11ನೇ ವರ್ಷದ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಕೂಡ್ಲಿಗಿ:

          ನಮ್ಮ ಸ್ವಾರ್ಥಕ್ಕಾಗಿ ನಾವು ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಇದರಿಂದ ಒಂದು ಕಡೆ ಭೀಕರ ಮಳೆ ಬಂದರೆ, ಮತ್ತೊಂದು ಕಡೆ ಬರಗಾಲ ಉಂಟಾಗುತ್ತಿದೆ ಎಂದು ಪಂಚಮಸಾಲಿ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಜಿ. ಮಲ್ಲಿಕಾರ್ಜುನ ಗೌಡ ಹೇಳಿದರು. ನಾಗರಿಕ ಹಿತ ರಕ್ಷಣಾ ವೇದಿಕೆಯಿಂದ ನಡೆಸುತ್ತಿರುವ 11ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

          ನಾವು ಪರಿಸರದ ಸಮತೋಲನ ಕಾಯ್ದುಕೊಳ್ಳಲು ಮನೆಗೊಂದು ಮರ ಬೆಳೆಸಿ, ಉರಿಗೊಂದು ವನ ನಿರ್ಮಾಣ ಮಾಡಬೇಕು. ಹಬ್ಬದ ನೆಪದಲ್ಲಿ ಪಟಾಕಿ ಸಿಡಿಸುವುದು, ಅತಿಯಾದ ಶಬ್ದದ ಮೈಕ್ ಬಳಕೆ ಸೇರಿದಂತೆ ಪರಿಸರಕ್ಕೆ ಧಕ್ಕೆ ಉಂಟು ಮಾಡುವ ವಸ್ತುಗಳ ಬಳಕೆಯನ್ನು ಕೈಬಿಡಬೇಕು ಎಂದು ಹೇಳಿದರು.

          ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ಪಿ ಬಸವೇಶ್ವರ ವಹಿಸಿದ್ದರು. ಸಿಪಿಐ ಟಿ.ಆರ್. ನಹೀಮ್ ಆಹಮದ್, ಪಿಎಸ್‍ಐ ಎಂ. ಹಾಲೇಶ್, ಚಿತ್ರ ನಟ ಬಂಗಾರು ಹನುಮಂತು, ಯಶಸ್ಸುಶ್ರೇಯಾ ಪೆಟ್ರೋಲ್ ಬಂಕ್ ಮಾಲೀಕ ಎಚ್.ಎನ್.ಕೆ. ಕೊಟ್ರಯ್ಯ, ರಾಮ್ ಕಾಟ್ವ, ಪೀರಣ್ಣ ಕಾಲಾಲ್, ಮೇದರ್ ಆನಂದ್, ಪತ್ರಕರ್ತ ಬಿ. ನಾಗರಾಜ, ವೇದಿಕೆಯ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ಮಂಜುನಾಥ ಜನ್ನು ಹಾಗೂ ಸದಸ್ಯರು ಇದ್ದರು

           ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದ ಸೂರಜ್ ಎಸ್. ಜನ್ನು ಪರವಾಗಿ ಅವರ ತಂದೆ ಸುರೇಶ್ ಎಸ್. ಜನ್ನು, ಪ್ಯಾರ್ ಒಲಂಪಿಕ್ ಪದಕ ವಿಜೇತ ಅಂಗವಿಕಲ ಕ್ರೀಡಾಪಟು ಕೆ.ಎಂ. ಶರಣೇಶ ಹಾಗೂ ಪತ್ರಕರ್ತ ಭೀಮಣ್ಣ ಗಜಾಪುರ ಅವರನ್ನು ಸನ್ಮಾನ ಮಾಡಲಾಯಿತು. ನಂತರ ಎಸ್2 ಇವೆಂಟ್ಸ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link