ಹಿರಿಯ ವಾಣಿಜ್ಯೋದ್ಯಮಿ ಬಿ.ಕೆ.ರಾಜಶೇಖರಪ್ಪ 86ನೇ ಹುಟ್ಟು ಹಬ್ಬ : ಅಭಿಮಾನಿಗಳಿಂದ ಶುಭ ಹಾರೈಕೆ.

ಚಳ್ಳಕೆರೆ

      ವೀರಶೈವ ಸಮಾಜದ ಹಿರಿಯ ಮುಖಂಡ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಕೊಡುಗೈದಾನಿ ಎಂದು ಖ್ಯಾತಿಯಾದ ನಗರದ ಹಿರಿಯ ವಾಣಿಜ್ಯೋದ್ಯಮಿ ಬಿ.ಕೆ.ರಾಜಶೇಖರಪ್ಪನವರ 86ನೇ ಹುಟ್ಟುಹಬ್ಬವನ್ನು ಸೋಮವಾರ ಅವರ ನಿವಾಸದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಅಭಿನಂದಿಸುವ ಮೂಲಕ ಆಚರಿಸಿದರು.

       ಜಿಲ್ಲಾ ಪಂಚಾಯಿತಿ ಸದಸ್ಯ, ವಾಲ್ಮೀಕಿ ಸಮುದಾಯದ ಯುವ ಮುಖಂಡ, ಎನ್.ಓಬಳೇಶ್ ಮಾತನಾಡಿ, ಕಳೆದ ಹಲವಾರು ದಶಕಗಳಿಂದ ಚಳ್ಳಕೆರೆ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಿ, ಬೆಂಬಲಿಸುವ ಔದಾರ್ಯವನ್ನು ರಾಜಶೇಖರಪ್ಪ ಬೆಳೆಸಿಕೊಂಡು ಬಂದಿದ್ದು, ಇವರ ಸಹಕಾರದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನೇಕ ಉತ್ತಮ ಕಾರ್ಯಗಳು ನಡೆದಿವೆ. ಇಂತಹ ಸಜ್ಜನ ಹಿರಿಯ ಧಾರ್ಮಿಕ ದುರೀಣ ಬಿ.ಕೆ.ರಾಜಶೇಖರಪ್ಪ ಇನ್ನೂ ನೂರಾರು ವರ್ಷಗಳ ಕಾಲ ನೆಮ್ಮದಿಯಿಂದ ಬದುಕು ಸಾಗಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

       ಎಲ್‍ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಸಂಘದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಇಂತಹ ಇಳಿ ವಯಸ್ಸಿನಲ್ಲೂ ಸಹ ವಿವಿಧ ಸಂಘ ಸಂಸ್ಥೆಗಳ ಕ್ರಿಯಾಶೀಲ ವ್ಯಕ್ತಿಯಾಗಿ ರಾಜಶೇಖರಪ್ಪ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಯಾವುದೇ ಕಾರ್ಯಕ್ರಮ ನಡೆಯಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನೆರವು ನೀಡುತ್ತಾರೆ.

       ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಭವಿಷ್ಯ ಕಂಡುಕೊಳ್ಳಬೇಕೆಂಬ ಅವರ ಅಭಿಮಾನಿ ಮಾತುಗಳು ಎಲ್ಲರಿಗೂ ಪ್ರೇರಕವಾಗಿವೆ ಎಂದರು. ನಗರ ಹಾಗೂ ತಾಲ್ಲೂಕಿನ ಯಾವುದೇ ಭಾಗಗಳಲ್ಲಾಗಲಿ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನರಿಗೆ ತಮ್ಮ ಕೈಲಾದಷ್ಟು ನೆರವನ್ನು ನೀಡಿ ಉತ್ತಮ ಕಾರ್ಯಗಳನ್ನು ನಿರಂತರವಾಗಿ ನಡೆಯುವುದರಿಂದ ದೇವರ ಆಶೀರ್ವಾದ ಎಲ್ಲರಿಗೂ ಸಿಗುತ್ತದೆ ಎಂದು ಶುಭ ಹಾರೈಸುತ್ತಾರೆ. ಇಂತಹ ಸರ್ವಶ್ರೇಷ್ಠ ವ್ಯಕ್ತಿ ಇನ್ನೂ ನೂರಾರು ವರ್ಷಗಳ ಕಾಲ ಬಾಳುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದರು.

         ಕಾರ್ಯಕ್ರಮದಲ್ಲಿ ಟಿ.ಜೆ.ತಿಪ್ಪೇಸ್ವಾಮಿ, ಪಿ.ಜಿ.ರಾಘವೇಂದ್ರ, ನಾಗರಾಜು, ಹೊನ್ನೂರು ಗೋವಿಂದಪ್ಪ, ದಾಸರೆಡ್ಡಿ, ಬೇಕರಿ ವಿಜಯ್, ರಂಗಣ್ಣ, ಕೆ.ಎಂ.ಜಗದೀಶ್, ಗುತ್ತಿಗೆದಾರ ಜಗದೀಶ್, ಗಾದ್ರಪ್ಪ, ಗೋಪನಹಳ್ಳಿ ಮಹಂತೇಶ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link