ಮಂಗಳೂರು:
ಬಿಜೆಪಿ ಮತ್ತು ಹಿಂದುತ್ವ ಶಕ್ತಿಗಳ ಬಲವನ್ನು ತನ್ನ ಭದ್ರಕೋಟೆಯಲ್ಲಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಹರಿಪ್ರಸಾದ್‌ಗೆ ಉಸ್ತುವಾರಿ ನೀಡಲು ಇದು ಸರಿಯಾದ ಸಮಯ ಎಂದು ಪಕ್ಷದ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
68 ವರ್ಷ ವಯಸ್ಸಿನ ಹರಿಪ್ರಸಾದ್ ಪ್ರಾಬಲ್ಯ ಹೊಂದಿರುವ ಬಿಲ್ಲವ ಸಮುದಾಯದಿಂದ ಬಂದವರು. ಹಿರಿಯ ಕಾಂಗ್ರೆಸ್ ನಾಯಕ ಬಿಲ್ಲವರೂ ಆದ ಬಿ ಜನಾರ್ದನ ಪೂಜಾರಿ ಅವರು ರಾಜಕೀಯದಿಂದ ಹಿಂದೆ ಸರಿದ ನಂತರ, ಆ ಪ್ರದೇಶದಲ್ಲಿ ಬಲ ತುಂಬಲು ಯಾರೂ ಇರಲಿಲ್ಲ.
ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಹರಿಪ್ರಸಾದ್‌ಗೆ ಅಧಿಕಾರ ನೀಡುವುದನ್ನು ಬಿಟ್ಟು ಕಾಂಗ್ರೆಸ್ ಗೆ ಬೇರೆ ದಾರಿಯಿಲ್ಲ ಎಂದು ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ, ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸಲು ಬೇರೆ ಯಾರೂ ಕಾಂಗ್ರೆಸ್ ನಾಯಕರಿಲ್ಲ.
ಹರಿಪ್ರಸಾದ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡುವ ಮೂಲಕ ಪಕ್ಷವು ಬಿಲ್ಲವರನ್ನು ಮರಳಿ ಸೆಳೆಯಬಹುದು ಎಂದು ಹಲವರು ಭಾವಿಸಿದ್ದಾರೆ. ಇದು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಠಿಣ ಹೋರಾಟ ನೀಡಲು ಕಾಂಗ್ರೆಸ್ ಗೆ ನೆರವಾಗಲಿದೆ.
2019 ರಲ್ಲಿ, ಜನಾರ್ದನ ಪೂಜಾರಿ ಅವರ ಸತತ ಸೋಲಿನ ನಂತರ, ಪಕ್ಷವು ಬಂಟ್ ಸಮುದಾಯದ ಮಿಥುನ್ ರೈ ಅವರನ್ನು ಕಣಕ್ಕಿಳಿಸಿತು, ಆದರೆ ಅವರು 2.73 ಲಕ್ಷ ಮತಗಳ ಅಂತರದಿಂದ ಸೋತರು. ಬಂಟ್ ಪ್ರಯೋಗ ವಿಫಲವಾದ ಕಾರಣ, ಪಕ್ಷವು ಪ್ರಬಲ ಪರ್ಯಾಯ ನಾಯಕನನ್ನು ಹುಡುಕುವ ಅನಿವಾರ್ಯತೆಗೆ ಸಿಲುಕಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ