ತುಮಕೂರು : ಇತರ ರೋಗಿಗಳ ಸೇವೆಗೆ 108 ಸಿದ್ಧ!!

 ತುಮಕೂರು: 

     ಜಿಲ್ಲೆಯಲ್ಲಿರುವ 108 ಆಂಬುಲೆನ್ಸ್ ಗಳ ಸೇವೆಯನ್ನು ಪಡೆಯುವವರಿಲ್ಲದೇ, 25ಕ್ಕೂ ಹೆಚ್ಚು ಆಂಬುಲೆನ್ಸ್‍ಗಳು ಕಾರ್ಯ ಚಟುವಟಿಕೆ ಕುಂಠಿತವಾಗಿದ್ದು, ಕೋವಿಡ್ ಸೇವೆಯಲ್ಲಿ 108 ಆಂಬುಲೆನ್ಸ್‍ಗಳು ಬಳಕೆಯಾಗುತ್ತಿವೆ ಎನ್ನುವ ಆತಂಕದಿಂದ ಜನರು 108 ಸೇವೆಯನ್ನು ಮಿತವಾಗಿ ಬಳಸುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಂದಿದೆ.

      ಜಿವಿಕೆ ಇಎಂಆರ್‍ಐ ಅಡಿಯಲ್ಲಿ ತುಮಕೂರು ಜಿಲ್ಲೆಗೆ 35, 108 ಆಂಬ್ಯುಲೆನ್ಸ್‍ಗಳು ನೀಡಲಾಗಿದ್ದು, ಕೋವಿಡ್‍ಗಾಗಿ ಪ್ರತಿ ತಾಲ್ಲೂಕಿಗೆ ಒಂದರಂತೆ 10 ಆಂಬ್ಯುಲೆನ್ಸ್‍ಗಳನ್ನು ಮೀಸಲಿಡಲಾಗಿದ್ದು, ಉಳಿದ 25 ಆಂಬ್ಯುಲೆನ್ಸ್‍ಗಳು ಇತರ ರೋಗಿಗಳ ಸೇವೆಗೆ ಮೀಸಲಿರಿಸಲಾಗಿದ್ದು, ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇತರ ರೋಗಿಗಳು 108 ಆಂಬ್ಯುಲೆನ್ಸ್ ಬಳಸುತ್ತಿದ್ದು, ಉಳಿದವರಲ್ಲಿ ಕೋವಿಡ್ ಆತಂಕ ಮನೆ ಮಾಡಿದೆ ಎನ್ನುತ್ತಾರೆ ಆಂಬ್ಯುಲೆನ್ಸ್ ನಿರ್ವಹಣೆ ಮಾಡುತ್ತಿರುವ ಜಿವಿಕೆ ಸಿಇಒ ಹನುಮಂತಪ್ಪ.

 ಖಾಸಗಿ ಆಂಬ್ಯುಲೆನ್ಸ್‍ಗೆ ದುಪ್ಪಟ್ಟು ದರ:

      ಸರ್ಕಾರ 108 ಆಂಬ್ಯುಲೆನ್ಸ್ ಮೂಲಕ ಉಚಿತವಾಗಿ ಸೇವೆಯನ್ನು ಒದಗಿಸಲು ಮುಂದಾಗಿದ್ದರು ಸಹ ಕೋವಿಡ್ ರೋಗಿಗಳ ಸೇವೆಗೆ 108 ಆಂಬ್ಯುಲೆನ್ಸ್‍ಗಳು ಬಳಕೆಯಾಗುತ್ತಿವೆ ಎನ್ನುವ ಆತಂಕದಿಂದಲೇ, 108 ಸೇವೆಯನ್ನು ಬಳಸಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.

      108 ಆಂಬ್ಯುಲೆನ್ಸ್‍ಗಳ ಬಳಕೆಗೆ ಸಾರ್ವಜನಿಕರು ಹಿಂದೇಟು ಹಾಕುತ್ತಿರುವುದರಿಂದ ಖಾಸಗಿ ಆಂಬ್ಯುಲೆನ್ಸ್‍ಗಳಿಗೆ ಬೇಡಿಕೆ ಹೆಚ್ಚಿದ್ದು, ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚಿನ ದರವನ್ನು ನೀಡಿ, ಖಾಸಗಿ ಆಂಬ್ಯುಲೆನ್ಸ್‍ಗಳ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ, ಕೋವಿಡ್ ಮತ್ತು ಕೋವಿಡೇತರ ರೋಗಿಗಳಿಗಾಗಿ ಪ್ರತ್ಯೇಕವಾಗಿ ಆಂಬ್ಯುಲೆನ್ಸ್ ನಿರ್ವಹಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ವ್ಯವಸ್ಥಾಪಕ ಹಫೀಜ್ ಮುಲ್ಲಾ ತಿಳಿಸಿದರು.

ಉಚಿತ ಸೇವೆ ಪಡೆಯಿರಿ:

      ಕೋವಿಡೇತರ ರೋಗಿಗಳ ಸೇವೆಗಾಗಿ ಪ್ರತ್ಯೇಕವಾಗಿ ಆಂಬ್ಯುಲೆನ್ಸ್‍ಗಳನ್ನು ಜಿವಿಕೆ ಇಎಂಆರ್‍ಐ ನಿರ್ವಹಣೆ ಮಾಡುತ್ತಿದ್ದು, ಸರ್ಕಾರ ಉಚಿತವಾಗಿ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತಿದ್ದು, 108 ಆಂಬ್ಯುಲೆನ್ಸ್‍ಗಳ ಉತ್ತಮ ಸೇವೆಯನ್ನು ಪರಿಗಣಿಸಿ ಜಿಲ್ಲಾ ಕುಟುಂಬ ಮತ್ತು ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ಪ್ರಶಂಸಾನ ಪತ್ರವನ್ನು ನೀಡಿದ್ದು ಸರ್ಕಾರದ ಉಚಿತ ಸೇವೆ ಪಡೆದುಕೊಳ್ಳುವಂತೆ ವಿಭಾಗೀಯ ವ್ಯವಸ್ಥಾಪಕ ಯತೀಶ್ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link