ಹೊಳಲ್ಕೆರೆ:
ಪಟ್ಟಣದ ಮಧ್ಯ ಭಾಗದಲ್ಲಿರುವ ಮುಖ್ಯ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ದಿನ ನಿತ್ಯ ಹರಿಯುವ ಕೊಳಚೆ ನೀರಿನ ಬಗ್ಗೆ ಯಾರೊಬ್ಬ ಚುನಾಯಿತ ಜನ ಪ್ರತಿನಿಧಿಗಳಾಗಲಿ, ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಇದರ ಬಗ್ಗೆ ಸ್ವಲ್ಪವು ಗಮನವೇ ಇಲ್ಲ.
ಗಾಂಧೀಜಿಯ ಕನಸು ಸ್ವಚ್ಚಭಾರತ ಅಭಿಯಾನವನ್ನು ಪ್ರಧಾನ ಮಂತ್ರಿ ದೇಶದೆಲ್ಲಡೆ ಜಾರಿಗೆ ತಂದು ಇದೊಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾಡಿದರು. ಈ ಕಾರ್ಯಕ್ರಮವನ್ನು ಸಾರ್ವಜನಿಕರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲು ನ್ಯಾಯಾಧೀಶರುಗಳು ಬೆಳ್ಳಂಬೆಳಿಗ್ಗೆ ಪೊರಕೆ ಮತ್ತು ಸಲಕೆಗಳನ್ನು ಹಿಡಿದು ಸ್ವಚ್ಚಮಾಡಿ ತೋರಿಸಿದರು ಈ ಪಟ್ಟಣದ ಯಾವೊಬ್ಬ ನಾಗರೀಕನಾಗಲಿ ಪುರಪಿತ್ರಗಳಾಗಲಿ, ಇದರ ಬಗ್ಗೆ ಸ್ವಲ್ಪ ಕೂಡ ಅರಿವು ಮೂಡದೇ ಇರುವುದು ದುರಾದೃಷ್ಟಕರ.
ರಾಷ್ಟ್ರೀಐ ಹೆದ್ದಾರಿ 13 ಪಟ್ಟಣದಮಧ್ಯ ಭಾಗದಲ್ಲಿ ಹಾದು ಹೋಗಿದೆ. ಇದರ ಜೊತೆಗೆ ರಾಜ್ಯ ಹೆದ್ದಾರಿ 208-ಸಹ ಈ ವೃತ್ತದಲ್ಲಿ ಕೂಡಿ ಮುಂದೆ ದೂರದ ನಗರಗಳಿಗೆ ಸಂಚಾರ ಮಾಡುತ್ತವೆ. ದಿನ ನಿತ್ಯ ಈ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ ಸಿಗದಂತೆ ಪಟ್ಟಣದ ವಿವಿಧ ಭಾಗಗಳಿಗೆ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಅದರ ಜೊತೆಗೆ ಪಟ್ಟಣದ ಮತ್ತು ಹೊರಗಿನಿಂದ ಸಾವಿರಾರು ಜನರು ಈ ವೃತ್ತದ ಮೂಲಕವೇ ಸಂಚಾರ ಮಾಡಬೇಕು. ಆದರೆ ರಸ್ತೆ ಯಾವುದು ಕೊಳಚೆ ನೀರು ಹೋಗುವ ಚರಂಡಿ ಯಾವುದು ಎಂಬುದು ವಿಂಗಡಣೆ ಆಗಿಲ್ಲ.
ಪಟ್ಟಣದ ಎಲ್ಲಾ ವಾರ್ಡುಗಳಿಂದ ದಿನ ನಿತ್ಯ ಹರಿದು ಬರುವ ಕೊಳಚೆ ಚರಂಡಿ ನೀರು ರಸ್ತೆಯಲ್ಲೆ ಹೋಗಬೇಕು. ಮಳೆಗಾಲದಲ್ಲಿ ಚರಂಡಿ ಯಾವುದು ರಸ್ತೆ ಯಾವುದು ಎಂಬುದು ವಾಹನ ಸವಾರರಿಗೆ ಪಾದಚಾರಿಗಳಿಗೆ ಗೊತ್ತೆ ಆಗುವುದಿಲ್ಲ. ರಸ್ತೆಯ ತುಂಬಾ ಪಟ್ಟಣದ ಕೊಳಚೆ ನೀರು ದುರ್ವಾಸನೆ ಬರುತ್ತಿದ್ದರು ಪಟ್ಟಣದ ನಾಗರೀಕರು ಅಲ್ಲಿ ಆಜು ಬಾಜು ಕಿರುವ ಗೂಡಂಗಡಿಗಳಲ್ಲಿ ಟೀ, ಕಾಫಿ, ತಿಂಡಿ ತಿನಿಸುಗಳನ್ನು ಯಾವುದೇ ಚಿಂತೆ ಇಲ್ಲದೆ ಉಪಯೋಗಿಸಿ ತಿಂದ ಪ್ಲಾಸ್ಟಿಕ್ ಲೋಟಗಳು ಕಾಗದಗಳನ್ನು ಅಲ್ಲಿಯೇ ಬಿಸಾಡುತ್ತಾರೆ.
ಈ ಎಲ್ಲಾ ಘನ ತಾಜ್ಯ ಕೊಳಚೆ ವಸ್ತುಗಳು ರಸ್ತೆಯಲ್ಲಿ ಹಾದು ಹೋಗಿರುವ ಕೊಳಚೆ ಚರಂಡಿ ನೀರು ಅಸಹ್ಯವಾಗಿ ಹರಿಯುತ್ತಿದ್ದರು ಇಲ್ಲಿ ನಾಗರೀಕರು ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ಗಮನಕ್ಕೆ ತರದೆ ಏನು ಗೊತ್ತಿಲ್ಲದಂತೆ ವರ್ತಿಸುತ್ತಾರೆ. ಇಡೀ ಪ್ರದೇಶ ಸುಮಾರು 2 ರಿಂದ 3 ಕಿ.ಮೀ., ದೂರ ರಸ್ತೆ ಕೊಳಚೆ ನೀರಿನಿಂದ ಗೊಬ್ಬು ವಾಸನೆಯನ್ನು ಅಲ್ಲಿ ಹಾದು ಹೋಗುವ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಪಟ್ಟಣ ಪಂಚಾಯಿತಿಗೆ ಶಾಪ ಹಾಕುವುದು ಮಾಮೂಲಿಯಾಗಿದೆ.
ಪಟ್ಟಣ ಪಂಚಾಯಿತಿ ಸ್ವಚ್ಚತೆಯ ಉಸ್ತುವಾರಿ ಅಧಿಕಾರಿಯಾದ ಆರೋಗ್ಯಾಧಿಕಾರಿ ನೇಮಕ ಮಾಡಿದ್ದರು ಈ ಅಶುಚಿತ್ವ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ ಎನ್ನುವುದು ಆ ಸ್ಥಳದಲ್ಲಿರುವ ಆ ದೃಶ್ಯಗಳನ್ನು ನೋಡಿದರೆ ಗೊತ್ತಾಗುತ್ತದೆ. ಈ ದುರ್ವಾಸನೆ ಚರಂಡಿ ಮುಂದೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಐಟೆಕ್ ಉರ್ದು ಮತ್ತು ಕನ್ನಡ ಸ. ಹಿ. ಪ್ರಾ. ಮಾದರಿ ಶಾಲೆಯಲ್ಲಿರುವ ನೂರಾರು ಮಕ್ಕಳು ಆ ಕೊಳಚೆ ನೀರಿನಲ್ಲಿ ಓಡಾಡುವ ಸ್ಥಿತಿಯನ್ನು ಚುನಾಯಿತರಾಗಿರುವ ಪ.ಪಂ ಜನಪ್ರತಿನಿಧಿಗಳಿಗೆ ಸ್ವಲ್ಪವು ಅರಿವಿಲ್ಲ.
ಈ ರಸ್ತೆ ಮತ್ತು ಮುಖ್ಯ ವೃತ್ತದ ಮೂಲಕ ಐತಿಹಾಸಿಕ ಪ್ರಸಿದ್ದ ಶ್ರೀ ಗಣಪತಿ ದೇವಾಲಯಕ್ಕೆ ದಿನ ನಿತ್ಯ ರಾಜ್ಯದ ನಾನಾ ನಗರಗಳಿಂದ ಸಾವಿರಾರು ಭಕ್ತರು ಈ ಮೂಲಕವೇ ಸಂಚಾರ ಮಾಡುತ್ತಾರೆ. ಈ ಅಸಯ್ಯ ದೃಶ್ಯವನ್ನು ನೋಡಿ ಮನನೊಂದು ಮುಂದೆ ಹೋಗುತ್ತಾರೆ.
ಹಲವಾರು ಸರ್ಕಾರಿ ಕಚೇರಿಗಳು ಅಕ್ಕಪಕ್ಕದಲ್ಲಿವೆ, ಅದರಲ್ಲು ತಾಲ್ಲುಕು ಕಚೇರಿಯು ಸಹ ಪಕ್ಕದಲ್ಲಿದೆ. ಇಷ್ಟೊಂದು ಕೊಳಚೆ ದಿನ ನಿತ್ಯ ಪರಿಸರವನ್ನು ಹಾಳು ಮಾಡುತ್ತಿದ್ದರು ತಾಲ್ಲುಕು ಮಟ್ಟದ ಅಧಿಕಾರಿಗಳಿಗೆ ಇದರ ಅರಿವೆ ಇಲ್ಲ. ಈ ರಸ್ತೆ ಮತ್ತು ಚರಂಡಿ ದ್ವಂದ್ವ ನೀತಿಯಾಗಿದೆ. ಕಾರಣ ರಾಷ್ಟ್ರೀಯ ಹೆದ್ದಾರಿ13 ಪ.ಪಂ. ವ್ಯಾಪ್ತಿಗೆ ಬರುತ್ತಿಲ್ಲ. ಅದರ ಪಕ್ಕದಲ್ಲಿ ಚರಂಡಿ ನಿರ್ಮಿಸಲು ಅವರಿಗೆ ಜಾಗಸೇರುತ್ತಿಲ್ಲ. ಳೋಕೋಪಯೋಗಿ ಇಲಾಖೆಯು ಸಹ ರಸ್ತೆ ಚರಂಡಿ ಸೇರುತ್ತಿಲ್ಲ. ಈ ರಸ್ತೆ ಮತ್ತು ಚರಂಡಿ ಪಟ್ಟಣದ ವ್ಯಾಪ್ತಿಯಲ್ಲಿ 3 ಕಿ.ಮೀ. ದೂರ ರಾಷ್ಟ್ರೀಯ ಹೆದ್ದಾರಿಗೆ ಸೇರಿದೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇದರ ಬಗ್ಗೆ ಉದಾಸೀನ ನಿರ್ಲಕ್ಷೆ ಮನೋಭಾವವನ್ನು ಕಾಣಬಹುದಾಗಿದೆ.
