ತುಮಕೂರು
ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಮಕ್ಕಳು, ಯುವಜನರು ಸ್ಮರಿಸಬೇಕಾದ ಅಗತ್ಯವಿದೆ. ಅಷ್ಟೇ ಅಲ್ಲ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ಸಮಾಜ ಸೇವಕ ಹಾಗೂ ಸಿಂಧೂರ ಟೆಕ್ಸ್‍ಟೈಲ್ ಮಾಲಿಕ ಎಚ್.ಎಸ್.ನಾಗೇಶ್ ತಿಳಿಸಿದರು.
ತುಮಕೂರು ನಗರದ ಚಿಕ್ಕಪೇಟೆಯ ಗಾರ್ಡನ್ ರಸ್ತೆಯಲ್ಲಿರು ವಾಸವಿ ನರ್ಸರಿ ಮತ್ತು ಹೈಯರ್ ಪ್ರೈಮರಿ ಶಾಲೆಯಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು. ದೇಶಭಕ್ತರ ಬಲಿದಾನದ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಇದೇ ಮಕ್ಕಳಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಟಿವಿಯನ್ನು ದೇಣಿಗೆಯಾಗಿ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಜಿ.ಕೃಷ್ಣಮೂರ್ತಿ ಮಾತನಾಡಿ, ಸತ್ಯನಾರಾಯಣಶ್ರೇಷ್ಟಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂದು ಸ್ಮರಿಸಿಕೊಂಡರು. ಸಂಸ್ಥೆಯ ಉಪಾಧ್ಯಕ್ಷ ಕೆ.ಎನ್.ಶಂಕರನಾರಾಯಣ ಗುಪ್ತ ಅಧ್ಯಕ್ಷತೆ ವಹಿಸಿದ್ದರು. ವಾಸವಿ ಸಂಘ ಅಧ್ಯಕ್ಷ ಬಿ.ಅಮರನಾಥ ಗುಪ್ತ ಮುಖ್ಯಶಿಕ್ಷಕ ಪ್ರಭಾಕರ ಗುಪ್ತ ಮಾತನಾಡಿದರು.
ಶಿಕ್ಷಕಿ ತೇಜಾ ಕಾರ್ಯಕ್ರಮ ನಿರೂಪಿಸಿದರು. ನರ್ಸರಿ ವಿಭಾಗದ ಗ್ರೇಸಿ ಪಿಂಟೋ ಹಾಗೂ ಸಿಬ್ಬಂದಿ ವರ್ಗದವರು ಪೋಷಕರು ಹಾಜರಿದ್ದರು. ಮಕ್ಕಳ ವೇಷ ಭೂಷಣಗಳು ಗಮನ ಸೆಳೆದವು.