ಚಳ್ಳಕೆರೆ
ಯುವ ಜನಾಂಗವನ್ನು ಹೆಚ್ಚು ಆಕರ್ಷಣೆ ಮಾಡುತ್ತಿರುವ ಕ್ರೀಡಾ ಕ್ಷೇತ್ರದ ಸಂಪೂರ್ಣ ಬೆಳವಣಿಗೆಗಾಗಿ ಎಲ್ಲರೂ ಸಹಕಾರ ನೀಡಬೇಕೆಂದೆ. ವಿಶೇಷವಾಗಿ ಇಂದು ಹೆಚ್ಚು ಜನಪ್ರಿಯವಾಗಿರುವ ಕ್ರಿಕೆಟ್ ಆಟ ನಮ್ಮ ರಾಷ್ಟ್ರಕ್ಕೆ ವಿಶ್ವಮನ್ನಣೆಯನ್ನು ತಂದುಕೊಟ್ಟಿದೆ.
ಅದ್ದರಿಂದ ಭಾರತೀಯ ಜನತಾ ಪಕ್ಷದ ಯುವ ಘಟಕ ಕಳೆದ ಐದು ವರ್ಷಗಳಿಂದ ವಿವಿಧ ಹಂತಗಳಲ್ಲಿ ಕ್ರೀಡೆಗಳನ್ನು ಏರ್ಪಡಿಸುವ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮೇಶ್‍ಗೌಡ ತಿಳಿಸಿದರು.
ಅವರು, ಮಂಗಳವಾರ ಇಲ್ಲಿನ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಧಾಕರ ಕ್ರೀಡಾಂಗಣದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಘಟಕ ಹಮ್ಮಿಕೊಂಡಿದ್ದ ಮೂರು ದಿನಗಳ ರಾಜ್ಯಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಪ್ರತಿಯೊಬ್ಬ ನಾಗರೀಕನಿಗೂ ಸರ್ಕಾರಿ ಸೌಲಭ್ಯ ದೊರೆಯುವಂತೆ ಮಾಡುವಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಯಿತು. ವಿಶೇಷವಾಗಿ ರಾಷ್ಟ್ರ ಮಟ್ಟದಲ್ಲಿ ಶೌಚಾಲಯ ಅಂದೋಲನ, ಡಿಜಿಟಲ್ ಇಂಡಿಯಾ, ಬೇಟಿ ಪಡವೋ ಬೇಟಿ ಬಚಾವೋ ಮುಂತಾದ ಯೋಜನೆಗಳು ಜನಸಾಮಾನ್ಯರ ಏಳಿಗೆಗೆ ಕಾರಣವಾಗಿವೆ. ಮತ್ತೊಮ್ಮೆ ಈ ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸಲು ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಮತ್ತೊಮ್ಮೆ ಅಧಿಕಾರ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಯುವ ಪಡೆ ಕಾರ್ಯ ನಿರ್ವಹಿಸಬೇಕೆಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ, ಕಳೆದ ಐದು ವರ್ಷಗಳ ಕೇಂದ್ರ ಸರ್ಕಾರ ಆಡಳಿತ ಇಂದು ಗ್ರಾಮೀಣ ಭಾಗಗಳ ಜನರನ್ನು ಜಾಗೃತೆಗೊಳಿಸಿದೆ. ವಿಶೇಷವಾಗಿ ಪ್ರತಿ ಗ್ರಾಮದಲ್ಲೂ ನರೇಂದ್ರಮೋದಿಯವರ ಕಾರ್ಯದಕ್ಷತೆಯ ಬಗ್ಗೆ ಮೆಚ್ಚಿಗೆ ವ್ಯಕ್ತವಾಗುತ್ತಿದೆ. ಕಳಂಕರಹಿತ, ಭ್ರಷ್ಟಾಚಾರವಿಲ್ಲದ, ದೇಶದ ಗೌರವವನ್ನು ವಿದೇಶಗಳಲ್ಲೂ ಸಂರಕ್ಷಿಸಿದ ಕೀರ್ತಿ ಪ್ರಧಾನ ಮಂತ್ರಿಯವರದ್ದು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವ ಜವಾಬ್ದಾರಿ ಯುವ ಜನತೆ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಯುವ ಘಟಕದ ಅಧ್ಯಕ್ಷ ಟಿ.ಮಂಜುನಾಥ ಮಾತನಾಡಿ, ಭಾರತೀಯ ಜನತಾ ಪಕ್ಷದ ಜಿಲ್ಲಾ ಯುವ ಘಟಕ ರಾಜ್ಯಮಟ್ಟದ ಕ್ರೀಡೆ ನಡೆಸುವ ಯೋಜನೆಯನ್ನು ರೂಪಿಸಿದ ಕೂಡಲೇ ಚಳ್ಳಕೆರೆಯಲ್ಲಿ ನಡೆಸಬೇಕೆಂಬ ಒತ್ತಾಯ ಎಲ್ಲೆಡೆ ಕೇಳಿ ಬಂತು.
ಈ ಹಿನ್ನೆಲೆಯಲ್ಲಿ ಎಲ್ಲಾ ಮುಖಂಡರ ಸಹಕಾರದಿಂದ ಈ ಕ್ರೀಡೆಯನ್ನು ಆಯೋಜಿಸಲಾಗಿದೆ. ಒಟ್ಟು 26 ತಂಡಗಳು ಭಾಗವಹಿಸಿದ್ದು, ಜನವರಿ 17ರಂದು ಪೈನಲ್ ಪಂದ್ಯ ನಂತರ ಸಮಾರೋಪ ಸಮಾರಂಭ ನಡೆಯಲಿದೆ. ಯುವಕ ಜನಾಂಗಕ್ಕೆ ಉದ್ಯೋಗವನ್ನು ದೊರಕಿಸುವ ಸಾಮಥ್ರ್ಯ ಕ್ರಿಕೆಟ್ ಸೇರಿದಂತೆ ಅನೇಕ ಪಂದ್ಯಗಳಲ್ಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಘಟಕ ಸದಾ ಕ್ರೀಡೆಯನ್ನು ಪ್ರೋತ್ಸಾಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ಟಿ.ಜೆ.ನರೇಂದ್ರನಾಥ, ಸ್ಲಂ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‍ಯಾದವ್, ಜಿಲ್ಲಾ ಉಪಾಧ್ಯಕ್ಷರಾದ ಬಾಳೆಮಂಡಿ ರಾಮದಾಸ್, ಬಿ.ಎಸ್.ಶಿವಪುತ್ರಪ್ಪ, ಪ್ರಧಾನ ಕಾರ್ಯದರ್ಶಿ ಮುರಳಿ, ಜಯಪಾಲಯ್ಯ, ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ, ನಗರಸಭಾ ಸದಸ್ಯ ಎಸ್.ಜಯಣ್ಣ, ಪಾಲಮ್ಮ, ಯುವ ಘಟಕ ಅಧ್ಯಕ್ಷ ಆರ್.ನಾಗೇಶ್‍ನಾಯಕ, ವಿನಯ್, ತಿಪ್ಪೇಸ್ವಾಮಿ, ಕರೀಕೆರೆ ತಿಪ್ಪೇಸ್ವಾಮಿ, ಜಿ.ಕೆ.ವೀರಣ್ಣ, ಬಂಡೆ ರಂಗಪ್ಪ, ಬೋರನಾಯಕ, ಡಿ.ಎಂ.ತಿಪ್ಪೇಸ್ವಾಮಿ, ಅಮೀರ್‍ಖಾನ್, ಮಂಜುನಾಥ, ಮಾತೃಶ್ರೀಮಂಜುನಾಥ, ಈಶ್ವರನಾಯಕ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
