ಬೆಂಗಳೂರು:
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಆಂಡ್ ಗ್ಯಾಂಗ್ ಬಂಧನಕ್ಕೊಳಗಾಗಿದ್ದಾರೆ. ಈ ಪ್ರಕರಣದ ಬಗ್ಗೆ ಸಂಗೀತ ನಿರ್ದೇಶಕ ವಿ ಮನೋಹರ್ ಪ್ರತಿಕ್ರಿಯಿಸಿದ್ದಾರೆ.
ಹತ್ಯೆಯಾದ ರೇಣುಕಾಸ್ವಾಮಿ ಮುಗ್ದನಲ್ಲ. ಆತ ವಿಕೃತ ಕಾಮಿ. ದರ್ಶನ್ ವಿರುದ್ಧ ನಾನು ಏನೂ ನೆಗೆಟಿವ್ ಆಗಿ ಮಾತನಾಡಲ್ಲ ಎಂದು ವಿ ಮನೋಹರ್ ಹೇಳಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಪರವಾಗಿ ಈಗಾಗಲೇ ಹಲವು ತಾರೆಯರು ಬಹಿರಂಗ ಹೇಳಿಕೆ ನೀಡಿದ್ದಾರೆ.
ಆ ಸಾಲಿಗೆ ಈಗ ವಿ ಮನೋಹರ್ ಕೂಡಾ ಸೇರಿಕೊಂಡಿದ್ದಾರೆ. ದರ್ಶನ್ ಜೊತೆ ವಿ ಮನೋಹರ್ ಲಾಲಿ ಎನ್ನುವ ಸಿನಿಮಾ ಮಾಡಿದ್ದರು. ಈ ಸಿನಿಮಾದಲ್ಲಿ ದರ್ಶನ್ ಗೆ ಸಂಗೀತ ಗುರುಗಳಾಗಿ ವಿ ಮನೋಹರ್ ಅಭಿನಯಿಸಿದ್ದರು. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಇದೀಗ ದರ್ಶನ್ ಪ್ರಕರಣದ ಬಗ್ಗೆ ವಿ ಮನೋಹರ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಜೊತೆ ನಾನು ಜೊತೆಯಾಗಿ ಕೆಲಸ ಮಾಡಬೇಕಿತ್ತು. ಈ ಬಗ್ಗೆ ಅವರು ಪ್ರಾಮಿಸ್ ಮಾಡಿದ್ದರು. ಆದರೆ ಅಷ್ಟರಲ್ಲಿ ಹೀಗಾಯಿತು ಎಂದು ಮನೋಹರ್ ಹೇಳಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ದರ್ಶನ್ ಪರವಾಗಿ ಬ್ಯಾಟ್ ಮಾಡಿದ್ದಾರೆ. ರೇಣುಕಾಸ್ವಾಮಿ ಹೆಣ್ಣು ಮಕ್ಕಳಿಗೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಹಾಕಿದ್ದ. ಅವನಿಗೇನೋ ಹೆಣ್ಣು ಮಕ್ಕಳ ಶಾಪ ತಟ್ಟಿತು. ಅದಕ್ಕೆ ಹೀಗಾಯಿತು ಎಂದಿದ್ದಾರೆ.