ಹಗರಿ ಸಂಶೋಧನಾ ಕೇಂದ್ರದಲ್ಲಿ ಬಿಎಸ್ಸಿ ಕೃಷಿ ಪದವಿ ಮಹಾ ಕಾಲೇಜು ಆದ್ಯತೆ ಮೇರೆಗೆ ಪ್ರಾರಂಭ: ಸಚಿವ ಶಿವಶಂಕರ ರೆಡ್ಡಿ

 ಬಳ್ಳಾರಿ:

      ಹಗರಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಬಿಎಸ್‍ಸಿ ಕೃಷಿ ಪದವಿ ಮಹಾ ಕಾಲೇಜನ್ನು ಆದ್ಯತೆ ಮೇರೆಗೆ ಪ್ರಾರಂಭಿಸಲಾಗುವುದು ಎಂದು ಕೃಷಿ ಸಚಿವರಾದ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದರು.

      ಹಗರಿಯ ಕೃಷಿ ಸಂಶೋಧನಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಹೊಸ ಕಟ್ಟಡದ ವೀಕ್ಷಿಸಿ ಅವರು ಮಾತನಾಡಿದರು.
ಕಿರು ಧಾನ್ಯಗಳಾದ ನವಣೆ, ರಾಗಿ, ಸಾಮೆ ಇತ್ಯಾದಿಗಳ ಬಗ್ಗೆ ರಚನಾತ್ಮಕವಾದ ಸಂಶೋಧನೆಯ ಕುರಿತು ಇನ್ನೂ ಆಳವಾದ ಅಧ್ಯಯನ ಮಾಡಬೇಕೆಂದು ಈ ಸಂದರ್ಭದಲ್ಲಿ ಅವರು ಕೃಷಿ ಅಧಿಕಾರಿಗಳಿಗೆ ಹೇಳಿದರು.

      ಬೆಳೆಗಳ ಬಗ್ಗೆ ಹಗರಿ ನದಿಗೆ ಈ ಭಾಗದ ರೈತ ಮುಖಂಡರ ಬೇಡಿಕೆಯಾದ ಸಬ್ ಸರ್ಫೆಸ್ ಡ್ಯಾಂನ್ನು ತಾಂತ್ರಿಕವಾಗಿ ಪರಿಶೀಲಿಸಿ ಅದನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದ ಸಚಿವ ಶಿವಶಂಕರರೆಡ್ಡಿ ಅವರು, ರೈತರ ಹೊಲಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಕೃಷಿ ಹೊಂಡಗಳಲ್ಲಿ ಶೇಖರಣೆಯಾಗಿರುವ ನೀರನ್ನು ಬೆಳೆಗಳ ಸಂದಿಗ್ದ ಹಂತಗಳಲ್ಲಿ ಒದಗಿಸುವುದರ ಜೊತೆಗೆ  ಕೇಂದ್ರದಲ್ಲಿರುವ ಗಿರ್ ಹಸುಗಳ ನಿರ್ವಹಣೆ ಕುರಿತು ಮತ್ತು ಈ ಹವಾಗುಣಕ್ಕೆ ಹೊಂದಿಕೊಳ್ಳುವುದರ ಬಗ್ಗೆ ಚರ್ಚಿಸಿದರು.


      ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಮಾತನಾಡಿ, ಕೃಷಿ ಸಂಶೋಧನಾ ಕೇಂದ್ರದಲ್ಲಿರುವಂತಹ ವಿದ್ಯುತ್ ಶಕ್ತಿ ಕೊರತೆಯನ್ನು ನಿಗಿಸಲು ಒಂದು ವಾರದೊಳಗೆ ನಿರಂತರ ಜ್ಯೋತಿ ಸಂರ್ಪಕ ಕಲ್ಪಿಸುವದಾಗಿ ತಿಳಿಸಿದರು.  ಡಿಪ್ಲೋಮಾ (ಕೃಷಿ) ವಿದ್ಯಾರ್ಥಿನಿಯರ ಬೇಡಿಕೆಯಾದ ಬಾಲಕೀಯರ ವಸತಿ ನಿಲಯವನ್ನು ಸಹ ಮಂಜೂರು ಮಾಡುವುದಾಗಿ ಮತ್ತು ಡಿಪ್ಲೋಮಾ (ಕೃಷಿ) ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗಕ್ಕೆ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಭಾರತಿರೆಡ್ಡಿ, ಜಿಪಂ ಸದಸ್ಯ ಅಲ್ಲಂ ಪ್ರಶಾಂತ್, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಪ್ರೋ. ಮೊಹ್ಮದ್ ಇಬ್ರಾಹಿಮ್ ಮತ್ತಿರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link