ಹಾವೇರಿ :
ಜಿಲ್ಲೆಯ ದೇವಗಿರಿಯ ಸರ್ಕಾರಿ ಇಂಜನಿರಿಂಗ್ ಕಾಲೇಜಿನಲ್ಲಿ ಪ್ರಜಾ ಪ್ರಗತಿ ಪತ್ರಿಕೆಯು ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ನಿಮಿತ್ಯ ಇಂಜನಿರಿಂಗ್ ದಿನದ ಪ್ರಯುಕ್ತ ತಾಂತ್ರಿಕ ಪ್ರಗತಿ 32 ಪುಟಗಳ ವಿಶೇಷ ಸಂಚಿಕೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೋ ಕೆಬಿ ಪ್ರಕಾಶ ಪ್ರಸಾರಗೊಳಿಸಿದರು. ನಂತರ ಮಾತನಾಡಿದ ಪ್ರೋ ಕೆಬಿ ಪ್ರಕಾಶ ಕನ್ನಡಿಗರು, ತಾಂತ್ರಿಕ ವಲಯದ ಪ್ರಗತಿದಾಯಕ ಕ್ರಾಂತಿಕಾರಕರಾದ ಭಾರತರತ್ನ ಮೋಕ್ಷ ಗುಂಡಂ ಸರ್ ಎಂ ವಿಶ್ವೇಶ್ವರಯ್ಯನವರ ಬಗ್ಗೆ ಕಾಳಜಿಯಿಂದ ಉಪಯುಕ್ತ ಮಾಹಿತಿಯುಳ್ಳ ವಿಶೇಷ ಸಂಚಿಕೆ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿದೆ. ಪತ್ರಿಕೆ ಸಂಪಾದಕ ಮಂಡಳಿ ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರೊ ರಾಜಶೇಖರ ಯು.ಪ್ರೊ ಪ್ರೇಮಾನಂದ. ಪ್ರೊ ಮಂಜುನಾಥ ಸಿಮಂಡನವರ.ಪ್ರೊ ಎಸ್ ಎಲ್ ನಧಾಫ್.ಪ್ರೊವಿಶಾಲಗೌಡ ಪಾಟೀಲ ಹಾಗೂ ಪ್ರಜಾ ಪ್ರಗತಿ ಪತ್ರಿಕೆ ಜಿಲ್ಲಾ ವರದಿಗಾರ ನಿಂಗಪ್ಪ ಎಂ ಆರೇರ ಉಪಸ್ಥಿತರಿದ್ದರು.