆನಂದ್ ನಿಮ್ ಮಾತನಾಡಿ, ಬೆಳೆ ವಿಮೆ ಮಾಡುವುದರಿಂದ ರೈತರು ಅನೇಕ ಪ್ರಕೃತಿ ವಿಕೋಪದಡಿ ಸೌಲಭ್ಯ ಪಡೆಯಬಹುದು. ಗ್ರಾಮಕ್ಕೆ ಪ್ರತ್ಯೇಕ ಬ್ಯಾಂಕ್ ಸೌಲಭ್ಯ ಕಲ್ಪಿಸಬೇಕು ಎಂದು ಹುಲಿಕಟ್ಟಿ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮುಂದಿನ ಲೀಡ್ ಬ್ಯಾಂಕ್ ಸಭೆಯಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.

      ಹರಪನಹಳ್ಳಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಜೇಶ್ ಜೇಸವಾಲ್ ಮಾತನಾಡಿ, ಜನ್-ಧನ ಉಳಿತಾಯ ಖಾತೆ ಹೊಂದಿ ವ್ಯವಹರಿಸುವವರು ಅಕಾಲಿಕವಾಗಿ ಮೃತಪಟ್ಟರೆ ಅಂತವರ ಕುಂಟುಂಬಕ್ಕೆ ಪರಿಹಾರ ನೀಡಲಾಗುವುದು. ಸಾಲವನ್ನು ಸಕಾಲಕ್ಕೆ ಮರುಪಾವತಿಸಿದರೆ ಆರ್ಥಿಕವಾಗಿ ಅಭಿವದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

      ತೋಳಹುಣಿಸೆ ಕೆನಾರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಸ್ವ-ಉದ್ಯೋಗಕ್ಕಾಗಿ ರೈತರು, ಯುವಕರು ಗುಂಪು ರಚಿಸಿಕೊಂಡಲ್ಲಿ ಅವರಿಗೆ ತರಬೇತಿ ನೀಡಲು ಕೆನರಾ-ಬ್ಯಾಂಕ್ ಸಿದ್ಧವಿದೆ ಎಂದರು.

      ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಾಷುಸಾಬ್, ಟಿ.ಓಮೆಪ್ಪ, ಎನ್.ಶಿವಾನಂದಪ್ಪ, ಟಿ.ಹೊಳೆಯಪ್ಪ, ಎಚ್.ಹನುಮಂತಪ್ಪ, ಇಂದ್ರಕುಮಾರ, ಪಂಡಿತ್, ಬಿ.ತಿರುಕಪ್ಪ, ಟಿ.ಮಹಾದೇವಪ್ಪ, ಡಿ.ಬಸವರಾಜಪ್ಪ ಹಾಗೂ ಗ್ರಾಮಸ್ಥರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link