ಹಾನಗಲ್ಲಿನಲ್ಲಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಣೆಗೆ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಚಾಲನೆ .

ಹಾನಗಲ್ಲ :

  ಕೇರಳ ಹಾಗೂ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗಾಗಿ ನಾವೆಲ್ಲರೂ ಕೈ ಜೋಡಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ್ ಕರೆ ನೀಡಿದರು.
ಸೋಮವಾರ ಪಟ್ಟಣದಾದ್ಯಂತ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಹೆಚ್ಚು ಮಳೆ ಸುರಿಯುತ್ತಿದ್ದು, ಹಲವು ರಾಜ್ಯಗಳಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಭೂ ಕುಸಿತ, ಪ್ರವಾಹ ಪರಿಸ್ಥಿತಿಯಿಂದ ನಿರಾಶ್ರಿತರಾಗಿದ್ದಾರೆ.

  ಮನೆಗಳನ್ನೂ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ನೆರವು ನೀಡಿ ಮಾನವೀಯತೆ ಮೆರೆಯಬೇಕಿದೆ. ಈಗಾಗಲೇ ಪ್ರದಾನಮಂತ್ರಿಗಳು, ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು, ಪರಿಹಾರೋಪಾಯ ಕೈಗೊಂಡಿದ್ದಾರೆ. ಸರ್ಕಾರದೊಂದಿಗೆ ಪಕ್ಷಾತೀತವಾಗಿ ಸಾರ್ವಜನಿಕರೂ ಮನೆ-ಮನೆಗಳಿಗೆ ತೆರಳಿ ಹಣ, ಬಟ್ಟೆ, ಔಷಧ, ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಕಳಿಸುವ ವ್ಯವಸ್ಥೆ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.

  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಸಂಘಟನೆಯ ಅಧ್ಯಕ್ಷ ನಿಯಾಜ ಶೇಖ ನೇತೃತ್ವದಲ್ಲಿ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಯಲ್ಲಪ್ಪ ನಿಂಬಣ್ಣನವರ, ರವಿ ಚಿಕ್ಕೇರಿ, ವಿಜಯಕುಮಾರ ದೊಡ್ಡಮನಿ, ಉಮೇಶ ದಾನಪ್ಪನವರ, ಕೆ.ಎಲ್.ದೇಶಪಾಂಡೆ, ರಜಾಕ ದೊಡ್ಡಮನಿ, ನಂದೀಶ ಗೋದಿ, ಶಿವು ತೊರವಂದ, ಬಸವರಾಜ ಡುಮ್ಮಣ್ಣನವರ, ರಮೇಶ ಹರಿಜನ, ಮಹಬೂಬಲಿ ಹುಡೇದ, ಜಾವೀದ ಯಲಿಗಾರ, ಖಂಡೋಜಿ ಭೋಸಲೆ, ಶಿವು ಭದ್ರಾವತಿ ಇತರರು ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link