ಹಾವೇರಿಯಲ್ಲಿ ಹಳದಿಕಾಲಿನ ಹಸಿರು ಪಾರಿವಾಳ

ಹಾವೇರಿ

           ಪಶ್ಚಿಮ -ಪೂರ್ವ ಘಟ್ಟಗಳಲ್ಲಿ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಹಾರಾಷ್ಟ್ರದ ರಾಜ್ಯ ಪಕ್ಷಿ ಹಳದಿಕಾಲಿನ ಹಸಿರು ಪಾರಿವಾಳಗಳ ಜೋಡಿ ಶುಕ್ರವಾರ ಹಾವೇರಿನಗರದ ಪೊಲೀಸ್‍ಠಾಣೆಯ ಬಳಿ ವಿದ್ಯುತ್‍ತಂತಿಯ ಮೇಲೆ ಕುಳಿತಿರುವುದು ಕಂಡು ಬಂದಿತು.
           ಈಹಸಿರುಪಾರಿವಾಳಗಳನ್ನು ಹಾವೇರಿ ಪರಿಸರದಲ್ಲಿ ಈಹಿಂದೆಂದು ಕಾಣದ ನಾನು ಹಸಿರುಬಣ್ಣದ ಜೋಡಿಪಾರಿವಾಳಗಳನ್ನು ಕಂಡದ್ದೆ ತಡ ಬ್ಯಾಗಿನಿಂದ ಕ್ಯಾಮೇರಾವನ್ನು ಹೊರತಗೆದು ಹಸಿರುಪಾರಿವಾಳಗಳನ್ನು ಸೆರೆಹಿಡಿಯಲು ಮುಂದಾದೆ. ಬೆದರಿಕೆಯ ಕಣ್ಣೋದಲ್ಲಿ ದಲ್ಲಿ ನನ್ನ ಕಡೆಗೆ ನೋಡುತ್ತಾ ಜೋಡಿಹಕ್ಕಿಗಳು ಹಾರುವ ಸಿದ್ದತೆಯಲ್ಲಿ ತೊಡಗಿದ್ದವು. ಅಷ್ಟರಲ್ಲಿಯೇ ಈಜೋಡಿಯ ಕೆಲವುಛಾಯಾಚಿತ್ರಗಳನ್ನು ನಾನು ಚಿತ್ರೀಸಿದ್ದೆ. ಆದರೆ ಮೋಡಕವಿದ ವಾತಾವರಣ, ತುಂತುರು ಮಳೆಹನಿ ಈಜೋಡಿಪಕ್ಷಿಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಅಡ್ಡಿಪಡಿಸಿತು.
            ಮಳೆಹನಿ ಕ್ಯಾಮೇರಾ ಲೈನ್ಸ್‍ಗೆ ತಾಗದಿರಲಿ ಎಂದು ನಾನು ಮಳೆಯಿಂದ ಕ್ಯಾಮೇರಾವನ್ನು ರಕ್ಷಿಸಲು ಬ್ಯಾಗಿನ ಒಳಗೆ ಬಚ್ಚಿಡಲು ಮುಂದಾಗಿ ಮಳೆಯಿಂದ ರಕ್ಷಣೆ ಪಡೆಯಲು ಠಾಣೆಯ ಬಳಿ ಮನೆಯೊಂದರ ಹೊರಚಾಚಿದ ಛಾವಣಿಗೆ ನಿಲ್ಲಲು ಹೋದೆ. ಅಷ್ಟರಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿ ಸೂರ್ಯರಷ್ಮಿ ಮೂಡಿತು. ಮತ್ತೆ ಈಹಸಿರು ಬಣ್ಣದ ಹಕ್ಕಿಗಳು ಹಾರುವ ಸಿದ್ದತೆಯನ್ನು ಕೈಬಿಟ್ಟು ನೆಟ್ಟ ದೃಷ್ಟಿಯಲ್ಲಿ ನೋಡುತ್ತಾ ಕುಳಿತವು. ಸೂರ್ಯನ ಅರೆಬರೆ ಬೆಳಕಲ್ಲಿ ಹಸಿರುಪಾರಿವಾಳಗಳ ಚಿತ್ರಗಳು ಹೇಗೋ ನನ್ನ ಕ್ಯಾಮೇರಾದಲ್ಲಿ ಸೆರೆಯಾದವು.
            ಜನದಟ್ಟಣೆಯ ಪ್ರದೇಶದಲ್ಲಿ ನಾನು ಕ್ಯಾಮೇರಾವನ್ನು ಹಿಡಿದು ಓಡಾಡುತ್ತಿರುವುದನ್ನು ಗಮನಿಸಿದ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು “ಏನ್ ತಗ್ಯಾಕ ಹತ್ತೀರಿ” ಎಂದು ಗುಂಪುಕೂಡಿ ಪಕ್ಷಿಗಳನ್ನು ನೋಡತೊಡಗಿದರು. ಈವೇಳೆ ಸೇರಿದ್ದ ಜನರಿಂದ ಕೊಂಚ ಗದ್ದಲು ಉಂಟಾಯಿತು, ಪಕ್ಷಿಗಳ ಏಕಾಗ್ರತೆಗೆ ಧಕ್ಕೆ ಬಂದಿತೋ ಎನೋ? ಪಕ್ಷಿಗಳು “ನೀವು ಹಿಂಗ್ ನೋಡಬ್ಯಾಡ್ರಿ ನಮ್ಮನ್ನ” ಎಂದು ದೂರಕ್ಕೆ ಹಾರಿಹೋದವು.
ಭಾರತೀಯ ಉಪಖಂಡದ ಸಾಮಾನ್ಯ ಪ್ರಭೇದವಾದ ಯೆಲ್ಲೋ ಫೂಟೆಡ್ ಗ್ರೀನ್ ಪೀಜನ್ (ಟ್ರೆರಾನ್ ಫೀನಿಕಾಫ್ಟೆರಾ), ಪಶ್ಚಿಮ ಘಟ್ಟ ಮತ್ತು ಮಲೆನಾಡಿನ ಎತ್ತರದ ಮರಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಕಳೆದ ಹತ್ತಾರುವರ್ಷಗಳಲ್ಲಿ ಅನೇಕ ಖಗರತ್ನಗಳ ಛಾಯಾಚಿತ್ರಗಳನ್ನು ದಾಖಲಿಸಿರುವ ನನಗೆ ಈಹಸಿರುಪಾರಿವಾಳಗಳು ನಮ್ಮ ಹಾವೇರಿ ಪರಿಸರದಲ್ಲಿ ಕಂಡಿದ್ದು ವಿಶೇಷವೆನಿಸಿತು. ಬೇರೆ ಕಡೆಗೆ ವಲಸೆ ಬಂದಿರಬಹುದಾದ ಈ ಅಪರೂಪದ ಪ್ರಭೇದ ಹಸಿರುಪಾರಿವಾಳಗಳು ತಮ್ಮ ಮೂಲಸ್ಥಾನಕ್ಕೆ ವಲಸೆಹೋಗಲು ಮುಂದಾದ ಸಂದರ್ಭದಲ್ಲಿ ದಣಿವಾರಿಸಿಕೊಳ್ಳಲೋ ಏನೋ ವಿದ್ಯುತ್ ತಂತಿಯ ಮೇಲೆ ವಿಶ್ರಮಿಸಿರುವ ಸಂದರ್ಭದಲ್ಲಿ ನನ್ನ ಕಣ್ಣಿಗೆ ಗೋಚರವಾದವು, ಇವುಗಳ ಬಗ್ಗೆ ಈ ಒಂದು ಸಣ್ಣ ಟಿಪ್ಪಣಿ ಇಲ್ಲಿದೆ.
          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link