ಕೊರಟಗೆರೆ
ಗಿರೀಶ್ ಕಾರ್ನಾಡ್ರವರು ಸಾಹಿತ್ಯ ರಚನೆಯೊಂದಿಗೆ ಧರ್ಮ, ಸಮಾಜಿಕ ಸಮಾನತೆಗೆ ಹೋರಾಡಿದ ಸಾಹಿತಿಗಳಾಗಿದ್ದು ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ.ಪಂ.ಸದಸ್ಯ ಕೆ.ಎನ್.ಲಕ್ಷ್ಮೀನಾರಾಯಣ್ ತಿಳಿಸಿದರು.
ಅವರು ಪಟ್ಟಣ ಪಂಚಾಯಿತಿಯಲ್ಲಿ ಸದಸ್ಯರೊಂದಿಗೆ ಅಗಲಿದ ಗಿರೀಶ್ ಕಾರ್ನಾಡ್ ಭಾವಚಿತ್ರಕ್ಕೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದು ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಿದ ಇವರು ಕನ್ನಡಕ್ಕೆ ಅನೇಕ ಕಾದಂಬರಿ ಸೇರಿದಂತೆ ಅನೇಕ ಸಾಹಿತ್ಯ ರಚಿಸಿ ನಾಡಿಗೆಕೊಡುಗೆ ನೀಡಿದ್ದಾರೆ ಎಂದರು.
ಪ.ಪಂ.ಸದಸ್ಯ ಕರಾವೇ ನಟರಾಜು ಮಾತನಾಡಿ ಗಿರೀಶ್ ಕಾರ್ನಾಡ್ರವರು ಕನ್ನಡದ ಉಳಿವಿಗಾಗಿ ಅನೇಕ ಹೋರಾಟಗಳನ್ನು ಮಾಡಿದವರು, ಅವರ ಸಾಹಿತ್ಯ ಲೋಕದ ಕೊಡಿಗೆ ಅಪಾರದ್ದಾಗಿದ್ದು ಕನ್ನಡದಲ್ಲೆ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದವರಲ್ಲಿ ಇವರೊಬ್ಬರಾಗಿದ್ದು ನೇರ ಹಾಗೂ ನಿಷ್ಟೋರವಾಗಿ ಮಾತನಾಡುವ ವ್ಯಕ್ತಿಯಾಗಿದ್ದು ಧರ್ಮಗಳಲ್ಲಿ ಸಮನ್ವಯತೆಇರಬೇಕೆಂದು ಹೋರಾಟ ಮಾಡಿದವರಾಗಿದ್ದಾರೆ ಎಂದರು. ಮತ್ತೋಬ್ಬ ಪ.ಪಂ.ಸದಸ್ಯ ಪುಟ್ಟನರಸಯ್ಯ ಮಾತನಾಡಿಗಿರೀಶ್ಕಾರ್ನಾಡ್ ಸಾಹಿತಿಯೊಂದಿಗೆಅತ್ಯನ್ನತ ಚಲನಚಿತ್ರ ನಟರಾಗಿದ್ದರು, ಅವರು ನಟಿಸಿದ ಸಂತಶಿಶುನಾಳ ಷರೀಫಾ ಸೇರಿದಂತೆ ಇತರ ಕಾದಂಬರಿ ಆಧಾರಿತ ಚಲನ ಚಿತ್ರಗಳಲ್ಲಿ ನಟಿಸಿ, ನಿರ್ದೇಶಕ ಮಾಡಿ ಸಮಾಜಕ್ಕೆಉತ್ತಮ ಸಂದೇಶವನ್ನು ನೀಡಿದ್ದಾರೆ ಇಂತಹ ವ್ಯಕ್ತಿ ಅಪರೋಪ ಎಂದು ತಿಳಿಸಿದರು.
ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪ.ಪಂ.ಸದಸ್ಯರಾದ ನಾಗರಾಜು, ಮುಖಂಡರುಗಳಾದ ಗಣೇಶ್, ರಮೇಶ್, ತುಂಗಾ ಮಂಜುನಾಥ್, ಸತ್ಯನಾರಾಯಣ್, ಮಹಮದ್ ಖಲಿಂ ಸೇರಿದಂತೆಇನ್ನಿತರರು ಹಾಜರಿದ್ದರು.