ಹಿರಿಯೂರು:
ಇತ್ತೀಚೆಗೆ ನಿಧನರಾದ ಶಂಕರ್ ಸ್ಟುಡಿಯೋ ಮಾಲೀಕರಾದ ಹೆಚ್.ಜಿ.ಈಶ್ವರಪ್ಪ, ಹಾಗೂ ಸೂರ್ಯೋದಯ ಸ್ಟುಡಿಯೋ ಹಿರಿಯ ಛಾಯಾಗ್ರಾಹಕರಾದ ಹೆಚ್.ಎ.ಅಬ್ದುಲ್ ರಷೀದ್ ಹಾಗೂ ರಾಯಲ್ ಸ್ಟುಡಿಯೋ ಮಾಲೀಕರಾದ ಯೂಸೂಫ್ ಇವರ ನೆನಪು ಕಾರ್ಯಕ್ರಮವನ್ನು ಛಾಯಾಗ್ರಾಹಕರ ಸಂಘದ ವತಿಯಿಂದ ರೋಟರಿ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕರಾದ ಅಬ್ದುಲ್ ಅಜೀಜ್ ರವರು ಮಾತನಾಡುತ್ತಾ ಹಿಂದಿನ ಕಾಲದಲ್ಲಿ ಕಪ್ಪು ಬಿಳುಪು ಫೋಟೊ ಮಾತ್ರ ಇದ್ದವು ಆಗ ಅವೇ ಅಚ್ಚುಮೆಚ್ಚಾಗಿದ್ದವು ಈಗ ಡಿಜಿಟಲ್ ಕ್ಯಾಮರಾ ಫೋಟೊಗಳು ಬಂದಿದ್ದು ಕೆಲವೇ ನಿಮಿಷಗಳಲ್ಲಿ ಫೋಟೊ ತಯಾರು ಮಾಡಿಕೊಡಲಾಗುತ್ತದೆ ಎಂದರು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಮುಂದೆ ಸಾಗೋಣ ಎಂದರು. ಅಲ್ಲದೇ ಛಾಯಾಗ್ರಾಹಕರು ಆರ್ಥಿಕವಾಗಿ ಹಿಂದುಳಿದ್ದಾರೆ ಅಭಿವೃದ್ಧಿಕಡೆ ಗಮನ ಹರಿಸಬೇಕು ಎಂದರು. ಮತ್ತು ಛಾಯಾಗ್ರಾಹಕರು ಜನರ ಪ್ರೀತಿ ವಿಶ್ವಾಸ ಗಳಿಸಬೇಕು ಎಂದರು.
ಭೂಮಿಕ ಸ್ಟುಡಿಯೋ ಮಾಲೀಕರಾದ ಕಾಂತರಾಜ್ ಹುಲಿಯವರು ಮಾತನಾಡಿ ಮುಂಚೆ ಕಪ್ಪು ಬಿಳುಪು ಫೋಟೊ ಇದ್ದಾಗ ತುಂಬಾ ಕೆಲಸ ಇರುತ್ತಿತ್ತು ಹಿರಿಯ ಛಾಯಾಗ್ರಾಹಕರು ತುಂಬಾ ಶ್ರಧ್ಧೆಯಿಂದ ಕೆಲಸ ನಡೆಸಿಕೊಂಡು ಬಂದಿದ್ದಾರೆ ಎಂದು ಹಿರಿಯರ ನೆನಪುಗಳನ್ನು ಸ್ಮರಿಸಿದರು.
ಅಂಬಿಕಾ ಸ್ಟುಡಿಯೋ ಮಾಲೀಕರಾದ ಎಂ.ಎಲ್.ಗಿರಿಧರ್ ಮಾತನಾಡುತ್ತಾ ಒಗ್ಗಟ್ಟಿನಲ್ಲಿ ಬಲವಿದೆ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಲ್ಲರೂ ಒಂದೇ ದರ ನಿಗದಿಮಾಡಬೇಕು ನಮ್ಮಲ್ಲಿ ಜಾತಿಬೇಧ ಇರುವುದಿಲ್ಲ ಯಾವುದೇ ಕಾರ್ಯಕ್ರಮ ಇದ್ದರೂ ನಾವು ಅರ್ಧ ಘಂಟೆ ಮುಂಚೆಯೇ ಹೋಗಬೇಕು. ಯಾವುದೇ ಕಾರ್ಯಕ್ರಮಗಳಿಗೆ ಇದೇ ಊರಿನವರಿಗೇ ಸಹಕಾರ ನೀಡಿ ಎಲ್.ಇ.ಡಿ ವಾಲ್ , ಮಿಕ್ಸಿಂಗ್ , ಫ್ಲೆಕ್ಸ್ ಎಲ್ಲಾ ಹಿರಿಯೂರಿನಲ್ಲಿಯೇ ಇದೆ ಇದನ್ನು ಸರಿಯಾಗಿ ಬಳಸಿಕೊಳ್ಳಿ ಎಂದರು.
ಹಿರಿಯ ಛಾಯಾಗ್ರಾಹಕರಾದ ರಾಮಕೃಷ್ಣಪ್ಪ ಮಾತನಾಡಿ ಬರುವ ಗ್ರಾಹಕರು ಬೇರೆ ಕಡೆ ಕಡಿಮೆ ಇದೆ ನಿಮ್ಮಲ್ಲಿ ಏಕೆ ಹೆಚ್ಚು ದರ ಎಂದು ಪ್ರಶ್ನಿಸಿದರೆ ನಾವು ನಿಗದಿಪಡಿಸಿರುವ ಬೆಲೆಯನ್ನು ಹೇಳುತ್ತೇವೆ ಎಂದರು. ಆದ್ದರಿಂದ ಎಲ್ಲರೂ ಒಂದೇ ಬೆಲೆ ನಿಗದಿ ಪಡಿಸುವುದು ತುಂಬಾ ಸೂಕ್ತ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವಿಸ್ಟುಡಿಯೋ ಮಾಲೀಕರಾದ ವಿಜಯಕುಮಾರ್ ವಹಿಸಿದ್ದರು . ಕಾರ್ಯಕ್ರಮದಲ್ಲಿ ಪಾರ್ಥಸಾರಥಿ , ಕೃಷ್ಣಪ್ಪ , ಪರಮೇಶ್ , ಗಿರಿಸ್ವಾಮಿ , ವಾಹೀದ್ , ನವೀದ್ , ಗೋವಿಂದರಾಜು , ದಿವುಶಂಕರ್ , ರಾಜು , ಮಂಜುನಾಥ್ , ಲೋಕೇಶ್ , ರಂಗಣ್ಣ , ಬಿ.ದರ್ಶನ್ ಬಿ.ರಾವ್ ಎನ್.ಸಿದ್ದೇಶ ನಾಜೀರ್ ನಾಗೇಶ ಹಾಗೂ ಅನೇಕ ಛಾಯಾಗ್ರಾಹಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ 25ರಂದು ಸಂಘದ ಸಭೆಯನ್ನು ಕರೆಯಲಾಗಿದೆ ಎಲ್ಲರೂ ಭಾಗವಹಿಸಿ ಸಂಘದ ಅಭಿವೃದ್ಧಿಯ ವಿಚಾರಗಳನ್ನು ಚರ್ಚಿಸೋಣ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ