
ಪ್ರತಿ ತಿಂಗಳು ಹೊಸ ನಿಯಮಗಳು ಮತ್ತು ನಿಬಂಧನೆಗಳು ಜಾರಿ ಬರಲಿದ್ದು, ಕೆಲವು ನಿಯಮಗಳು ಗ್ರಾಹಕರಿಗೆ ಲಾಭದಾಯಕವಾಗಿದ್ದರೇ, ಇನ್ನೂ ಕೆಲವು ಕಿಸೆಗೆ ಭಾರವಾಗಲಿದೆ. ಹಾಗಾದ್ರೇ ಜನವರಿಯಿಂದ ಬದಲಾಗುವ ನಿಯಮಗಳನ್ನು ನೋಡೋಣ.
ಎಟಿಎಂ ವಹಿವಾಟಿನ ಶುಲ್ಕ ಹೆಚ್ಚಳ:
ರಿಸರ್ವ್ ಬ್ಯಾಂಕ್ ಎಟಿಎಂ ವಹಿವಾಟಿನ ಶುಲ್ಕವನ್ನು ಹೆಚ್ಚಿಸಿದೆ.
ಹೊಸ ಶುಲ್ಕ ಜನವರಿ 1 ರಿಂದ ಜಾರಿಗೆ ಬರಲಿದೆ. ಉಚಿತ ಮಿತಿಗಿಂತ ಹೆಚ್ಚಿನ ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಇಲ್ಲಿಯವರೆಗೆ 20 ರೂ. ಈಗ 21 ರೂಪಾಯಿ ವಿಧಿಸುವುದಾಗಿ ಆರ್‌ಬಿಐ ಹೇಳಿದೆ.
ಗ್ಯಾಸ್ ಸಿಲಿಂಡರ್ :
ಪ್ರತಿ ತಿಂಗಳ ಆರಂಭದಲ್ಲಿ ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯನ್ನು ಬದಲಾಯಿಸಲಾಗುತ್ತದೆ. ಹೀಗಾಗಿ ಜನವರಿಯಲ್ಲೂ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇದೆ.
ಅಂಚೆ ಬ್ಯಾಂಕ್ :
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರು ಜನವರಿ 1 ರಿಂದ 10,000 ಕ್ಕಿಂತ ಹೆಚ್ಚು ಠೇವಣಿ ಪಾವತಿಸಬೇಕಾಗುತ್ತದೆ.
ಐಸಿಐಸಿಐ ಬ್ಯಾಂಕ್ :
ಖಾಸಗಿ ವಲಯದ ಸಾಲದಾತ ICICI ಬ್ಯಾಂಕ್ ಜನವರಿ 1 ರಿಂದ ಜಾರಿಗೆ ಬರುವಂತೆ ಉಳಿತಾಯ ಖಾತೆಗಳಿಗೆ ತನ್ನ ಸೇವಾ ಶುಲ್ಕವನ್ನು ಪರಿಷ್ಕರಿಸಿದೆ.
ಗಾರ್ಮೆಂಟ್ ಬೆಲೆ ಏರಿಕೆ:
ಕೇಂದ್ರ ಸರಕಾರ ಜವಳಿ ಮೇಲಿನ ಜಿಎಸ್ ಟಿ ದರವನ್ನು ಶೇ.5ರಿಂದ ಶೇ.12ಕ್ಕೆ ಏರಿಸಿದೆ. ಹೊಸ ತೆರಿಗೆ ದರವು ಜನವರಿ 1 ರಿಂದ ಜಾರಿಗೆ ಬರಲಿದೆ. ಹೀಗಾಗಿ ಬಟ್ಟೆಗಳ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
