ಹಿರಿಯೂರು:
ನಗರದ ಶ್ರೀರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ಆರಾಧನಾ ಮಹೋತ್ಸವ ಭಕ್ತರು ಸಡಗರ ಸಂಭ್ರಮ ಮತ್ತು ವೈಭವದಿಂದ ಪ್ರಾರಂಭವಾಯಿತು. ಇದರ ಅಂಗವಾಗಿ ಸ್ವಾಮಿಗೆ ಹೂವಿನ ಅಲಂಕಾರ, ಅರ್ಚನೆ ಅಭಿಷೇಕ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಕರ್ಪೂರ ಧೂಪ ದೀಪಗಳಿಂದ ಕೂಡಿದ ದೇವಾಲಯದಲ್ಲಿ ಭಕ್ತಿಭಾವ ಹೊಮ್ಮುವಂತಿತ್ತು. ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಎನ್.ರಾಮಚಂದ್ರ, ಅಧ್ಯಕ್ಷರಾದ ಹೆಚ್.ಎಸ್.ನಾಗರಾಜ್, ಕಾರ್ಯದರ್ಶಿ ಜಿ.ವೆಂಕಟೇಶ್, ಅರ್ಚಕರಾದ ಹೆಚ್.ವಿ.ಮಂಜುನಾಥ್, ಮಿತ್ರಕೂಟದ ಪದಾಧಿಕಾರಿಗಳು ನಗರದ ಅನೇಕ ಭಕ್ತರು ಭಾಗವಹಿಸಿದ್ದರು. ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಭಕ್ತಾದಿಗಳು ಧನಸಹಾಯ ಮಾಡುವಂತೆ ಬೃಂದಾವನ ಮಿತ್ರಕೂಟದ ಪದಾಧಿಕಾರಿಗಳು ಮನವಿ ಮಾಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
