ಹಾನಗಲ್ಲ :
ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಬಿಡಿ, ಚುನಾವಣೆ ಬಂದಾಗ ಅದನ್ನು ಮಾಡೋಣ, ಗ್ರಾಮೀಣ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಸಾರ್ವಜನಿಕರ ತೆರಿಗೆ ಹಣದಿಂದಲೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂಬ ಅರಿವನ್ನು ಈ ದೇಶದ ಪ್ರತಿಯೊಬ್ಬ ಪ್ರಜೆ ಮೊದಲು ಹೊಂದಿರಬೇಕು ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.
ಸೋಮವಾರ ಹಾನಗಲ್ಲ ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದ ವಾಲ್ಮೀಕಿ ಭವನ ಉದ್ಘಾಟಿಸಿ, 12 ಲಕ್ಷ ರೂ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಚಾಲನೆ ನೀಡಿ, ಕೇಂದ್ರ ಸರಕಾರದ ಯೋಜನೆಯ 30 ಫಲಾನುಭವಿಗಳಿಗೆ ಅಡುಗೆ ಅನೀಲ ವಿತರಿಸಿ ಮಾತನಾಡಿದ ಅವರು, ನಮ್ಮ ಗ್ರಾಮ ಪಟ್ಟಣಗಳ ಅಭಿವೃದ್ಧಿಗೆ ಸಾರ್ವಜನಿಕರು ಆಸ್ಥೆ ವಹಿಸಬೇಕು. ಯಾವುದೇ ಸರಕಾರವಿರಲಿ ಆ ಸಂದರ್ಬದಲ್ಲಿ ಸರಕಾರ ನೀಡುವ ಸೌಲಬ್ಯಗಳನ್ನು ಪಡೆದು ಅಭಿವೃದ್ಧಿಗೆ ಮುಂದಾಗಬೇಕು. ಅನಗತ್ಯ ತಂಟೆ ತಕರಾರುಗಳನ್ನು ತೆಗೆದು ಅಭಿವೃದ್ಧಿ ಕಾರ್ಯಕ್ಕೆ ಆತಂಕ ಒಡ್ಡದಿರಿ.
ಅಭಿವೃದ್ಧಿಯಲ್ಲಿ ಪಕ್ಷವನ್ನು ತಂದೊಡ್ಡದಿರಿ ಎಂದು ಎಚ್ಚರಿಸಿ, ಸಾರ್ವಜನಿಕ ಸೇವೆಯೇ ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಇದನ್ನು ಎಲ್ಲ ಮತದಾರರು ಅರಿಯಬೇಕು. ಸಾರ್ವಜನಿಕರ ತೆರಿಗೆ ಹಣದಿಂದಲೇ ಅಭಿವೃದ್ಧಿ ಕಾರ್ಯ ನಡೆಯುತ್ತದೆ ಎಂಬ ಅರಿವಿದ್ದರೆ ಮಾತ್ರ ನಮ್ಮ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳು ಕಳಪೆ ಇಲ್ಲದಂತೆ ನಡೆಯಲು ಸಾದ್ಯ. ಈ ಜಾಗ್ರತಿ ಸಾರ್ವಜನಿಕರಲ್ಲಿರಲಿ ಎಂದು ಎಚ್ಚರಿಸಿದರು.
ದೇಶದ ಅಭಿವೃದ್ಧಿಯ ಬದ್ಧತೆ ಇದ್ದ ನಾಯಕ ಹಾಗೂ ಪಕ್ಷಗಳ ಸರಕಾರಗಳು ನಿಜವಾದ ಪ್ರಜೆಗಳ ಸೇವೆ ಸಲ್ಲಿಸಲು ಸಾಧ್ಯವಾಗಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಇಡೀ ಜಗತ್ತೇ ಅಚ್ಚರಿಪಡುವಂತ ಭಾರತದ ಅಭಿವೃದ್ಧಿಗೆ ಮುಂದಾಗಿರುವುದು ಗಮನಾರ್ಹ ಸಂಗತಿ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಸುಂದ್ರವ್ವ ಕಟ್ಟಿಮನಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ರಾಜಣ್ಣ ಪಟ್ಟಣದ, ಶಿವಲಿಂಗಪ್ಪ ತಲ್ಲೂರ, ರಾಮಚಂದ್ರಪ್ಪ ದಾಸರ, ಹನುಮಂತಪ್ಪ ತಹಶೀಲ್ದಾರ, ರೇಣುಕಾ ಕುರುಬರ, ರೇಣುಕಾ ಲಮಾಣಿ, ರಾಜು ಮಲ್ಲಿಗ್ಗಾರ, ಕಸ್ತೂರವ್ವ ವಡ್ಡರ, ಬಾಬಣ್ಣ ಲಮಾಣಿ, ಅಭಿವೃದ್ಧಿ ಅಧಿಕಾರಿ ಎ.ಎಂ.ಯಲುವಿಗಿ ಮೊದಲಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ