ದಾವಣಗೆರೆ:
ಈ ಹಿಂದಿನ ಯಾವುದೇ ಮುಖ್ಯಮಂತ್ರಿಗಳು ಹೆಚ್ಚು ಕೋಮುವಾದಿಗಳಾಗಿರಲಿಲ್ಲ. ಈಗಿನ ಸಿಎಂ ಬಸವರಾಜ ಬೊಮ್ಮಾಯಿಯವರು ಹೆಚ್ಚು ಕೋಮುವಾದಿಗಳಾಗಿದ್ದಾರೆ ಎಂಬುದಾಗಿ ನಟ ಚೇತನ್ ಸಿಎಂ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿ, ಪಾಸ್ ಮಾಡಿಕೊಂಡಿರುವಂತ ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿ ನೀತಿಯಾಗಿದೆ. ಜನರು ಅವರಿಗೆ ಬೇಕಾದ ಧರ್ಮಕ್ಕೆ ಸೇರಬಹುದು ಎನ್ನುವುದು ಸಂವಿಧಾನದಲ್ಲಿದೆ. ಹೀಗಿದ್ದೂ ಇದರ ಮೇಲೆ ನಿರ್ಬಂಧ ಹೇರಲು ರಾಜ್ಯ ಸರ್ಕಾರ ಹೊರಟಂತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತಂದೆ ಬೊಮ್ಮಾಯಿಯವರು ಒಳ್ಳೆಯ ಪ್ರಗತಿಪರ ಸಿಎಂ ಆಗಿದ್ದವರು. ಆದ್ರೇ ಸಿಎಂ ಬೊಮ್ಮಾಯಿಯವರು ಮಾತ್ರ ಯಾವ ಸಿಎಂಗೆ ಇಲ್ಲದಷ್ಟು ಕೋಮುವಾದಿಯಾಗಿದ್ದಾರೆ. ರಾಜ್ಯದಲ್ಲಿ ಅತ್ಯಂತ ಹೀನವಾಗಿರುವಂತ ದೇವದಾಸಿಯರ ಬಗ್ಗೆ ನೋಡುವಷ್ಟು ತಾಳ್ಮೆ ಯಾರೊಬ್ಬ ರಾಜಕಾರಣಿಗೂ ಇಲ್ಲ ಎಂಬುದಾಗಿ ಕಿಡಿಕಾರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ