ರಾಣೇಬೆನ್ನೂರ:
ಸ್ಥಳೀಯ ನಗರಸಭೆ ಮತದಾನದ ಹಿನ್ನಲೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ಮತ್ತು ಕಾರ್ಯಕರ್ತರ ಮೇಲೆ ಸಚಿವ ಆರ್ ಶಂಕರ ಹಾಗೂ ಕೆ.ಪಿ.ಜೆ.ಪಿ ಬೆಂಬಲಿಗರು ಹಾಗೂ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಸಜ್ಜನ ಆಗ್ರಹಿಸಿದರು.
ನಗರದ ಓಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಅಭ್ಯರ್ಥಿ ಪಕ್ಕೀರಪ್ಪ ತುಮ್ಮಿನಕಟ್ಟಿಯವರ ಆರೋಗ್ಯ ವಿಚಾರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಆತನ ಪುತ್ರ ಕುಮಾರ ತುಮ್ಮಿನಕಟ್ಟಿ ಮೇಲೆಯೂ ನಡೆಸಿರುವ ಹಲ್ಲೆ ಗಂಭೀರ ಸ್ವರೂಪದ್ದಾಗಿದ್ದು, ಈ ಆರೋಪಿಗಳೂ ಎಷ್ಠೇ ಪ್ರಭಾವಿತರಾದರೂ ಪೊಲೀಸರು ಅವರನ್ನು ಬಂಧಿಸಿ ಶಿಕ್ಷಿಸಬೇಕು ಎಂದರು.
ಇಂತಹ ಗೂಂಡಾ ಪೃವೃತ್ತಿಯನ್ನು ಕೈ ಬಿಡಬೇಕು. ಇದು ಸಚಿವರಿಗೆ ಗೌರವ ತರುವಂತಹದ್ದಲ್ಲ. ಗಾಯಾಳುಗಳಿಗೆ ರಕ್ಷಣೆ ನೀಡಬೇಕು. ಮತ್ತೆ ಈ ತರಹದ ಪ್ರಕರಣಗಳು ಮರುಕಳಿಸಿದರೆ ಜಿಲ್ಲಾಧ್ಯಂತ ಹೋರಾಟ ಮಾಡಲಾಗುವುದು ಎಂದರು. ಡಾ.ಬಸವರಾಜ ಕೇಲಗಾರ, ಸಿದ್ದರಾಜ ಕಲಕೋಟಿ, ಚೋಳಪ್ಪ ಕಸವಳ, ಶಿವಾನಂದ ಸಾಲಗೇರಿ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ