ರಾಣೇಬೆನ್ನೂರು
ತೊಟ್ಟಿಲು ತೂಗುವ ಕೈ ಜಗತ್ತನ್ನು ತೂಗಬಲ್ಲದು, ಹೆಣ್ಣು ಕುಟುಂಬದ ಕಣ್ಣಾಗಿ, ತಾಯಿಯಾಗಿ ಮಗಳಾಗಿ, ಅತ್ತೆಯಾಗಿ, ಸೊಸೆಯಾಗಿ, ಕಾರ್ಯನಿರ್ವಹಿಸುತ್ತಾಳೆ, ಜನನಿ ತಾನೆ ಮೊದಲ ಗುರು ಜನನಿಯಿಂದ ಪಾಠ ಕಲಿತ ಜನರು ಧನ್ಯರು, ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯಾ ಸತ್ಯ ಪ್ರಾಮಾಣಿಕತೆಯ ವಿಷಯಗಳ ಬಗ್ಗೆ ಮಕ್ಕಳ ಮನದಲ್ಲಿ ಮೂಡುವ ಹಾಗೆ ಕಥೆಯ ರೂಪದಲ್ಲಿ ತಿಳಿಸಲು ಪ್ರಯತ್ನಿಸಿ, ಪುರುಷ ಪ್ರಧಾನ ಸಮಾಜವಾಗಿದ್ದರೂ ಮಗುವಿನ ಲಾಲನೆ ಪಾಲನೆ ಮಹಿಳೆಯ ಜವಾಬ್ದಾರಿಯಾಗಿರುತ್ತದೆ, ಮಹಿಳೆಯರಲ್ಲಿ ಎಲ್ಲದನ್ನೂ ತಾಳ್ಮೆಯಿಂದ ನಡೆದುಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಿರುತ್ತಾನೆ ಎಂದು ರಾಣೇಬೆನ್ನೂರ ಲಯನ್ಸ್ ಶಾಲೆಯ ಶಿಕ್ಷಕಿ ಇಂದಿರಾ ಕೊಪ್ಪದ ಹೇಳಿದರು.
ಅವರು ರಾಣೇಬೆನ್ನೂರು ತಾಲೂಕಿನ ಹೊಳೆಆನ್ವೇರಿ ಗ್ರಾಮದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ರಾಣೇಬೆನ್ನೂರು, ಸ್ಥಳೀಯ ಅಂಗನವಾಡಿಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು,ಕಾರ್ಯಕ್ರಮದಲ್ಲಿ ಗ್ರಾಮದ 5 ಜನ ಹಿರಿಯ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು/ನಾಗಮ್ಮ ಕಡೂರು, ಕೆಂಚಮ್ಮ ದೋಣಗೊಂದಿ, ಬಸಮ್ಮ ಮುದೇನೂರು, ಲಕ್ಷ್ಮಮ್ಮ ನಾಗೇನಹಳ್ಳಿ, ಹೊನ್ನಮ್ಮ ಯಲ್ಲನಾಯ್ಕರ್, ಅಂಗನವಾಡಿ ಮೇಲ್ವಿಚಾರಕಿ ಸುಶೀಲಮ್ಮ ಕೆ, ಕಾರ್ಯಕರ್ತೆಯರಾದ ಚಂದ್ರಮತಿ ಬಣಕಾರ, ರತ್ನಮ್ಮ ದೋಣಗೊಂದಿ,ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷ ಜಯಣ್ಣ ಮಠದ, ಎಂ ಆರ್ ಕನಗೌಡ್ರ, ಗ್ರಾಮದ ಇತರರು ಇದ್ದರು.
ಸಮೀಪದ ಹೊಳೆಆನ್ವೇರಿ ಗ್ರಾಮದ ಬನಶಂಕರಿ ದೇವಾಲಯದಲ್ಲಿ ಗುರುವಾರ ಮಹಿಳಾ ದಿನಾಚರಣೆಯ ಅಂಗವಾಗಿ ಹಿರಿಯ ಮಹಿಳೆಯರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.