ಸೇನೆಯ ಎರಡು ಹೆಲುಕಾಪ್ಟರ್‌ ಡಿಕ್ಕಿ: 10 ಜನರ ಸಾವು

ಮಲೇಷ್ಯಾ

    ಲುಮುಟ್ ನಗರದಲ್ಲಿ ಕಸರತ್ತು ನಡೆಸುತ್ತಿದ್ದಾಗ ಸೇನೆಯ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಈ ಅಪಘಾತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ 10 ಮಂದಿ ಸಾವನ್ನಪ್ಪಿದ್ದಾರೆ.

    ಸೆನೆಯ ಹೆಲೆಕಾಪ್ಟರ್‌ ಪರಸ್ಪರ ಡಿಕ್ಕಿ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯ ವಕ್ತಾರರ ಪ್ರಕಾರ, ಅಪಘಾತದಲ್ಲಿ ಯಾರೊಬ್ಬರು ಬದುಕಿರುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ತಿಳಿಸಿದ್ದಾರೆ. ಎರಡೂ ಹೆಲಿಕಾಪ್ಟರ್‌ಗಳಲ್ಲಿ ಒಟ್ಟು 10 ನೌಕಾಪಡೆ ಸಿಬ್ಬಂದಿಗಳಿದ್ದು, ಅವರಲ್ಲಿ ಯಾರೂ ಬದುಕುಳಿದಿಲ್ಲ.

    ಎರಡೂ ಹೆಲಿಕಾಪ್ಟರ್‌ಗಳು ಟೇಕ್ ಆಫ್ ಆಗಿದ್ದು, ಕೆಲವೇ ಸೆಕೆಂಡುಗಳಲ್ಲಿ ಎರಡರ ರೋಟರ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆದಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಇದಾದ ನಂತರ, ಆ ಎರಡೂ ಹೆಲಿಕಾಪ್ಟರ್‌ಗಳು ತುಂಡುಗಳಾಗಿ ನೆಲದ ಮೇಲೆ ಬೀಳುತ್ತಿರುವುದು ಕಂಡು ಬಂದಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್‌ಗಳು ಆಗಸ್ಟಾ ವೆಸ್ಟ್‌ ಲ್ಯಾಂಡ್ AW139 ಮತ್ತು ಯುರೋಕಾಪ್ಟರ್ ಫೆನೆಕ್ ಎಂದು ತಿಳಿದು ಬಂದಿವೆ.

    ಎರಡೂ ಹೆಲಿಕಾಪ್ಟರ್‌ಗಳು ಮುಂದಿನ ತಿಂಗಳು ನಡೆಯಲಿರುವ ನೌಕಾಪಡೆಯ ಫ್ಲೀಟ್ ಓಪನ್ ಡೇ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅಭ್ಯಾಸ ಮಾಡುತ್ತಿದ್ದವು. ಇದೇ ವೇಳೆ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದವು. ಮಲೇಷಿಯಾದ ಸಶಸ್ತ್ರ ಪಡೆಗಳ ಹೆಲಿಕಾಪ್ಟರ್‌ಗಳು ಇಂದು ಬೆಳಿಗ್ಗೆ ಪೆರಾಕ್‌ನ ಲುಮುಟ್‌ನಲ್ಲಿರುವ ರಾಯಲ್ ಮಲೇಷಿಯನ್ ನೇವಿ ನೆಲೆಯಲ್ಲಿ ವ್ಯಾಯಾಮ ನಡೆಸುತ್ತಿದ್ದಾಗ ಅಪಘಾತವಾಗಿದೆ ಎಂದು ಮಾಧ್ಯಮ ವರದಿಗಳ ಪ್ರಕಾರ ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap