ಹೆಣ್ಣು ಸಮಾಜದ-ಸಂಸಾರದ-ಕುಟುಂಬದ ಕಣ್ಣು : ಡಾ.ಶ್ರೀ ಶಾಂತವೀರ ಸ್ವಾಮೀಜಿ

ಹೊಸದುರ್ಗ:

     ಹೆಣ್ಣು ಸಮಾಜದ-ಸಂಸಾರದ-ಕುಟುಂಬದ ಕಣ್ಣು. ದೇಹಕ್ಕೆ ಕಣ್ಣು ಹೆಬ್ಬಾಗಿಲು ಸಂಸಾರಕ್ಕೆ ಹೆಣ್ಣು ಸೂತ್ರಧಾರಳು ಎಂದು ಜಗದ್ಗುರು ಕುಂಚಿಟಿಗ ಮಹಾ ಸಂಸ್ಥಾನ ಮಠದ ಡಾ.ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದ್ದಾರೆ.

     ಹೊಸದುರ್ಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಮಾಡದಕೆರೆ ಹೋಬಳಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಆಶೀರ್ವಚನ ನೀಡಿ ಮಾತನಾಡಿದರು.

     ತಾಯಿಯನ್ನು,ಮಡದಿಯನ್ನು, ಮಗಳನ್ನು, ನಾದಿನಿಯನ್ನ, ಅತ್ತಿಗೆಯನ್ನು, ಪಡೆದ ನಾವುಗಳು ಹೆಣ್ಣನ್ನು ಗೌರವಿಸುವ ಕಾಲ ತಂದು ಕೊಳ್ಳಬೇಕಾಗುತ್ತದೆ. ಹೆಣ್ಣು ಸಮಾಜದ-ಸಂಸಾರದ-ಕುಟುಂಬದ ಕಣ್ಣು. ದೇಹಕ್ಕೆ ಕಣ್ಣು ಹೆಬ್ಬಾಗಿಲು ಸಂಸಾರಕ್ಕೆ ಹೆಣ್ಣು ಸೂತ್ರಧಾರಳು ಎಂದು ತಿಳಿಸಿದರು.

      ದೇಶದ ಅಭಿವೃದ್ಧಿ ಆಗಬೇಕೆಂದರೆ ಮಹಿಳಾ ಸಬಲೀಕರಣ ಆಗಬೇಕು. ಮಹಿಳೆಯ ಶಿಕ್ಷಣ ಮತ್ತು ಸಂಸ್ಕಾರ ಜೊತೆಗೆ ಆರ್ಥಿಕ ಪ್ರಬಲತೆ ಸಾಧಿಸಿದರೆ ಆ ಹೆಣ್ಣಿನಿಂದ ಸುಗಮವಾದ ಸಂಸಾರವನ್ನು ಮತ್ತು ಸಂಸ್ಕಾರ ನಡೆಸಲು ಸಾಧ್ಯವಾಗುತ್ತದೆ. ಆದರೂ ಈ ಕಲಿಯುಗದಲ್ಲಿ ಹೆಣ್ಣನ್ನು ಸಮಾನವಾಗಿ ನೋಡದೆ ಇರುವುದು ಮನೋಸ್ಥಿತಿಯಲ್ಲಿ ಕೂಡ ಅತ್ಯಂತ ದುಃಖದ ವಿಷಯ ಎಂದರು.

      ಯಾವ ಸಮಾಜದಲ್ಲಿ ಹೆಣ್ಣನ್ನು ಗೌರವಿಸುತ್ತಾರೆಯೋ, ಯಾವ ಮನೆಯಲ್ಲಿ ಹೆಣ್ಣು ಖುಷಿ ಖುಷಿಯಾಗಿ, ಸಂತೋಷವಾಗಿ, ನೆಮ್ಮದಿಯಾಗಿ ಇರುತ್ತಾಳೆಯೋ ಅಂತಹ ಕುಟುಂಬ ಅತ್ಯಂತ ಸುಸೂತ್ರವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

     ಅಂದು ಬಸವಣ್ಣ ಮಹಿಳಾ ಸ್ವತಂತ್ರವನ್ನು ನೀಡಿದರು. ಇಂದು ಶ್ರೀ ಶಕ್ತಿ ಸಂಘಗಳ ಸ್ಥಾಪಿಸುವ ಮೂಲಕ ಹೆಗ್ಗಡೆಯವರು 21ನೇ ಶತಮಾನದ ಮಹಿಳಾ ಸಬಲೀಕರಣದ ರೂವಾರಿಗಳಾಗಿದ್ದಾರೆ ಎಂದು ತಿಳಿಸಿದರು.

      ಇದೇ ವೇಳೆ ಸಾಮೂಹಿಕ ಸತ್ಯನಾರಾಯಣ ಪೂಜೆ ಸಮಿತಿ ಅಧ್ಯಕ್ಷ ಹೆಚ್.ಮೂರ್ತಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ನಿರ್ದೇಶಕರು ಗಣೇಶ್ ಬಿ, ಜಿಲ್ಲಾ ಪಂಚಾಯತ್ ಸದಸ್ಯೆ ವಿಜಯಲಕ್ಷ್ಮಿ ಪ್ರಕಾಶ್, ತಾಲೂಕು ಪಂಚಾಯತ್ ಅಧ್ಯಕ್ಷೆ ಪ್ರೇಮಾ ರವೀಂದ್ರ, ತಾ.ಪಂ ಸದಸ್ಯ ಈರುವಳಪ್ಪ, ಮಾಡದಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ರಾಮಯ್ಯ ಹಾಗೂ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

 

    

Recent Articles

spot_img

Related Stories

Share via
Copy link
Powered by Social Snap