ಹಾನಗಲ್ಲಿನಲ್ಲಿ ನೂತನವಾಗಿ ಆರಂಬವಾಗುತ್ತಿರುವ ಸನ್ಮತಿ ಸಹಕಾರಿ ಬ್ಯಾಂಕ ಹಾನಗಲ್ಲ ಶಾಖೆ.

ಹಾನಗಲ್ಲ :

    ಮಹಾರಾಷ್ಟ್ರದ ಇಚಲಕರಂಜಿಯ ಸನ್ಮತಿ ಸಹಕಾರಿ ಬ್ಯಾಂಕಿನ ಕರ್ನಾಟಕದ ಮೊದಲ ಶಾಖೆ ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ಉದ್ಘಾಟನೆಗೊಳ್ಳುತ್ತಿದ್ದು, ಈ ಭಾಗದ ಜನತೆಗೆ ಅತ್ಯುತ್ತಮ ಆರ್ಥಿಕ ಸೌಲಭ್ಯ ಒದಗಿಸುವ ಮೂಲಕ ಉತ್ತಮ ಹಣಕಾಸು ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಸನ್ಮತಿ ಸಹಕಾರಿ ಬ್ಯಾಂಕ ಕಾರ್ಯ ನಿರ್ವಹಣಾಧಿಕಾರಿ ಅಶೋಕ ಪಾಟೀಲ ತಿಳಿಸಿದರು.

     ಸೋಮವಾರ ಹಾನಗಲ್ಲಿನ ನೂತನ ಸನ್ಮತಿ ಸಹಕಾರಿ ಬ್ಯಾಂಕ ಶಾಖೆಯಲ್ಲಿ ಸುದ್ಧಿಗೋಷ್ಠಿ ನಡೆಸಿ ವಿವರ ನೀಡಿದ ಅವರು, ಮಹಾರಾಷ್ಟ್ರದ ಇಚಲಕರಂಜಿಯಲ್ಲಿರುವ ಸನ್ಮತಿ ಸಹಕಾರಿ ಬ್ಯಾಂಕ ಮಹರಾಷ್ಟ್ರದಲ್ಲಿ 12 ಶಾಖೆಗಳನ್ನು ಒಳಗೊಂಡಿದೆ. ಇದು ಕರ್ನಾಟಕದಲ್ಲಿ ಮೊಟ್ಟಮೊದಲ ಶಾಖೆಯಾಗಿದೆ. 23 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಮೂಲಕ ಆರ್‍ಬಿಐ ನಿಂದ ಎ ಗ್ರೇಡ ಮಾನ್ಯತೆ ಪಡೆದಿದೆ. 10 ಸಾವಿರ ಸದಸ್ಯರನ್ನೊಳಗೊಂಡು 250 ಕೋಟಿ ಠೇವಣಿ ಹೊಂದಿ, 141 ಕೋಟಿ ಸಾಲ ನೀಡಿದೆ. ಎಸರ್ವ ಬ್ಯಾಂಕಿನ ಸೆಕ್ಯುರಿಟಿ ಠೇವಣಿ 81 ಕೋಟಿ ಇದೆ. 325 ಕೋಟಿ ದುಡಿಯುವ ಬಂಡವಾಳ ಹೊಂದಿದ ಸನ್ಮತಿ ಸಹಕಾರಿ ಬ್ಯಾಂಕ ನೂತನ ಹಾನಗಲ್ಲ ಶಾಖೆಯ ನಾಲ್ಕು ನೌಕರರನ್ನೊಳಗೊಂಡು ಒಟ್ಟು 116 ನೌಕರರು ಸೇವೆಯಲ್ಲಿದ್ದಾರೆ. ಹತ್ತು ವರ್ಷಗಳಿಂದ ನಿರಂತರವಾಗಿ ಶೇ.10 ಡಿವಿಡೆಂಡ ನೀಡುತ್ತಿರುವ ನಮ್ಮ ಬ್ಯಾಂಕ ಪ್ರಸ್ತುತ ವರ್ಷ 1.6 ಕೋಟಿ ಆದಾಯ ತೆರಿಗೆ ನೀಡಿದೆ ಎಂದರು.

       ಕಳೆದ ಎರಡು ವರ್ಷಗಳಿಂದ ಹಾನಗಲ್ಲ ಪಟ್ಟಣದಲ್ಲಿನ ಅರ್ಬನ್ ಕೋ-ಆಪ್ ಬ್ಯಾಂಕ ನಮ್ಮ ಬ್ಯಾಂಕಿಗೆ ವಿಲೀನ ಮಾಡುವ ಪ್ರಕ್ರಿಯೆ ಆರಂಭವಾಗಿತ್ತು. 2018 ಜನೇವರಿಯಲ್ಲಿ ಕೇಂದ್ರದಿಂದ ವಿಲೀನ ಪ್ರಮಾಣ ಪತ್ರ ದೊರೆಯಿತು. 2018 ಮಾರ್ಚನಲ್ಲಿ ಹಾನಗಲ್ಲಿನಲ್ಲಿ ಬ್ಯಾಂಕ್ ತೆರೆಯಲು ಒಪ್ಪಿಗೆ ದೊರೆಯಿತು. ಜುಲೈ 2018 ರಿಂದ ಇಲ್ಲಿ ನಮ್ಮ ಕೆಲಸ ಕಾರ್ಯಗಳನ್ನು ಆರಂಭಿಸಿದ್ದು, ಹಾನಗಲ್ಲಿನ ಗ್ರಾಮಹಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುವ ಭರವಸೆಯೊಂದಿಗೆ ಸೆ.18 ರಂದು ಮಂಗಳವಾರ ಬೆಳಿಗ್ಗೆ 11 ಘಂಟೆಗೆ ನಮ್ಮ ನೂತನ ಕರ್ನಾಟಕದ ಮೊದಲ ಶಾಖೆ ಆರಂಭವಾಗುತ್ತಿದೆ.

      ಮನೆಸಾಲ, ಕೃಷಿ ಸಾಲ, ಮಾರ್ಟಗೇಜ ಸಾಲ, ಬೆಳೆ ಸಾಲ, ವಾಹನಗಳ ಸಾಲ, ಜಾಮೀನು ಸಾಲ, ಕ್ಯಾಶ್ ಕ್ರೆಡಿಟ್, ಭಂಘಾರ ಆಭರಣ ಸಾಲ, ಗ್ಯಾಸ ಸಬ್ಸಿಡಿ ಹಣ ಕಾತೆದಾರರ ಖಾತೆಗೆ ಜಮಾ ಮಾಡುವ ಸೌಲಭ್ಯ ಹೊಂದಿದೆ. ಠೇವುಗಳ ಮೇಲೆ ಒಂದು ಲಕ್ಷದ ವರೆಗೆ ಡಿಪಾಜಿಟ್ ಇನ್ಸುರನ್ಸ ಸೌಲಭ್ಯವಿದೆ. ಸೇಫ್ ಲಾಕರ್ ಸೌಲಬ್ಯವೂ ಇದೆ. ಅಲ್ಲದೆ ಉಳಿತಾಯಗಾರರಿಗೆ ಅತ್ಯುತ್ತಮ ಬಡ್ಡಿ ದರವನ್ನು ನೀಡಲಾಗುತ್ತದೆ. ದಿನದ ಎಲ್ಲ ಅವಧಿಯಲ್ಲಿ ಎಟಿಎಂ ಹಣದ ಕೊರತೆ ಇಲ್ಲದೆ ಗ್ರಾಹಕರಿಗೆ ಸೇವೆ ನೀಡುತ್ತದೆ ಎಂದರು.

      ಈ ಬ್ಯಾಂಕ ಆರಂಭಕ್ಕೆ ಹಾನಗಲ್ಲಿನ ಶಾಸಕರಾದ ಸಿ.ಎಂ.ಉದಾಸಿ, ಕೆಎಲ್‍ಇ ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕ ಎಚ್.ಕೆ.ಪಾಟೀಲ ಅವರ ಸಹಕಾರವನ್ನು ನೆನೆಯುತ್ತೇವೆ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕಲ್ಲಪ್ಪಣ್ಣ ಅವಾಡೆ, ಮಹರಾಷ್ಟ್ರ ಸರಕಾರದ ಮಾಜಿ ಜವಳಿ ಸಚಿವ ಶಾಸಕ ಪ್ರಕಾಶರಾವ್ ಅವಾಡೆ, ಸಂಸದ ಶಿವಕುಮಾರ ಉದಾಸಿ, ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬ್ಯಾಂಕಿನ ಅಧ್ಯಕ್ಷ ಸುನೀಲ ಪಾಟೀಲ, ಉಪಾಧ್ಯಕ್ಷ ಅಜಿತ ಕೋಯಿಕ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಕಾರ್ಯ ನಿರ್ವಾಹಕ ಅಧಿಖಾರಿ ಅಶೋಕ ಪಾಟೀಲ ವಿವರಿಸಿದರು.ಈ ಸಂದರ್ಬದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಆಶೀಫ್ ಮೈಂದರಗಿ, ಅರ್ಬನ್ ಬ್ಯಾಮಕ ಮಾಜಿ ಅಧ್ಯಕ್ಷ ರಮೇಶ ಚಿನ್ನಮುಳಗುಂದ, ಮಾಜಿ ನಿರ್ದೇಕರಾದ ಗಿರೀಶ ದೇಶಪಾಂಡೆ ಗಿರಿರಾಜ ಕಲಾಲ ಸುದ್ದಿಗೋಷ್ಠಿಯಲ್ಲಿದ್ದರು.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link