ಹಾನಗಲ್ಲ :
ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಅಖಿಲ ಭಾರತೀಯ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧೀ ಅವರ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ನೇಮಕಗೊಂಡು ಮೊದಲ ಬಾರಿಗೆ ಹಾನಗಲ್ಲ ನಗರಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಮಾನೆ ಅವರನ್ನು ಕಾಂಗ್ರೇಸ್ ಕಾರ್ಯಕರ್ತರು ಸ್ವಾಗತಿಸಿ ಗೌರಿವಿಸಿದರು.
ಮಂಗಳವಾರ ಪಟ್ಟಣದ ಕನಕದಾಸ ವೃತ್ತದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಾನೆ, ರಾಹುಲ್ ಗಾಂಧೀ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಭರವಸೆ ಇದೆ. ಇದು ನನಗೆ ಹೊಸದಲ್ಲ. ಆದರೆ ಇನ್ನಷ್ಟು ಸಮರ್ಥವಾಗಿ ನಿರ್ವಹಿಸುವ ಕಾರ್ಯ ಕುಶಲತೆ ಇದರಿಂದ ಸಾಧ್ಯವಾಗುತ್ತದೆ. ದೇಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಂಥ ಹಲವು ಜವಾಬ್ದಾರಿ ಈಗಾಗಲೇ ನಿರ್ವಹಿಸಿದ್ದೇನೆ. ರಾಹುಲ್ ಗಾಂಧೀ ಅವರು ಕರೆ ನೀಡಿದ ತಕ್ಷಣ ತೆಲಂಗಾಣಕ್ಕೆ ತೆರಳುವೆ. ಅಲ್ಲಿ ಈ ಬಾರಿ ಒಳ್ಳೆಯ ವಾತಾವರಣವಿದ್ದು ಈ ಬಾರಿ ಅಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುವ ಎಲ್ಲ ಭರವಸೆ ಇದೆ ಎಂದರು.
ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಹಾವೇರಿಯಲ್ಲಿ ಕಾರ್ಯಕರ್ತರು ಸೇರಿ ಚರ್ಚಿಸಿದ್ದಾರೆ. ಹಿರಿಯರ ಸಲಹೆಗಳನ್ನೂ ಸ್ವೀಕರಿಸಿದ್ದೇವೆ. ಮುಂಬರುವ ಸಂಸತ್ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ ಎಂದ ಅವರು, ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಈ ಬಾರಿ ಮತ್ತೆ ಸಲೀಂ ಅಹಮ್ಮದ್ ಅಭ್ಯರ್ಥಿಯಾಗಬೇಕೋ, ಅಥವಾ ಬೇರೆ ಅಭ್ಯರ್ಥಿ ಆಗಬೇಕೋ ಎಂಬ ಬಗ್ಗೆ ಈ ಕ್ಷೇತ್ರದ ಕಾರ್ಯಕರ್ತರು ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ನಿರ್ಣಯಿಸುತ್ತಾರೆ. ಅದಕ್ಕಾಗಿ ಯಾವುದೇ ಅವಸರವಿಲ್ಲ ಎನ್ನುತ್ತ ಪಕ್ಷದ ನಿರ್ದೆಶನದಂತೆ ನಡೆದುಕೊಳ್ಳುವುದು ಮಾತ್ರ ನನ್ನ ಜವಾಬ್ದಾರಿ, ನಾನೇ ಈ ವಿಷಯದಲ್ಲಿ ತಲೆ ತೂರಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಕೆಪಿಸಿದಿ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಹಾನಗಲ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆರ್.ಎಸ್.ಪಾಟೀಲ, ನಗರ ಅಧ್ಯಕ್ಷ ಎಂ.ಕೆ.ಹುಬ್ಬಳ್ಳಿ, ಅಕ್ಕಿಆಲೂರು ಬ್ಲಾಕ್ ಅಧ್ಯಕ್ಷ ಶಿವಯೋಗಿ ಹಿರೇಮಠ, ತಾಪಂ ಅಧ್ಯಕ್ಷೆ ಸಿದ್ದಪ್ಪ ಹಿರಗಪ್ಪನವರ, ಮಾಜಿ ಅಧ್ಯಕ್ಷ ಶಿವಬ¸ಪ್ಪ ಪೂಜಾರ, ನಗರಸಭೆ ಸದಸ್ಯರು ನಾಗಪ್ಪ ಸವದತ್ತಿ, ಶಿವಯೋಗಿ ಹಿರೇಮಠ, ವಿಕಾಸ ನಿಂಗೋಜಿ, ಗುರುರಾಜ ನಿಂಗೋಜಿ, ಸಂತೋಷ ಸುಣಗಾರ, ರವಿ ದೇಶಪಾಂಡೆ, ಯಲ್ಲಪ್ಪ ಕಿತ್ತೂರ, ಪುಟ್ಟಪ್ಪ ನರೇಗಲ್ಲ, ಯಾಸಿರಖಾನ ಪಠಾಣ, ನಾಗರಾಜ ಕರೆಣ್ಣವರ, ವೀರೇಶ ಬೈಲವಾಳ, ರಾಜು ಗುಡಿ, ಕರೀಮಸಾಬ ಹಿತ್ತಲಮನಿ, ಮಾಜಿ ತಾಪಂ ಅಧ್ಯಕ್ಷ ರಾಜೇಂದ್ರ ಬಾರ್ಕಿ, ಶಕೀಲ ಬಾಳೂರ, ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.
ಮೂಜಗು ಭೇಟಿ :
ಸ್ವಾಗತ ಸನ್ಮಾನದ ನಂತರ ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಜಗೆದ್ಗುರು ಗುರು ಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಕಶ್ಮೀರಿ ದರ್ಗಾಕ್ಕೆ ಭೇಟಿ ನೀಡಿದರು. ನಂತರ ಪಟ್ಟಣದ ವಿವಿಧ ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ