ಪಾವಗಡ:
100 ರಲ್ಲಿ ಹೋಗಬೇಡಿ, 108 ರಲ್ಲಿ ಬರಬೇಡಿ,ನಿಮಗಾಗಿ ಅಲ್ಲ ನಿಮ್ಮವರಿಗಾಗಿ ಹೆಲ್ಮೆಟ್ ದರಿಸಿ, ಅತಿ ವೇಗ, ತಿಥಿ ಬೇಗ ಎಂಬ ಘೋಷವಾಕ್ಯಗಳೊಂದಿಗೆ ಪಾವಗಡ ಯುವಸೇನೆವತಿಯಿಂದ ಸೋಮವಾರ ಪಾವಗಡ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಅಪಘಾತ ತಡೆಗಟ್ಟುವ ಹೆಲ್ಮೆಟ್ ಜಾಗೃತಿ ಮೂಡಿಸುವ ಜಾಥಾವನ್ನು ನಡೆಸಲಾಯಿತು. ಪೋಲೀಸ್ ಇಲಾಖೆ, ಹಾಗೂ ಸರ್ಕಾರಿ ಐ.ಟಿ.ಐ. ವಿದ್ಯಾರ್ಥಿಗಳು ಭಾಗವಹಿಸಿದ್ದರು.
