ಹಾನಗಲ್ಲ :
ಹಾನಗಲ್ಲ ಪುರಸಭೆಯ 23 ವಾರ್ಡುಗಳಿಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಶನಿವಾರ ಕಾಂಗ್ರೇಸ್ಸಿನ 25, ಬಿಜೆಪಿಯ 2, ಜೆಡಿಎಸ್‍ನ 7 ಹಾಗೂ ಪಕ್ಷೇತರ 7 ಅಭ್ಯರ್ಥಿಗಳು ಸೇರಿದಂತೆ ಒಟ್ಟು 41 ನಾಮಪತ್ರ ಸಲ್ಲಿಕೆಯಾಗಿವೆ.
ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳಾಗಿ 3 ನೇ ವಾರ್ಡಿಗೆ ವೀಣಾ ರಾಜೇಶ ಗುಡಿ ಹಾಗೂ ಮಹಾದೇವಿ ಹಲಗಣ್ಣನವರ, 4 ನೇ ವಾರ್ಡಿಗೆ ಕಮಲವ್ವ ನಾಗಣ್ಣನವರ ಹಾಗೂ ಮಂಜುನಾಥ ಡೋಣಿ, 5 ನೇ ವಾರ್ಡಿಗೆ ಸುನೀತಾ ಭದ್ರಾವತಿ, 6 ನೇ ವಾರ್ಡಿಗೆ ಪ್ರಕಾಶ ತಳವಾರ, 7 ನೇ ವಾರ್ಡಿಗೆ ಮಹ್ಮದ ಯುಸೂಫ್ ವೆಂಕಟಾಪೂರ ಹಾಗೂ ನಾಶೀರಖಾನ ಮತ್ತಿಹಳ್ಳಿ, 8 ನೇ ವಾರ್ಡಿಗೆ ಅಮಿತ ತಿರುಮಲೆ, 11 ನೇ ವಾರ್ಡಿಗೆ ಗಂಗವ್ವ ನಿಂಗೋಜಿ, 12 ನೇ ವಾರ್ಡಿಗೆ ಸೋನಾಬಾಯಿ ಸುಣಗಾರ, 13 ನೇ ವಾರ್ಡಿಗೆ ಅರುಣ ನಾಗಜ್ಜನವರ ಹಾಗೂ ಅನಂತವಿಕಾಸ ನಿಂಗೋಜಿ, 14 ನೇ ವಾರ್ಡಿಗೆ ಸುಮಾ ನಾಗಜ್ಜನವರ ಹಾಗೂ ಶೋಭಾ ಹೊಂಬಳಿ, 15 ನೇ ವಾರ್ಡಿಗೆ ಅನಂತವಿಕಾಸ ನಿಂಗೋಜಿ ಹಾಗೂ ರವಿ ಹನುಮನಕೊಪ್ಪ, 16 ನೇ ವಾರ್ಡಿಗೆ ಮಹ್ಮದ ಇಸಾಕ ರಿಕಾರ್ಟಿ ಹಾಗೂ ಸೈಯದ ಅಹ್ಮದಬಾಷಾ ಪೀರಜಾದೆ, 17 ನೇ ವಾರ್ಡಿಗೆ ಆಶಾ ದಾಮೋದರ, 18 ನೇ ವಾರ್ಡಿಗೆ ಖಂಡೋಜಿ ಭೋಸ್ಲೆ, 20 ನೇ ವಾರ್ಡಿಗೆ ನಶ್ರೀನಬಾನು ನಾಶೀಪುಡಿ, 22 ನೇ ವಾರ್ಡಿಗೆ ನಶ್ರೀನಬಾನು ಡಾವಣಗೇರಿ ಹಾಗೂ ರಾದಿಕಾ ದೇಶಪಾಂಡೆ, 23 ನೇ ವಾರ್ಡಿಗೆ ಶಮ್‍ಶಿಯಾಬಾನು ಬಾಳೂರ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಾಗಿ 1 ನೇ ವಾರ್ಡಿಗೆ ಹರೀಫಾ ಉರ್ಫ ಆರಿಫ ಟೊಣ್ಣೀಗೇರಿ, 13 ನೇ ವಾರ್ಡಿಗೆ ಮೋಹನ ಚಿಕ್ಕಣ್ಣನವರ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳಾಗಿ 2 ನೇ ವಾರ್ಡಿಗೆ ಜೈನುಲ್ಲುದ್ದೀನ ಸಕನಳ್ಳಿ, 6 ನೇ ವಾರ್ಡಿಗೆ ಪರಶುರಾಮ ತಳವಾರ, 9 ನೇ ವಾರ್ಡಿಗೆ ಶಕೀಲಾಬಾನು ರಾಣೆಬೆನ್ನೂರ, 15 ನೇ ವಾರ್ಡಿಗೆ ನಾಗರಾಜ ಈಳಿಗೇರ, 11 ನೇ ವಾರ್ಡಿಗೆ ಕವಿತಾ ಶೇಷಗಿರಿ, 16 ನೇ ವಾರ್ಡಿಗೆ ಜಾಫರಸಾಬ ಅತ್ತಾರ, 18 ನೇ ವಾರ್ಡಿಗೆ ಗಂಗಾಧರ ಮೂಡೂರ ನಾಮಪತ್ರ ಸಲ್ಲಿಸಿದ್ದಾರೆ.
ಪಕ್ಷೇತರರಾಗಿ 4 ನೇ ವಾರ್ಡಿಗೆ ಯಲ್ಲಪ್ಪ ಶೇರಖಾನಿ, 5 ನೇ ವಾರ್ಡಿಗೆ ರೂಪಾ ಮಾಳಗಿ, 7 ನೇ ವಾರ್ಡಿಗೆ ಅಹ್ಮದಬಿಲಾಲ್ ಬೇಪಾರಿ, 14 ನೇ ವಾರ್ಡಿಗೆ ಜಯಶ್ರೀ ಲಕ್ಷ್ಮೇಶ್ವರ, 18 ನೇ ವಾರ್ಡಿಗೆ ಖಂಡೋಜಿ ಭೋಸ್ಲೆ ಹಾಗೂ ಅಬ್ದುಲ್‍ಗಫಾರ ಯಳವಟ್ಟಿ, 21 ನೇ ವಾರ್ಡಿಗೆ ರವಿಚಂದ್ರ ಪುರೋಹಿತ ನಾಮಪತ್ರ ಸಲ್ಲಿಸಿದ್ದಾರೆ.
