ಹಳೆ ಪುರಸಭೆ ಕಟ್ಟಡ ಸಾರ್ವಜನಿಕರ ಕುಂದುಕೊರತೆ ಕಛೇರಿ ಇಲ್ಲವೇ ಸಾರ್ವಜನಿಕ ಗ್ರಂಥಾಲಯಕ್ಕೆ ಮೀಸಲಿಡುವಂತೆ ಆಗ್ರಹ

ಬ್ಯಾಡಗಿ:

            ಸ್ವಾತಂತ್ರ್ಯಕ್ಕೂ ಮುನ್ನ ಪಟ್ಟಣದಲ್ಲಿ ನಿರ್ಮಿಸಲಾದ ಹಳೆ ಪುರಸಭೆ ಕಟ್ಟಡದಲ್ಲಿ ಬಾಡಿಗೆಯಿದ್ದ ಕೆವಿಜಿ ಬ್ಯಾಂಕ್ ಸ್ಥಳಾಂತರವಾದ ಹಿನ್ನಲೆಯಲ್ಲಿ ಮತ್ತೆ ಖಾಸಗಿ ಸಂಸ್ಥೆಗೆ ಬಾಡಿಗೆ ನೀಡದೇ ಸಾರ್ವಜನಿಕರ ಕುಂದುಕೊರತೆ ಕಛೇರಿ ಇಲ್ಲವೇ ಸಾರ್ವಜನಿಕ ಗ್ರಂಥಾಲಯಕ್ಕೆ ಮೀಸಲಿಡುವಂತೆ ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ ಆಗ್ರಹಿಸಿದ ಘಟನೆಗುರುವಾರಜರುಗಿದಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು..
          ಸಭೆಯಲ್ಲಿ ಪುರಸಭೆಅಧಿಕಾರಿಎಲ್.ಶಂಕರ್ ಹಳೆ ಪುರಸಭೆಕಟ್ಟಡವನ್ನು ಸ್ಕೈಆರ್ಗನೈಜೇಶನ್ ಸಂಸ್ಥೆ ಬಾಡಿಗೆ ಪಡೆಯಲು ಮನವಿ ಸಲ್ಲಿಸಿದ್ದು ಅನುಮೋದನೆಗೆ ಸದಸ್ಯರಅನುಮತಿ ಕೇಳುತ್ತಿದ್ದಂತೆ ಎದ್ದು ನಿಂತುಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಮುರಿಗೆಪ್ಪ ಶೆಟ್ಟರ್, ಬ್ರೀಟಿಷರಕಾಲದಲ್ಲಿ ನಿರ್ಮಾಣವಾದ ಮತ್ತು ಪಟ್ಟಣಕ್ಕೆ ಕಳಶದಂತಿರುವ ಹಳೆ ಪುರಸಭೆಕಟ್ಟಡವನ್ನು ಈ ಹಿಂದೆ ಹಲವಾರು ವರ್ಷಗಳಿಂದ ಕೆವಿಜಿ ಬ್ಯಾಂಕ್‍ಗೆ ಬಾಡಿಗೆ ನೀಡಲಾಗಿತ್ತು. ಆದರೆಅದು ಸೂಕ್ತ ನಿರ್ವಹಣೆಇಲ್ಲದೇಅದುತನ್ನಗೌರವ ಕಳೆದುಕೊಳ್ಳುತ್ತ ಸಾಗಿದೆ.ಇದೀಗ ಮತ್ತೆಅದನ್ನು ಬಾಡಿಗೆ ನೀಡುವುದಕ್ಕೆ ನನ್ನತೀವ್ರ ವಿರೋಧವಿದೆಎಂದರಲ್ಲದೇಬದಲಾಗಿಅಲ್ಲಿಒಂದುಗ್ರಂಥಾಲಯಇಲ್ಲವೇ ಸಾರ್ವಜನಿಕಕುಂದು ಕೊರತೆಗಳ ಕಛೇರಿ ಮಾಡಿ ಪುರಸಭೆ ಮುಖ್ಯಾಧಿಕಾರಿ,ಅಧ್ಯಕ್ಷ, ಸದಸ್ಯರು, ಹಾಗೂ ಶಾಸಕರುಒಂದೊಂದು ದಿನ ಅಲ್ಲಿ ಕುಳಿತು ಸಮಸ್ಯೆಗಳನ್ನು ಆಲಿಸುವಂತಾಗಲಿ ಎಂದರು..
           ಇದಕ್ಕೆ ದನಿಗೂಡಿಸಿ ಮಾತನಾಡಿದ ಮತ್ತೊಬ್ಬ ಸದಸ್ಯ ಮುನಾಫಸಾಬ ಎರೇಶಿಮಿ ಎಲ್ಲವನ್ನು ಲಾಭದದೃಷ್ಟಿಯಿಂದ ನೋಡುವುದು ಸರಿಯಲ್ಲಬದಲಾಗಿಸಾರ್ವಜನಿಕರ ಮತ್ತು ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತಗ್ರಂಥಾಲಯ ಮಾಡಿದ್ದಲ್ಲಿಎಲ್ಲರಿಗೂಉಪಯೋಗವಾಲಿದೆಎಂದರು ಇದಕ್ಕೆ ಪ್ರತಿಕ್ರಿಯೆ ನೀಡಿದ ಪುರಸಭೆಅಧ್ಯಕ್ಷ ಬಸವರಾಜಛತ್ರದ ಈ ಕುರಿತಂತೆ ಸರ್ವಸದಸ್ಯರಒಪ್ಪಿಗೆ ಪಡೆದುತಿರ್ಮಾನ ಮಾಡಲಾಗುವುದುಎಂದರು..
             ನೋಟಿಸ್ ನೀಡಿ:ಪಟ್ಟಣದಲ್ಲಿ ನಡೆಯುತ್ತಿರುವಯುಜಿಡಿಕಾಮಗಾರಿ ಮುಗಿಯುತ್ತಾ ಬಂದಿದೆಆದರೆ ರಸ್ತೆಗಳು ಮಾತ್ರದುರ ಸ್ಥಿಯಾಗಿಲ್ಲ  ಎಲ್ಲಿಯುಜಿಡಿಅಭಿಯಂತರುಸಭೆಗೆ ಹಾಜರಾಗಿಲ್ಲವೇಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಪ್ರಶ್ನಿಸಿದರು ಇದಕ್ಕೆಇಲ್ಲಎಂದುಅಭಿಯಂತರೆ ನಿರ್ಮಲಾ ನಾಯಕ್‍ಉತ್ತರಿಸುತ್ತಲೇಆಕ್ರೋಶಗೊಂಡ ಶಾಸಕ ತಿಂಗಳಿಗೊಮ್ಮೆ ಸಭೆಗೆ ಹಾಜರಾಗಲುಅವರಿಗೇನುಧಾಡಿ..? ಕೂಡಲೇಅವರಿಗೆ ನೋಟಿಸ್‍ಜಾರಿಗೊಳಿಸಿ ಎಂದುಆದೇಶಿಸಿದರು.
        ಸಾರ್ವಜನಿಕ ಶೌಚಾಲಯ ನಿರ್ಮಿಸಿ:ಅಂತರಾಷ್ಟ್ರೀಯ ಮಾರುಕಟ್ಟೆಖ್ಯಾತಿ ಹೊಂದಿರುವ ಬ್ಯಾಡಗಿ ಪಟ್ಟಣದಲ್ಲಿ ಶೌಚಾಲಯಕೊರತೆ ಹೆಚ್ಚಾಗಿದೆ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರು ವೃದ್ಧರು ಮಹಿಳೆಯರು ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದು ಸೂಕ್ತ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ಮೊಬೈಲ್‍ಟಾಯ್ಲೇಟ್ ನಿರ್ಮಿಸುವಂತೆ ಸದಸ್ಯ ಮಂಜುನಾಥ ಭೋವಿ ಆಗ್ರಹಿಸಿದರು..
ಇದಕ್ಕೆ ಪ್ರತಿಕ್ರಿಯೇ ನೀಡಿದಅಭಿಯಂತರೆ ಈ ಹಿಂದೆಇದ್ದ ಕೆಲ ಶೌಚಾಲಯಗಳನು ಸಾರ್ವಜನಿರರಒತ್ತಾಯದಿಂದ ತೆರವುಗೊಳಿಸಲಾಗಿದೆ ಸೂಕ್ತ ಸ್ಥಳ ತೋರಿಸಿದ್ದಲ್ಲ ನಿರ್ಮಿಸಲಾಗುವುದುಎಂದರು.
          ಕಮಿಟ್‍ಮೆಂಟ್‍ಟೆಂಡರ್ ಹಾಕಿಸಬೇಡಿ:ಪಟ್ಟಣದಲ್ಲಿನ ಉದ್ಯಾನಗಳು ಕ್ರೀಡಾಂಗಣದಲ್ಲಿಕಾಂಕ್ರೀಟ್‍ಅಳವಡಿಸಲು ಒಟ್ಟು 51 ಬೆಂಚ್‍ಗಳಿಗೆ 4.50 ಲಕ್ಷಟೆಂಡರ್‍ಕರೆದು 4.49 ಲಕ್ಷಕ್ಕೆಟೆಂಡರ್ ನೀಡಿದ್ದೀರಿ, 4 ಸಾವಿರ ಬೆಲೆಯ ಬೆಂಚಗಳಿಗೆ 8 ಸಾವಿರಕ್ಕೂಅಧಿಕ ಬೆಲೆ ತೆರುವಂತೆ ಮಾಡಿ ಸಾರ್ವಜನಿಕರತೆರಿಗೆ ಹಣ ಲೂಟಿ ಮಾಡಲು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಿರಿ ಈ ಕಮಿಟ್‍ಮೆಂಟ್‍ಟೆಂಡರ್ ಹಾಕಿಸುವುದನ್ನು ನಿಲ್ಲಿಸಿ ಎಂದುಅಭಿಯಂತರೆ ನಿರ್ಮಲಾ ನಾಯಕ್‍ಅವರ ನ್ನು ಸದಸ್ಯ ಬಸವರಾಜ ಹಂಜಿತರಾಟೆಗೆತೆಗದುಕೊಂಡರು..
ಟೆಂಡರ್‍ರದ್ದು:ಇದಕ್ಕೆ ಪ್ರತಿಕ್ರೀಯೆ ನೀಡಲು ಮುಂದಾದಅಭಿಯಂತೆರೆಯನ್ನುತಡೆದ ಹಂಜಿ ನಿಮ್ಮ ಸಬೂಬು ನನಗೆ ಬೇ ಡಟೆಂಡರ್ ಒಳ ಮರ್ಮ ನಮಗೆ ಗೊತ್ತಿದೆ, ಮತ್ತೊಮ್ಮೆಟೆಂಡರ್‍ಕರೆಯಿರಿಅದೇ ಮೊತ್ತದಲ್ಲಿ 110 ಬೆಂಚಗಳನ್ನು ಖರೀದಿ ಮಾಡಬಹುದುಎಂದಾಗಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಟೆಂಡರ್ ರದ್ದುಗೊಳಿಸುವಂತೆ ಸೂಚಿಸಿದರು..
               ರಾಜಿನಾಮೇ ಡ್ರಾಮಾ:ಕಳೆದೈದು ವರ್ಷದಲ್ಲಿ ನಮ್ಮ ವಾರ್ಡನ್ನು ಸಂಪೂರ್ಣಕಡೆಗಣಿಸಲಾಗಿದೆಇದರಿಂದ ಮತ ನೀಡಿದಜನರಿಗೆಉತ್ತರ ನೀಡಲು ಸಾದ್ಯವಾಗುತ್ತಿಲ್ಲ. ನಗರೋತ್ಥಾನಯೋಜನೆಯಲ್ಲಿ 5 ಕೋಟಿಅನುದಾನ ಬಂದರೂಯಾವುದೇಕಾಮಗಾರಿ ನೀಡಿಲ್ಲಈ ತಾರತತ್ಯನೀತಿ ಮೂಲಕ ನನ್ನನ್ನು ಹಣಿಯುವಯತ್ನ ಮಾಡಲಾಗುತ್ತಿದೆನಾನು ನನ್ನ ಸ್ಥಾನಕ್ಕೆ ರಾಜಿಮಾನೇ ನೀಡುತ್ತೇನೆಎಂದಾಗಮಧ್ಯೆ ಪ್ರವೇಶಿಸಿ ಮಾತನಾಡಿದಕಾಂಗ್ರೆಸ್ ಸದಸ್ಯದುರ್ಗೇಶಗೋಣೆಮ್ಮನವರಯಾವಾಗಲುರಾಜಿನಾಮೆ ನೀಡುತ್ತೇನೆಎನ್ನುತ್ತಲೇ ಬಂದಿದ್ದೀರಿಇವತ್ತುದೈರ್ಯ ಮಾಡಿಕೊಟ್ಟು ಬಿಡಿ ಎಂದಾಗ ಸಭೆ ಹಾಸ್ಯದಕಡಲಲ್ಲಿ ತೇಲಿತು..

   ಹಣ ವ್ಯರ್ಥ:ಆಶ್ರಯ ಬಡಾವಣೆಯಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಅನುದಾನದಲ್ಲಿ ಪುರಸಭೆಯಿಂದ ಶೌಚಾಲಯ ನಿರ್ಮಿಸಲಾಗಿದೆ ಆದರೆ ಇಲ್ಲಿಯವರೆಗೂ ಅದಕ್ಕೆ ನೀರಿನ ಸಂಪರ್ಕ ಕಲ್ಪಿಸಿಲ್ಲ  ಇದರಿಂದ ಸಾರ್ವಜನಿಕರತೆರಿಗೆ ಹಣ ವ್ಯರ್ಥವಾಗುತ್ತಿದ್ದು ಕೂಡಲೇ ನೀರಿನ ಸಂಪರ್ಕಕಲ್ಪಿಸುವಂತೆ ಮಂಜುನಾಥ ಭೋವಿ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೇ ನೀಡಿದ ಶಾಸಕ ವಿರೂಪಾಕ್ಷಪ್ಪ ಸ್ಪಷ್ಟಉದ್ದೇಶವಿಲ್ಲದೇಯಾಕೆ ಈ ರೀತಿಯ ಕೆಲಸಕ್ಕೆ ಮುಂದಾಗುತ್ತೀರಿ ಕೇವಲ ಶೌಚಾಲಯ ಕಟ್ಟಿಸಿದರೆ ಸಾಲದುಅದಕ್ಕೆ ಬೇಕಾದ ಮೂಲ ಸೌಲಭ್ಯಕಲ್ಪಿಸುವುದು ಪುರಸಭೆ ಹೊಣೆಕೂಡಲೇಆಗಿರುವ ಸಮಸ್ಯೆಯನ್ನು ಬಗೆಹರಿಸಿ ಎಂದರು.

Recent Articles

spot_img

Related Stories

Share via
Copy link