ಹಾನಗಲ್ :
ಹಾನಗಲ್ಲಕ್ಷೇತ್ರಕ್ಕೆ 2400 ಕೋಟಿರೂ. ಕೊಟ್ಟಿದ್ದೇನೆ. ನನ್ನಅಧಿಕಾರಾವಧಿಯಲ್ಲಿ ಎಷ್ಟು ಕೆಲಸ ಆಗಿವೆ ಎನ್ನುವುದನ್ನುಜನ ಹೇಳತಿದ್ದಾರೆ.ನಾನೂ ಲೆಕ್ಕ ಕೊಡಲು ಸಿದ್ಧ.ಮಿಸ್ಟರ್ ಬಸವರಾಜ್ ಬೊಮ್ಮಾಯಿ ಈ ಕ್ಷೇತ್ರಕ್ಕೆ ನಿಮ್ಮಕೊಡುಗೆ ಏನು ಎನ್ನುವುದನ್ನು ಹೇಳತ್ತೀರಾ?ಒಂದೇ ವೇದಿಕೆಗೆ ನೀವೂ ಬನ್ನಿ, ನಾನೂ ಬರ್ತೀನಿ.ಜನರಿಗೆ ಸತ್ಯಗೊತ್ತಾಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ನರೇಗಲ್, ಆಡೂರು, ಅಕ್ಕಿಆಲೂರು ಮತ್ತು ಹಿರೂರು ಗ್ರಾಮಗಳಲ್ಲಿ ಶುಕ್ರವಾರನಡೆದ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.2018 ರಲ್ಲಿಉಂಟಾದ ಪ್ರವಾಹದಿಂದ ಕಂಚಿನೆಗಳೂರು ಗ್ರಾಮದಒಡ್ಡುಒಡೆದು ಹೋಗಿ ಕೆರೆಗೆ ಹೋಗಬೇಕಿದ್ದ ನೀರು ನದಿ ಸೇರುತ್ತಿದೆ. 3 ವರ್ಷ ಕಳೆದರೂ ಒಂದುಒಡ್ಡು ಸರಿಪಡಿಸಲುಆಗಿಲ್ಲಎಂದು ಬಜೆಪಿ ವಿರುದ್ದ ಹರಿಹಾದರು
ಶ್ರೀನಿವಾಸ್ ಮಾನೆಗೆಲ್ಲುವುದುಖಚಿತ:
ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟೋದು ಎಷ್ಟು ಸತ್ಯವೋ ಹಾನಗಲ್ ಉಪ ಚುನಾವಣೆಯಲ್ಲಿ ಶ್ರೀನಿವಾಸ್ ಮಾನೆಗೆಲ್ಲೋದು ಅಷ್ಟೇ ಸತ್ಯ.ಹಿಂದಿನ ಚುನಾವಣೆಯಲ್ಲಿ ಮಾನೆ ಸೋತರೂ ಮನೆ ಸೇರಲಿಲ್ಲ. ನಿರಂತರಜನರ ಕಷ್ಟಸುಖಕ್ಕೆ ಸ್ಪಂದಿಸಿ, ಕೈಲಾದಷ್ಟು ಸಹಾಯ ಮಾಡಿದ್ದಾರೆ.ಈ ಉಪ ಚುನಾವಣೆ ನಿರೀಕ್ಷೆ ಮಾಡಿಅವರುಜನರ ಸೇವೆ ಮಾಡದೇ, ಅದು ನನ್ನಧರ್ಮ, ಕರ್ತವ್ಯಎಂದು ನಮ್ರವಾಗಿ ತಿಳಿದು ಮಾಡಿದ್ದಾರೆ.ಅವರ ಮೇಲೆ ಯಾವಕಪ್ಪುಚುಕ್ಕೆಯೂಇಲ್ಲಎಂದು ಸಿದ್ದರಾಮಯ್ಯ ಹೇಳಿದರು.