ಖಾರ್ಟೂಮ್:
ರಾಜಧಾನಿ ಖಾರ್ಟೂಮ್‌ನ ಹೊರವಲಯದಲ್ಲಿ ಮಂಗಳವಾರ ಸೂಡಾನ್ ಮಿಲಿಟರಿ ವಿಮಾನವೊಂದು ಪತನಗೊಂಡಿದ್ದು, ಹಲವಾರು ಅಧಿಕಾರಿಗಳು,ನಾಗರಿಕರು ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ಸೇನೆ ಹೇಳಿದೆ.
ಸೇನಾ ವಿಮಾನವು ವಾಯು ನೆಲೆಯಿಂದ ಟೇಕ್ ಆಫ್ ಆಗುವ ಸಮಯದಲ್ಲಿ ಪತನಗೊಂಡಿದ್ದು, ಸೇನಾ ಸಿಬ್ಬಂದಿ, ನಾಗರಿಕರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಗ್ನಿಶಾಮಕ ತಂಡಗಳು ಅಪಘಾತದ ಸ್ಥಳದಲ್ಲಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಸೇನೆ ತಡರಾತ್ರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ತಾಂತ್ರಿಕ ದೋಷದಿಂದ ಆಂಟೊನೊವ್ ವಿಮಾನ ಪತನವಾಗಿರುವುದಾಗಿ ಮಿಲಿಟರಿ ಮೂಲವೊಂದು ಈ ಹಿಂದೆ ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿತ್ತು. ವಾಡಿ ಸೀಡ್ನಾ ವಾಯುನೆಲೆಯ ಬಳಿ ಅಪಘಾತ ಸಂಭವಿಸಿದೆ. ಇದು ಒಮ್ದುರ್ಮನ್‌ನಲ್ಲಿರುವ ಸೇನೆಯ ಅತಿದೊಡ್ಡ ಸೇನಾ ಕೇಂದ್ರಗಳಲ್ಲಿ ಒಂದಾಗಿದೆ.
ಸುಡಾನ್‌ನಾದ್ಯಂತ ನೆರವು ನೀಡುವ ಸ್ವಯಂಸೇವಕರನ್ನು ಹೊಂದಿರುವ ಕರಾರಿ ರೆಸಿಸ್ಟೆನ್ಸ್ ಕಮಿಟಿ, 10 ಮೃತದೇಹಗಳು ಮತ್ತು ಗಾಯಾಳುಗನ್ನು ಓಮ್‌ಡುರ್‌ಮನ್‌ನಲ್ಲಿರುವ ಅಲ್-ನಾವೊ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.
