ಹರಪನಹಳ್ಳಿ
ಶ್ರೀ ವಾದಿರಾಜ ಗುರುಸಾರ್ವಭೌಮರ 317ನೇ ವರ್ಷದ ಆರಾಧನಾ ಮಹೋತ್ಸವ ಅಂಗವಾಗಿ ಪಟ್ಟಣದ ಬಾಸ್ಕರಿಕೇರಿಯ ವಾದಿರಾಜ ಮಠದಲ್ಲಿ ಭಾನುವಾರ ಬೆಳಗ್ಗೆ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಬೆಳಗ್ಗೆ ವಾದಿರಾಜರಿಗೆ ವಿಶೇಷ ಪೂಜೆ, ಬ್ರಾಹ್ಮಣ ಸಮಾಜದ ಮನೆಗಳಲ್ಲಿ ವಾದಿರಾಜರಿಗೆ ಪಾದಪೂಜೆ ಜರುಗಿತು. ಪಲ್ಲಕ್ಕಿ ಮಠಕ್ಕೆ ಮರಳಿದ ನಂತರ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ರಥೋತ್ಸವ ನೆರವೇರಿತು.
ಉಪನ್ಯಾಸ ನೀಡಿದ ಬಮ್ಮಾಗಟ್ಟಿಯ ಹನುಮೇಶ ಆಚಾರ ಮಾತನಾಡಿ, `ಕಷ್ಟ-ಸುಖಗಳು ಮನುಷ್ಯನ ಕರ್ಮದ ಫಲ. ಕಷ್ಟಗಳನ್ನು ಎದುರಿಸುವ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಬೇಕು. ನೆಮ್ಮದಿ ಜೀವನ ಸಾಗಿಸಲು ಪ್ರತಿನಿತ್ಯ ವಾದಿರಾಜರ ಸ್ಮರಣೆ ಮಾಡಬೇಕು’ ಎಂದು ಹೇಳಿದರು.
ಬೆಂಗಳೂರಿನ ರಮಾ ತ್ರಿವಿಕ್ರಮ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಮತ್ತು ಸಂಡೂರಿನ ಸಹನಾ ಶಾಸ್ತ್ರಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ಹೊಸಪೇಟೆಯ ವಿಶ್ವನಾಥ ಆಚಾರ ಅವರಿಂದ ದಾಸವಾಣಿ ನೆರವೇರಿತು.ಮಠದ ಧರ್ಮಕರ್ತರಾದ ಬಿ.ಆರ್.ಶ್ರೀನಿಧಿ, ಸತ್ಯಪ್ರಮೋದ, ಶ್ರೀವತ್ಸ, ಮುಖಂಡರಾದ ತಟ್ಟಿ ವೆಂಕೋಬರಾವ್, ಗುಡಿಬಿಂದು ಮಾಧವ, ಡಾ.ಹರ್ಷಾ, ಡಿ.ಹರೀಶ್, ವೈದ್ಯ ವಾದಿರಾಜ, ಮಂಚಾಲಿ ಗಿರಿಧರ್, ಎ.ಗಿರಿಧರ್, ಡಿ.ನರಸಿಂಹಮೂರ್ತಿ, ಮಂಚಾಲಿ ರಾಮಾಚಾರ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ