ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿರುವ ರಾಜ್ಯಾಧ್ಯಕ್ಷ ಸೋಮಶೇಖರ ಕೋತಂಬರಿ

ಹಾನಗಲ್ಲ :

            ಪ್ರತ್ಯೇಕ ಉತ್ತರ ಕರ್ನಾಟಕಕ್ಕಾಗಿ ಹೋರಾಟ ನಿಲ್ಲದು. ಸರಕಾರ ದ್ವಂದ್ವ ನೀತಿಯ ಮೂಲಕ ಜನತೆಗೆ ದಾರಿ ತಪ್ಪಿಸುತ್ತಿದೆ. ಮಲತಾಯಿ ಧೋರಣೆ ಮೂಲಕ ನಮ್ಮನ್ನು ಕಂಗೆಡಿಸಿದೆ ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ, ನ್ಯಾಯವಾದಿ ಸೋಮಶೇಖರ ಕೋತಂಬರಿ ಪ್ರಕಟಿಸಿದರು.

              ರವಿವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠೀ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಧ್ಯತೆ ನೀಡುವ ಘೋಷಣೆ ಮಾಡಿ, ಇತ್ತ ಅಭಿವೃದ್ಧಿ ನಿರ್ಣಯಗಳೂ ಇಲ್ಲ. ಅತ್ತ ಪ್ರತ್ಯೇಕತೆಗೆ ಮನಸ್ಸು ಮಾಡುತ್ತಿಲ್ಲ. ಮಲತಾಯಿ ಧೋರಣೆಯೇ ಇವರ ಮೂಲ ಉದ್ದೇಶವಾಗಿದೆ. ಉದ್ಯೋಗಾಧಾರಿತ ಶಿಕ್ಷಣ, ನೀರಾವರಿ, ಹಸಿರು ಕ್ರಾಂತಿ, ಐಟಿ ಬೃಹತ್ ಕೈಗಾರಿಕೆಗಳು ಮುಂತಾದವುಗಳನ್ನು ಸ್ಥಾಪಿಸುವಲ್ಲಿ ಉತ್ತರ ಕರ್ನಾಟಕಕ್ಕೆ ಸಂಪೂರ್ಣವಾಗಿ ಹಿನ್ನಡೆಯಾಗುತ್ತಿದೆ. ನಂಜುಂಡಪ್ಪ ವರದಿ ಅನುಷ್ಠಾನ ಕಾದದ ಕಡಲೆಯಾಗಿದೆ ಎಂದರು.

               ಉತ್ತರ ಕರ್ನಾಟಕದ ಶಾಸಕರಿಗೆ ಆಡಳಿತಾತ್ಮಕವಾಗಿ ಶಕ್ತಿ ನೀಡುತ್ತಿಲ್ಲ. ಬೆಳಗಾವಿಯ ಸುವರ್ಣಸೌಧ ಆಟಕ್ಕುಂಟು ಲೆಕ್ಕಕ್ಕಿಲ್ಲ. ನೂತನ ಜಿಲ್ಲೆ ಹಾಗೂ ತಾಲೂಕು ವಿಂಗಡನೆಯ ವಿಷಯದಲ್ಲಿಯೂ ಮೀನ ಮೇಷ ಎಣಿಸುತ್ತಿದೆ. ಉತ್ತರ ಕರ್ನಾಟಕ ಪ್ರತ್ಯೇಕವಾಗಿ ಅಭಿವೃದ್ಧಿ ಹೊಂಧಲು ಎಲ್ಲ ರೀತಿಯ ಶಕ್ತಿ ಸಾಮಥ್ರ್ಯ ಹೊಂದಿದೆ. ಆದರೆ ಈಗಿರುವ ಸರಕಾರ ಹೋರಾಟವನ್ನು ಹತ್ತಿಕ್ಕಿ ಪ್ರತ್ಯೇಕತೆಯನ್ನು ತಪ್ಪಿಸಲು ಮಾಡುವ ಯತ್ನಗಳು ಫಲಿಸುವುದಿಲ್ಲ ಎಂದು ಎಚ್ಚರಿಸಿದರು.

               ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಹೋರಾಟದ ಸಂಘಟನೆಗಳ ಪ್ರಮುಖರನ್ನು ಕರೆದು ಸಭೆ ನಡೆಸಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಢುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭರವಸೆ ಸುಳ್ಳಾಗಿದೆ. ಉತ್ತರ ಕರ್ನಾಟಕದ ಕೆಲವೆಡೆ ಜೀವವಿಲ್ಲದ ಕೆಲವು ಇಲಾಖೆಗಳನ್ನು ನೀಢಿ ಕಣ್ಣೊರೆಸುವ ತಂತ್ರ ನಡೆಸಿದರೆ ಅದು ಫಲ ನೀಡುವುದಿಲ್ಲ. ಈಗ ಪ್ರತ್ಯೇಕ ರಾಜ್ಯದ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ. ಉತ್ತರ ಕರ್ನಾಟಕದ ಸಂಘಟನೆಗಾಗಿ ಹಾಗೂ ಹೋರಾಟದ ಮಾರ್ಗದರ್ಶನಕ್ಕಾಗಿ 9986988627 ಈ ದೂರವಾಣಿಗೆ ಸಂಪರ್ಕಿಸುವಂತೆ ಸೋಮಶೇಖರ ಕೋತಂಬರಿ ಮನವಿ ಮಾಡಿದರು.

                ರೈತ ನಾಯಕ ಅಡಿವೆಪ್ಪ ಆಲದಕಟ್ಟಿ, ಮಾತನಾಡಿ, ಅಕ್ಕಿಆಲೂರಿನಲ್ಲಿದ್ದ ಕೃಷಿ ಕಾಲೇಜನ್ನು ಎಲ್ಲಿ ಒಯ್ದರೋ ಗೊತ್ತಾತಗಲಿಲ್ಲ. ಜಿಲ್ಲೆಗೆ ಮೆಡಿಕಲ್ ಕಾಲೇಜ ಬರಲಿಲ್ಲ. ಡಿಸಿಸಿ ಬ್ಯಾಂಕ್, ಹಾಲೂ ಒಕ್ಕೂಟ ಹೀಗೆ ಉತ್ತರ ಕರ್ನಾಟಕ್ ಅಭಿವೃದ್ಧಿಗೆ ಎಲ್ಲಾ ಹಂತದಲ್ಲೂ ಅನ್ಯಾಯ ಮಾಡುತ್ತಿರುವ ಈ ಸರಕಾರದ ಧೋರಣೆ ಪ್ರತಿಭಟಿಸುತ್ತೇವೆ. ಪ್ರತ್ಯೇಕ ಉತ್ತರಕರ್ನಾಟಕವೇ ನಮ್ಮ ಹೋರಾಟದ ಅಚಲ ನಿರ್ಧಾರ ಎಂದರು.

                  ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ಸಮಿತಿ ಕಾರ್ಯದರ್ಶಿ ಜಗಧೀಶ ಕೊಂಡೋಜಿ, ಸದಸ್ಯ ಎಂ.ಎಚ್.ತೊಗರಳ್ಳಿ, ಮಲ್ಲೇಶಪ್ಪ ಪರಪ್ಪನವರ. ಎಂ.ಎಂ.ಬಡಗಿ ಸುದ್ಧಿಗೋಷ್ಠಿಯಲ್ಲಿದ್ದರು.

Recent Articles

spot_img

Related Stories

Share via
Copy link