ಹಬ್ಬಗಳ ಆಶಯಕ್ಕೆ ದಕ್ಕೆ ಬಾರದಂತೆ ಹಬ್ಬ ಆಚರಿಸಿ

 

ದಾವಣಗೆರೆ:

  ಹಬ್ಬಗಳ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಗಣೇಶ ಚತುರ್ಥಿ ಮತ್ತು ಮೋಹರಂ ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಕರೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಗಣೇಶ ಚತುರ್ಥಿ ಮತ್ತು ಮೋಹರಂ ಹಬ್ಬಗಳ ಪ್ರಯುಕ್ತ ಶನಿವಾರ ಸಂಜೆ ಕರೆದಿದ್ದ ನಾಗರೀಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧಾರ್ಮಿಕ ಸಂಸ್ಕøತಿಯನ್ನು ಬಿಂಬಿಸುವ ಹಬ್ಬಗಳನ್ನು ಎಲ್ಲಾ ಧರ್ಮಿಯರು ಸೇರಿ ಸೌಹಾರ್ದಯುತವಾಗಿ ಹಾಗೂ ಅನ್ಯ ಕೋಮಿನವರ ಧಾರ್ಮಿಕ ಭಾವನೆಗೆ ಧಕ್ಕೆ ತರದಂತೆ ಆಚರಣೆ ಮಾಡಬೇಕೆಂದು ಕಿವಿಮಾತು ಹೇಳಿದರು.

  ಗಣೇಶ ಮೂರ್ತಿ ಪ್ರತಿಷ್ಠಾನೆ ಮಾಡುವ ಗಣೇಶ ಮಂಡಳಿಯವರಿಗೆ ಎಲ್ಲಾ ರೀತಿಯ ಅನುಮತಿ ಪಡೆಯಲು ಅನುಕೂಲವಾಗುವಂತೆ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಗಣೇಶ ವಿಸರ್ಜನೆಯನ್ನು ರಾತ್ರಿ 10 ಗಂಟೆಯ ಒಳಗೆ ಕಡ್ಡಾಯಗೊಳಿಸಲಾಗಿದೆ. ಸಕಸ್ಮಾತ್ ಇದಕ್ಕೂ ಲೇಟ್ ಆದರೆ ಕಿಡಿಗೇಡಿಗಳು ಬಂದು ಮೆರವಣಿಗೆಯಲ್ಲಿ ಸೇರಿಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು. ಆದ್ದರಿಂದ ಆದಷ್ಟು ಬೆಳಕಿರುವ ಸಮಯದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದು ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಸುರಕ್ಷತೆಯ ದೃಷ್ಠಿಯಿಂದ ಒಳ್ಳೆಯದು ಎಂದರು.

  ಗಣೇಶ ಹಾಗೂ ಮೊಹರಂ ಹಬ್ಬಗಳ ಆಚರಣೆಯಲ್ಲಿ ಪಾನಮತ್ತರು ಗದ್ದಲ ಮಾಡುವುದು, ಗೊಂದ ಸೃಷ್ಟಿಸುವುದು ಮಾಡಿದರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ಎಲ್ಲಾ ಧರ್ಮಿಯರೂ ಅನ್ಯೋನ್ಯವಾಗಿದ್ದೀರಿ. ಆದರೆ, ಕೆಲವರು ಯಾವುದೋ ಹುರುಪು ಹಬ್ಬದ ಖುಷಿಯನ್ನು ನಿಯಂತ್ರಿಸಲಾಗದೇ ತಪ್ಪು ಎಸಗುತ್ತಾರೆ. ಅದನ್ನು ಅರಿತು ಹಿರಿಯರು ತಪ್ಪನ್ನು ತಿದ್ದಬೇಕಾಗಿದೆ. ಪಿಓಪಿ ಗಣಪತಿಗಳನ್ನು ಬ್ಯಾನ್ ಮಾಡಲಾಗಿದೆ. ಈ ಬಾರಿ ಕೊಡಗು, ಕೇರಳ ನೆರೆ ಹಾವಳಿಯಿಂದ ಸಂತ್ರಸ್ತರಾದವರನ್ನು ಗಮನದಲ್ಲಿಟ್ಟುಕೊಂಡು, ಪಟಾಕಿ ಸಿಡಿ ಸಂಭ್ರಮಾಚರಿಸಿ ಪರಿಸರವನ್ನು ಮತ್ತಷ್ಟು ಹಾಳುಗೆಡವದೇ ಅದೇ ಹಣವನ್ನು ಉಳಿಸಿ ನೆರೆ ಸಂತ್ರಸ್ತರಿಗೆ ನೀಡಿ ಎಂದು ಸಲಹೆ ನೀಡಿದರು.
ಬೆಸ್ಕಾಂ ಅಧಿಕಾರಿ ಮಾತನಾಡಿ, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯದೇ ಪಾಲಿಕೆಯಿಂದ ಅನುಮತಿ ಪಡೆದು ಬೆಸ್ಕಾಂಗೆ ಮನವಿ ಸಲ್ಲಿಸುವಂತೆ ತಿಳಿಸಿದರು.
ಹಿಂದೂ ಮುಖಂಡ ಕೆ.ಬಿ.ಶಂಕರನಾರಾಯಣ ಮಾತನಾಡಿ, ಹಿಂದೂ ಮತ್ತು ಮುಸ್ಲಿಂ ಬಾಂಧವರು ಪರಸ್ಪರ ಸಹಕಾರದೊಂದಿಗೆ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸೋಣ. ಗಣೇಶ ಹಬ್ಬದಲ್ಲಿ ಏರ್ಪಡಿಸುವ ಕಾರ್ಯಕ್ರಮಗಳು ಹಿಂದೂ ಬಾಂಧವರಿಗೆ ಮಾತ್ರವಲ್ಲದೇ ಅನ್ಯ ಕೋಮಿನವರಿಗೂ ಖುಷಿ ತರುವಂತೆ ಇರಲಿ. ಚಿತ್ರದುರ್ಗದಲ್ಲಿ ಆಚರಿಸುವ ಗಣೇಶ ಹಬ್ಬಕ್ಕೆ ಲಕ್ಷಾಂತರ ಜನ ಸೇರುವ ಹಾಗೇ ನಮ್ಮ ಊರಲ್ಲೂ ಗಣೇಶ ಹಬ್ಬ ಆಚರಣೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

  ತಂಜಿಮಿಲ್ ಸಮಿತಿಯ ಅಧ್ಯಕ್ಷ ಸಾಧಿಕ್ ಪೈಲ್ವಾನ್ ಮಾತನಾಡಿ, ಹಬ್ಬದ ಆಚರಣೆ ಸಂದರ್ಭಗಳಲ್ಲಿ ಕೆಲ ಕಿಡಿಗೇಡಿಗಳಿಂದಾಗಿ ಶಾಂತಿಗೆ ಭಂಗವಾಗುತ್ತದೆ. ಹೀಗಾಗಿ ಎರಡೂ ಸಮಾಜಗಳ ಹಿರಿಯರು ಅಂಥವರಿಗೆ ಬುದ್ಧಿವಾದ ಹೇಳಿ, ತಹಬದಿಗೆ ತರುವ ಕೆಲಸ ಮಾಡೋಣ. ಎಲ್ಲರೂ ಸೌಹಾರ್ದಯುತವಾಗಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳೋಣ ಎಂದರು.
ಪಾಲಿಕೆ ಸದಸ್ಯ ಆವರಗೆರೆ ಉಮೇಶ್ ಮಾತನಾಡಿ, ಕೊಡಗು ಮತ್ತು ಕೇರಳ ನೆರೆ ಸಂತ್ರಸ್ತರನ್ನು ಗಮನದಲ್ಲಿರಿಸಿಕೊಂಡು ಈ ಬಾರಿ ತಮ್ಮ ವಾರ್ಡ್‍ನಲ್ಲಿ ಕೂರಿಸುವ ಸುಮಾರು 25 ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಕೇವಲ ಮೂರು ದಿನಗಳ ಮಾತ್ರ ಇರಿಸಿಕೊಂಡು ವಿಸರ್ಜಿಸಲಾಗುತ್ತದೆ. ಅದರಿಂದ ಬರುವ ಎಲ್ಲಾ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಲಾಗುವುದು ಎಂದು ಘೋಷಿಸಿದರು.
ಸಭೆಯಲ್ಲಿ ರಾಮಚಂದ್ರನಾಯಕ್, ಅಮಾನುಲ್ಲಾ ಖಾನ್, ಅಲ್ಲಾವಲ್ಲೀ ಘಾಜೀಖಾನ್, ಟಿಪ್ಪುಸುಲ್ತಾನ್, ಸಿರಾಜ್ ಅಹಮದ್ ಮಾತನಾಡಿದರು.
ಹೆಚ್ಚುವರಿ ಎಸ್‍ಪಿ ಟಿ.ಜೆ. ಉದೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ತ್ರಿಫುಲಾಂಭಾ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link