ದಿಲ್ಲಿ ನಾಯಕರ ರೋಡ್‌ ಷೋ ಮತ್ತು ಸಭೆಗಳಿಂದ ಬೇಸತ್ತ ಅಭ್ಯರ್ಥಿಗಳು….!

ಬೆಂಗಳೂರು

     ದೆಹಲಿ ನಾಯಕರ ಸತತ ರೋಡ್ ಷೋ ಮತ್ತು ಸಭೆಗಳಿಂದ ಸುಸ್ತಾಗಿ ಹೋಗಿರುವ ಬಿಜೆಪಿಯ ಬಹುತೇಕ ಅಭ್ಯರ್ಥಿಗಳು ಅಪಸ್ವರ ಎತ್ತಿರುವ ಅಂಶ ಬೆಳಕಿಗೆ ಬಂದಿದೆ.

        ದೆಹಲಿ ನಾಯಕರ ರೋಡ್ ಷೋಗಳು,ಸಭೆಗಳಿಗೆ ನಾವು ಒಂದು ವಾರಕ್ಕಿಂತ ಮುಂಚಿತವಾಗಿ ತಯಾರಿ ನಡೆಸಬೇಕು.ಜನರನ್ನು ಸೇರಿಸಬೇಕು,ಆದರೆ ಈ ಕೆಲಸದಲ್ಲಿ ಮುಳುಗುವುದರಿಂದ ನಮ್ಮ ಕ್ಷೇತ್ರದ ಮತದಾರರನ್ನು ತಲುಪುವುದು ಕಷ್ಟವಾಗುತ್ತಿದೆ ಎಂದು ಹಲವರು ರಾಜ್ಯದ ನಾಯಕರ ಬಳಿ ದೂರಿದ್ದಾರೆ.

    ದಿಲ್ಲಿಯ ನಾಯಕರ ರೋಡ್ ಷೋಗಳಿಂದ ನಮಗೆ ಆಗುವ ಲಾಭ ಅಷ್ಟರಲ್ಲೇ ಇದೆ.ಎಲ್ಲಕ್ಕಿಂತ ಮುಖ್ಯವಾಗಿ ಮತದಾರರು ಯಾರಿಗೆ ಮತ ಹಾಕಬೇಕು ಎಂಬ ವಿಷಯದಲ್ಲಿ ಒಂದು ತೀರ್ಮಾನಕ್ಕೆ ಬಂದಿರುತ್ತಾರೆ.ಅAತವರನ್ನು ರೋಡ್ ಷೋ ಮೂಲಕ ಬದಲಿಸಲು ಸಾಧ್ಯವಿಲ್ಲ.

    ಇದರ ಬದಲು ನಾವೇ ಖುದ್ದಾಗಿ ಅವರನ್ನು ಸಂಪರ್ಕಿಸಿ ಮನ ಸೆಳೆಯುವ ಯತ್ನ ಮಾಡಬೇಕು,ಆದರೆ ದಿಲ್ಲಿ ನಾಯಕರ ರೋಡ್ ಷೋ ಮತ್ತು ಸಾರ್ವಜನಿಕ ಸಭೆಗಳಿಗೆ ಪೂರ್ವಭಾವಿ ತಯಾರಿ ನಡೆಸುವಷ್ಟರಲ್ಲಿ ನಮಗೆ ಸುಸ್ತಾಗಿ ಹೋಗಿರುತ್ತದೆ.

   ಎಲ್ಲಕ್ಕಿಂತ ಮುಖ್ಯವಾಗಿ ದಿಲ್ಲಿಯಿಂದ ಬರುತ್ತಿರುವ ಕೆಲ ಪ್ರಮುಖ ನಾಯಕರನ್ನು ಹೊರತುಪಡಿಸಿದರೆ,ಕ್ಷೇತ್ರಕ್ಕೆ ಬಂದು ಬೀಡು ಬಿಟ್ಟಿರುವ ಉತ್ತರ ಭಾರತದ ಬಹುತೇಕ ನಾಯಕರು ಯಾರೆಂದು ಕ್ಷೇತ್ರದ ಜನರಿಗಿರಲಿ,ನಮಗೇ ಗೊತ್ತಿರುವುದಿಲ್ಲ.

    ಕ್ಷೇತ್ರ ಮತ್ತು ಜನ ಗೊತ್ತಿಲ್ಲದ ನಾಯಕರು ಬಂದು ಚುನಾವಣೆ ಹೇಗೆ ಮಾಡಬೇಕು?ಎಂದು ನಮಗೆ ಪಾಠ ಹೇಳಿಕೊಡುತ್ತಾರೆ.ಅವರ ಮಾತನ್ನು ಅನಿವಾರ್ಯವಾಗಿ ನಾವು ಕೇಳಬಹುದು.ಆದರೆ ಮತದಾರರನ್ನು ಸೆಳೆಯುವ ವಿಷಯದಲ್ಲಿ ನಮಗೆ ತುಂಬ ಅನುಕೂಲವಾಗುತ್ತಿಲ್ಲ.

    ಈ ಹಿಂದೆ ಚುನಾವಣೆ ಘೋಷಣೆಯಾದ ನಂತರ ಪಕ್ಷದ ಪ್ರಭಾವಿ ನಾಯಕರಾದ ಯಡಿಯೂರಪ್ಪ ಅವರು ರಣತಂತ್ರ ಹೆಣೆಯುತ್ತಿದ್ದರು.ರಾಜ್ಯದ ಪ್ರತಿಯೊಂದು ಕ್ಷೇತ್ರದ ವಿವರ ಅವರಿಗೆ ಗೊತ್ತಿತ್ತು.ಹೀಗಾಗಿ ಅವರು ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರಲು ಏನು ಮಾಡಬೇಕಿತ್ತೋ?ಅದನ್ನು ಮಾಡುತ್ತಿದ್ದರು.

    ಆದರೆ ಈಗ ಯಡಿಯೂರಪ್ಪ ಅವರನ್ನು ಚುನಾವಣಾ ರಾಜಕೀಯದಿಂದ ನಿವೃತ್ತಿಗೊಳಿಸಿ,ಮತ ಬೇಟೆಗೆ ಮಾತ್ರ ಕಳಿಸಲಾಗುತ್ತಿದೆ.ಆದರೆ ಹೀಗೆ ಬರುವ ಯಡಿಯೂರಪ್ಪ ಅವರು ಈ ಹಿಂದಿನAತೆ ಕ್ಷೇತ್ರದ ನಾಯಕರ ಮೇಲೆ,ಆ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಕೆಲಸ ಮಾಡುತ್ತಿಲ್ಲ.

    ಇದರ ಪರಿಣಾಮವಾಗಿ ಲಿಂಗಾಯತ ಮತಬ್ಯಾಂಕ್ ಮೇಲೆ ಪ್ರಭಾವವಾಗಿದ್ದು,ಯಡಿಯೂರಪ್ಪ ಅವರ ನಿವೃತ್ತಿ,ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ÷್ಮಣ ಸವದಿ ಅವರ ಅನುಪಸ್ಥಿತಿ ನಮಗೆ ನಲವತ್ತೆöÊದು ಕ್ಷೇತ್ರಗಳಲ್ಲಿ ಉಲ್ಟಾ ಆಗಲಿದೆ.

    ಹೀಗೆ ಉಲ್ಟಾ ಆಗಿರುವ ಮತಗಳ ಮೇಲೆ ಪ್ರಭಾವ ಬೀರುವುದು ಬಹಳ ಮುಖ್ಯ.ಆದರೆ ನಮ್ಮ ಪಕ್ಷದ ನಾಯಕರ ವರ್ತನೆ ಹೇಗಿದೆ ಎಂದರೆ ಈಗಾಗಲೇ ಮತದಾರರು ಬಿಜೆಪಿ ಜತೆ ನಿಂತುಬಿಟ್ಟಿದ್ದಾರೆ.ನಾವು ಅಭ್ಯರ್ಥಿಗಳನ್ನು ನೇಮಕ ಮಾಡಿದ್ದೇವೆ.ಅವರು ಜನರ ಮತಗಳನ್ನು ಹೊತ್ತು ತರಲು ಸಾಧನ ಎಂಬ ಮನ:ಸ್ಥಿತಿ ಕಾಣುತ್ತಿದೆ.

   ಈ ಮಧ್ಯೆ ರೋಡ್ ಷೋ ಮತ್ತು ಸಾರ್ವಜನಿಕ ಸಭೆಗಳ ಮೂಲಕ ಉತ್ತರ ಭಾರತದ ನಾಯಕರು ಮತದಾರರ ಮನ ಒಲಿಸಲು ಅದೆಷ್ಟೇ ಪ್ರಯತ್ನ ಮಾಡಿದರೂ,ಅದು ಮತದಾರರಿಗೆ ಕನೆಕ್ಟ್ ಆಗುತ್ತಿಲ್ಲ ಎಂಬುದು ಬಹುತೇಕ ಬಿಜೆಪಿ ಅಭ್ಯರ್ಥಿಗಳ ವಾದ.

    ಬಿಜೆಪಿ ಪಾಳೆಯದಲ್ಲಿ ಕಂಡು ಬರುತ್ತಿರುವ ಈ ವಾತಾವರಣ ಪ್ರತಿಪಕ್ಷ ಕಾಂಗ್ರೆಸ್ ಪಕ್ಷದಲ್ಲಿ ಕಾಣಿಸಿಕೊಂಡಿದ್ದರೂ,ಅದು ಬಿಜೆಪಿ ಪಾಳೆಯದಲ್ಲಿದ್ದಂತೆ ವಿಕೋಪಕ್ಕೆ ಹೋಗಿಲ್ಲ ಎಂದು ಮೂಲಗಳು ಹೇಳುತ್ತವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap