ಹಾನಗಲ್ ಪುರಸಭಾ ಚುನಾವಣೆ : ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ

 ಹಾನಗಲ್ಲ :

      ಹಾನಗಲ್ಲ ಪುರಸಭೆಯ ಚುನಾವಣೆ ಕಾಂಗ್ರೇಸ್ ಹಾಗೂ ಬಿಜೆಪಿ ನಡುವೆ ನೇರ ಜಿದ್ದಾಜಿದ್ದಿ ಪೈಪೊಟಿ ನಡೆಯಲಿದ್ದು, ಈ ಬಾರಿಯ ಪುರಸಭೆ ಚುನಾವಣೆ ಅತಿ ಕುತೂಹಲಕಾರಿಯಾಗಲಿದೆ. ಬಿಜೆಪಿ ಹಾಗೂ ಕಾಂಗ್ರೇಸ್ ಶತಯಾ ಗತಾಯವಾಗಿ ಗೆಲ್ಲಲೆಬೇಕೆಂಬ ಹಲವಾರು ರಣತಂತ್ರಗಳನ್ನು ರೂಪಿಸುತ್ತಿವೆ.

      ಪಟ್ಟಣದ 23 ವಾರ್ಡಗಳಲ್ಲಿ ಕಾಗ್ರೇಸ್, ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರರಿಂದ 64 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು. 23 ರಂದು ವಾಪಸ್ಸು ನಾಮಪತ್ರವನ್ನು ಎಷ್ಷು ಅಭ್ಯರ್ಥಿಗಳು ಹಿಂದೆ ಪಡೆಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಕೊನೆಯ ದಿನವಾದ ಶನಿವಾರ ಒಟ್ಟು 75 ನಾಮಪತ್ರಗಳು ಸಲ್ಲಿಕೆಯಾಗಿದ್ದು ಅವುಗಳಲ್ಲಿ 9 ನಾಮಪತ್ರಗಳು ತಿರಸ್ಕ್ರತ 2 ವಾಪಸ್ಸು ಪಡೆದಿದ್ದು ಗುರುವಾರ ಕಣದಲ್ಲಿ ಎಷ್ಟು ಆಭ್ಯರ್ಥಿಗಳು ಉಳಿಯುವರೆಂದು ಗೋತ್ತಾಗಲಿದೆ.

      ಆಭ್ಯರ್ಥಿಗಳು ಈಗಾಗಲೇ ತಮ್ಮ ವಾರ್ಡಗಳಲ್ಲಿ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದು ಜಾತಿ ಲೆಕ್ಕಾಚಾರ ಹಾಗೂ ವಾರ್ಡಗಳ ಅಭಿವೃದ್ದಿಯ ನೆಪವೊಡ್ಡಿ ಮತ ಬೇಟೆ ಪ್ರಾರಂಭವಾಗಿದೆ. ಬಿಜೆಪಿ ಪರ ಶಾಸಕ ಸಿ.ಎಂ ಉದಾಸಿ, ಸಂಸದರಾದ ಶಿವಕುಮಾರ್ ಉದಾಸಿ ಮತ್ತು ಕಾಗ್ರೇಸ್ ನ ಎಸ್ ಆರ್ ಮಾನೆ ಮನೋಹರ್ ತಹಶೀಲ್ದಾರ್ ಈಗಾಗಲೇ ಹಲವು ಸಲ ವಾರ್ಡಗಳಿಗೆ ಬೇಟಿಕೊಟ್ಟು ಸಭೆಯನ್ನು ಪೂರ್ಣಗೊಳಿಸಿದ್ದು ಈಗ ಅಯಾ ಪಕ್ಷದ ನಾಯಕರುಗಳು ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ಬಾರಿ ಪ್ರಚಾರಕ್ಕೆ ರಾಜ್ಯ ನಾಯಕರು ಸ್ಟಾರ್ ಕ್ಯಾಂಪೇನ್‍ಗಳನ್ನು ಬಳಸುವ ವಿಚಾರಗಳಿವೆ. ಅಷ್ಟೆ ಅಲ್ಲದೆ ರಾಜ್ಯದ ಮಂತ್ರಿಗಳಾದ ಪೌರಾಡಳಿತ ಸಚಿವರಾದ ಈಶ್ವರ ಖಂಡ್ರೆ ಮತ್ತು ಆಹಾರ ನಾಗರಿಕ ಪೂರೈಕರ ಸರಬರಾಜು ಜಿಲ್ಲಾ ಉಸ್ತುವಾರಿ ಸಚಿವ ಜಮೀರ ಆಹ್ಮದ್ ಅವರು ಆಗಮಿಸುವರು ಎನ್ನುವುದು ಪಕ್ಷದ ಮುಖಂಡರು ತಿಳಿಸಿದ್ದಾರೆ.

      ಪುರಸಭೆಯ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ವಿಭಜನೆಗೊಂಡು ಕೆಜೆಪಿ ಪ್ರತ್ಯೇಕವಾಗಿ ಹೊರಹೊಮ್ಮಿತ್ತು. ಆಗಾ ಕೆಜೆಪಿಯ 16 ಅಭ್ಯರ್ಥಿಗಳಿ 7 ಅಭ್ಯರ್ಥಿಗಳು ಕಾಗ್ರೇಸ್ಸ್‍ನಿಂದ ಆಯ್ಕೆಗೊಂಡಿದ್ದರು. ಮಾಜಿ ಶಾಸಕರಾಗಿದ್ದರು ಉದಾಸಿ ತಮ್ಮ ಬೆಂಬಲಿಗರನ್ನು ಗೆಲ್ಲಿಸುವುದರ ಮೂಲಕ ಕೆಜೆಪಿ ಅಧಿಕಾರ ಸ್ಥಾಪಿಸಿದ್ದರು. ಆದರೆ ಈಗ ಬಿಜೆಪಿ ಶಾಸಕರಾಗಿದ್ದು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಪಣ ತೊಟ್ಟಿದ್ದಾರೆ ಕಾಗ್ರೇಸ್ಸ್‍ನ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಮತ್ತು ವಿಧಾನ ಪರಿಷತ್ ಸದಸ್ಯ ಎಸ್ ಆರ್ ಮಾನೆ ತಮ್ಮ ಅಭ್ಯರ್ಥಿಗಳ ಗೆಲುವನ್ನು ಸವಾಲಾಗಿ ಸ್ವೀಕರಿಸಿ ಪ್ರಚಾರಕ್ಕಿಳಿದ್ದಿದ್ದಾರೆ.

      ಕೆಲವು ಪಕ್ಷದಿಂದ ಟಿಕೇಟ್ ವಂಚಿತವಾದವರು ಹಾಗೂ ಅಸಮಾಧಾನ ಮುಖಂಡರುಗಳು ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದು ಚುನಾವಣೆ ಗೆಲುವಿನ ಬಗ್ಗೆ ತಂತ್ರಗಾರಿಕೆ ನಡೆಸಿದ್ದಾರೆ.

      ಆದರೆ ಕೆಲವು ವಾರ್ಡ್‍ಳಲ್ಲಿ ಅನೇಕ ಸಮಸ್ಯೆಗಳಾದ ಬೀದಿದೀಪ, ಕುಡಿಯುವ ನೀರು, ರಸ್ತೆ ಹೀಗೆ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು ಕೆಲ ವಾರ್ಡ್‍ಗಳಲ್ಲಿ ಹಿಂದೆ ಚುನಾವಣೆ ಇದ್ದಾಗ ಬಂದವರು ಈಗಾ ತಮ್ಮ ಮುಖವನ್ನು ತೋರಿಸುತ್ತಿದ್ದಾರೆ ಎಂದು ಜನತೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಇಷ್ಟೇಲ್ಲ್ಲದರ ಮಧ್ಯ ಯಾರು ಪುರಸಭೆಯ ಚುಕ್ಕಾಣೆಯನ್ನು ಹಿಡಿಯಲ್ಲಿದ್ದಾರೆ ಎಂದು ಕಾದು ನೋಡುವ ಸ್ಥ್ತಿತಿ ಮತದಾರ ಪ್ರಭುಗಳದ್ದು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link