ಮದುವೆ ಮಂಟಪದಲ್ಲಿ ಅಗ್ನಿ ಅವಘಡ : 100 ಸಾವು

ಬಾಗ್ದಾದ್ :

    ಉತ್ತರ ಇರಾಕ್ ನ ಮದುವೆ ಮಂಟಪವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಮಂದಿ ಮೃತಪಟ್ಟು, 150 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

    ಇರಾಕ್ ಹಮ್ದಾನಿಯಾ ಪ್ರದೇಶದ ನಿನೆವೆ ಪ್ರಾಂತ್ಯದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇದು ರಾಜಧಾನಿ ಬಾಗ್ದಾದ್ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ ದೂರದಲ್ಲಿರುವ ಉತ್ತರ ನಗರ ಮೊಸುಲ್ನ ಹೊರಗೆ ನಡೆದಿರುವಂತ ಘಟನೆಯಾಗಿದೆ.

‌    ಬೆಂಕಿಯ ಕಾರಣದ ಬಗ್ಗೆ ತಕ್ಷಣದ ಮಾಹಿತಿ ತಿಳಿದು ಬಂದಿಲ್ಲ. ಟೆಲಿವಿಷನ್ ದೃಶ್ಯಾವಳಿಗಳು ಮದುವೆ ಮಂಟಪದ ಒಳಗೆ ಸುಟ್ಟುಹೋದ ಅವಶೇಷಗಳನ್ನು ತೋರಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ.

    ಆರೋಗ್ಯ ಅಧಿಕಾರಿಗಳು ಸರ್ಕಾರಿ ಸ್ವಾಮ್ಯದ ಇರಾಕಿ ಸುದ್ದಿ ಸಂಸ್ಥೆ ಮೂಲಕ ಸಾವಿನ ಅಂಕಿಅಂಶವನ್ನು ನೀಡಿದರು. ಈ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap