ಚಿನ್ನ ಪ್ರಿಯರಿಗೆ ಗುಡ್‌ ನ್ಯೂಸ್‌ : ಗ್ರಾಂಗೆ 100 ರೂ ಇಳಿಕೆ

ಮುಂಬೈ:

    ಚಿನ್ನದ ದರ ಇಂದು ಕೊಂಚ ಇಳಿಕೆಯಾಗಿದ್ದು, ಶನಿವಾರ ಚಿನ್ನದ ಬೆಲೆ 100 ರೂಗಳಷ್ಟು ಇಳಿಕೆಯಾಗಿದೆ.ಇಂದು ಅಂದರೆ ಶನಿವಾರ 22 ಕ್ಯಾರಟ್‌ ಚಿನ್ನದ ದರದಲ್ಲಿ 100 ರೂ ಇಳಿಕೆಯಾಗಿದ್ದು, 24 ಕ್ಯಾರಟ್‌ ಬಂಗಾರದ ಧಾರಣೆ ಗ್ರಾಂಗೆ 110ರೂ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

   22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ದರ 6,470ಕ್ಕೆ ಇಳಿಕೆಯಾಗಿದ್ದು, ಅಂತೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 64,700ಕ್ಕೆ ಇಳಿಕೆಯಾಗಿದೆ.ಅಂತೆಯೇ 24 ಕ್ಯಾರಟ್‌ ನ ಒಂದು ಗ್ರಾಂ ಚಿನ್ನದ ಬೆಲೆ 7,058 ರೂ ಇಳಿಕೆಯಾಗಿದ್ದು, 24 ಕ್ಯಾರಟ್‌ ನ 10 ಗ್ರಾಂ ಚಿನ್ನದ ಬೆಲೆ 70,580 ರೂ ಗೆ ಇಳಿಕೆಯಾಗಿದೆ.

   ಇನ್ನು ಬೆಳ್ಳಿಯ ಬೆಲೆ ಗ್ರಾಂಗೆ ಅಲ್ಪ ಇಳಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರದಲ್ಲಿ 25 ಪೈಸೆ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ 85.75 ರೂಗೆ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ 857.50 ರೂಗೆ ಮತ್ತು 1 Kg ಬೆಳ್ಳಿದರ 85,750 ರೂ ಗೆ ಏರಿಕೆಯಾಗಿದೆ.

Recent Articles

spot_img

Related Stories

Share via
Copy link