ಹಾವೇರಿ:
ಹಾಲುಮತ ಯುವ ವೇದಿಕೆ ಸಂಘಟನಾ ಸಭೆ ಸೆ. 9ರಂದು ಮಧ್ಯಾಹ್ನ 12ಕ್ಕೆ ನಗರದ ಹೊಟೇಲ್ ಮಾಲಿಕರ ಸಂಘದ ಸಭಾಭವನದಲ್ಲಿ ಜರುಗಲಿದೆ.
ಸಭೆಯಲ್ಲಿ ಸಮಾಜದ ಅಭಿವೃದ್ಧಿಯ ಕುರಿತು ಹಾಗೂ ಸಂಘಟನೆಯ ಕುರಿತು ಚರ್ಚಿಸಲಾಗುವುದು. ಸಂಘದ ರಾಜ್ಯಾಧ್ಯಕ್ಷ ಶ್ರೀರಾಜ್‍ಕುಮಾರ ಸಗಾಯಿಪಾಟೀಲ, ರಾಜ್ಯ ಮಹಾಪೋಷಕ ನಟರಾಜ ಎಸ್.ಕೆ., ಇತರರು ಪಾಲ್ಗೊಳ್ಳುವರು. ಸಮಾಜದ ಎಲ್ಲ ಮುಖಂಡರು, ಅಭಿಮಾನಿಗಳು, ಸಮಾಜ ಬಾಂಧವರು ಪಾಲ್ಗೊಳ್ಳಬೇಕು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಗೌಡಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.