ಹಾವೇರಿ
ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನಲ್ಲಿ ಹರಿಯುವ ಕುಮದ್ವತಿ ದಡದಲ್ಲಿ ತಲೆ ಎತ್ತಿ ನಿಂತ ಐತಿಹಾಸಿಕ ದೇವಲಾಯ ಒಳಗೊಂಡ ಸಾಂಸ್ಕøತಿಕ ಕೇಂದ್ರವಾಗಿ 12 ನೇ ಶತಮಾನದಲ್ಲಿ ನಿರ್ಮಾಣಗೊಂಡ ರಟ್ಟೀಹಳ್ಳಿ ಎಂಬ ಊರು. ಅಂದಿನ ಕಾಲದ ರಾಜ್ಯಭಾರ ನಡೆಸುವ ಕೆಂದ್ರವಾಗಿತ್ತು. ಅಂದಿನ ಸಮಕಾಲಿನದಲ್ಲಿ ಅಬಲೂರು. ಸಾತೇನಳ್ಳಿ, ಹಳ್ಳೂರು ಇವುಗಳ ಜೋತೆ ಪ್ರಸಿದ್ದಿ ಪಡೆದಿದ್ದವು. ಐತಿಹಾಸಿಕ ರಟ್ಟೀಹಳ್ಳಿಯನ್ನು ತಾಲೂಕಾಗಿ ಘೋಷಣೆ ಮಾಡಿದ್ದು ಈ ಭಾಗದ ಜನತೆಯ ಕನಸು ನನಸಾಗಿದೆ.
ರಟ್ಟೀಹಳ್ಳಿಯನ್ನು ಆಗ ರಟ್ಟಪಳ್ಳಿ ಎಂಬ ನಾಮದಿಂದ ಸಂಭೋಧಿಸುತ್ತಿದ್ದರು. ಕದಂಬರು ಒಂದು ಶಾಖೆಯಾಗಿ ನಿರ್ಮಿಸಿದ್ದು ಅಂದಿನ ಮೂಲ ಪುರುಷ ಭೀರದೇವ ಎಂಬುದು ತಿಳಿದು ಬರುತ್ತದೆ. ಇಲ್ಲಿಯ ಆರಾಧ್ಯದೈವ ಕದಂಬೇಶ್ವರ ಅಂದಿನ ಕಾಲದಲ್ಲಿ ಹಲವಾರು ಹಳ್ಳಿಗಳಿಂದ ಕೂಡಿದ ಆಡಳಿತ ಕೇಂದ್ರವಾಗಿದ್ದು ನಂತರ ರಾಷ್ಟ್ರಕೂಟರಿಂದ ಆಳ್ವಿಕೆಗೆ ಒಳಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ.
ಮೈಸೂರನ್ನು ಆಳಿದ ಮುಸ್ಲಿಂ ದೊರೆ ಹೈದರಾಲಿ ತನ್ನ ಸೈನ್ಯದ ಸೇನಾಪತಿ ಫಜಲುಲ್ಲಾನ ಮೂಲಕ ರಟ್ಟೀಹಳ್ಳಿಯನ್ನು ಆಕ್ರಮಿಸಿಕೊಳ್ಳಲು ಹೊಂಚು ಹಾಕಿದ್ದ ಸಂದರ್ಭದಲ್ಲಿ ಪೇಶ್ವೆ ಮನೆತನದ ಮಾಧವರಾಯ ಅವನನ್ನು ಸೋಲಿಸಿ ರಟ್ಟೀಹಳ್ಳಿಯನ್ನು ಹೈದರಾಲಿಯ ವಷದಿಂದ ತಪ್ಪಿಸಿ ಹಿಂದೂಗಳ ವಶದಲ್ಲಿರುವಂತೆ ಮಾಡಿದ ಕೀರ್ತಿ ಮಾಧವರಾಯನಿಗೆ ಸಲ್ಲುತ್ತದೆ ನಂತರ ರಟ್ಟೀಹಳ್ಳಿ ಮತ್ತು ಆನವಟ್ಟಿ ಯುದ್ದವೆಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
ತಾಲೂಕಿನ ಮಾಸೂರಿನ ಮದಗದ ಕೆರೆ ಐತಿಹಾಸಿಕ ಪ್ರಸಿದ್ಧಿ ಪಡೆದು ತನ್ನದೆ ಆದ ಖ್ಯಾತಿ ಪಡೆದಿದೆ. ಅದು ಜನಪದ ಹಾಡಿನ ಮೂಲಕ ಜಗತ್ತಿನಲ್ಲಿ ಖ್ಯಾತಿ ಪಡೆದು ಕೆರೆಗೆಹಾರ ಎಂಬ ತಲೆಬರಹದ ಮೂಲಕ ಜಾನಪದ ಗೀತೆಯಾಗಿ ರಚಿತಗೊಂಡಿದೆ, ಕೆರೆಗೆ ಬಲಿದಾನಕ್ಕೆ ಒಳಗಾದ ಹೆಣ್ಣು ರಟ್ಟೀಹಳ್ಳಿಯ ಪಾಟೀಲ್ ವಂಶಕ್ಕೆ ಸೇರಿದ ಕೆಂಚಮ್ಮ ಇವಳು ಮಹಾನ್ ಪತಿವ್ರತಾ ಶಿರೋಮಣಿ ಎಂಬ ಖ್ಯಾತಿ ಪಡೆದಿದ್ದು ನಮ್ಮೇಲ್ಲರ ಹೆಮ್ಮೆ. ರಟ್ಟೀಹಳ್ಳಿ ಎಂಬ ಪಟ್ಟಣವನ್ನು ಕಲ್ಯಾಣದ ಚಾಳುಕ್ಯರು, ಕಲಚೂರಿಗಳು, ಹೊಯ್ಸಳರು, ಯಾದವರು, ವಿಜಯನಗರದ ಅರಸರು ಆಳಿದ ಬಗ್ಗೆ ಮಹತ್ವದ ದಾಖಲೆಗಳು ದೊರೆಯುತ್ತವೆ.
ಈ ರಟ್ಟೀಹಳ್ಳಿ ಪಟ್ಟಣವು ಹಲವು ದೇವಾಲಯಗಳಿಂದ ಕೂಡಿ ದೇವಾಲಯಗಳ ಬೀಡಾಗಿದೆ. ಇಲ್ಲಿ ಕದಂಬೇಶ್ವರ, ವೀರಭದ್ರದೇವರು , ಮಹಾಲಕ್ಷ್ಮಿ ದೇವಾಲಯ ಇನ್ನು ಮುಂತಾದ ದೇವಾಲಯಗಳನ್ನು ನಾವು ಈ ಪಟ್ಟಣದಲ್ಲಿ ಕಾಣಬಹುದು.
ಕದಂಬೇಶ್ವರ ದೇವಾಲಯ :-
ಕುಮದ್ವತಿ ನದಿ ದಡದಲ್ಲಿ ನಿರ್ಮಾಣಗೊಂಡ ಇದು ಪೂರ್ವಕ್ಕೆ ಅಭಿಮುಖವಾಗಿದ್ದು ಕಲ್ಯಾಣದ ಚಾಲುಕ್ಯರ ಅವಧಿಯಲ್ಲಿ ನಿರ್ಮಾಣಗೊಂಡಿದೆ ನಂತರ ಹೊಯ್ಸಳರು, ವಿಜಯನಗರದ ಅರಸರು, ನಂತರದ ದಿನಗಳಲ್ಲಿ ದುರಸ್ತಿ ಕಾರ್ಯ ನಡೆಸಿದ್ದಾರೆ. ಇದು 12 ನೇ ಶತಮಾನದಲ್ಲಿ ರಚಿತಗೊಂಡಿದೆ.
ಇದು ತ್ರಿಕೂಟವನ್ನೊಳಗೊಂಡ ದೇವಾಲಯ ಇದಾಗಿದೆ. ಇದಕ್ಕೆ 3 ಗರ್ಭಗುಡಿಗಲಿವೆ. 3 ಅಂತರಾಳಗಳಿವೆ. ನವರಂಗ, ಸಭಾ ಮಂಟಪದಿಂದ ಕೂಡಿದ್ದು ದೇವಾಲಯದ ಶಿಲ್ಪ ಕೆತ್ತನೆ ಮಾತ್ರ ಸುಂದರವಾಗಿ ನಿರ್ಮಾಣಗೊಂಡಿದೆ. ಪ್ರವೇಶದ್ವಾರದಲ್ಲಿ ಮಕರ ತೋರಣದ ರಚನೆಯಿಂದ ಬ್ರಹ್ಮ-ವಿಷ್ಣು ಮಹೇಶ್ವರ, ಗಣಪತಿ, ಮಹಿಷಾಸುರ ಮರ್ದಿನಿಯನ್ನು ಉಬ್ಬು ಶಿಲೆಗಳಲ್ಲಿ ನಿರ್ಮಿಸಲಾಗಿದೆ. ಗರ್ಭಗುಡಿಯ ಬಾಗಿಲಲ್ಲಿ ತಲೆ ಬಾಗಿದ ತಾವರೆ ಹೂಗಳು ಕಂಡು ಬರುತ್ತವೆ. ನವರಂಗದಲ್ಲಿ ನಾಗರಕಲ್ಲು, ಗಣಪತಿ, ಪಾರ್ವತಿ, ನಾಗಯಕ್ಷಿ, ಕಾಳಿ, ಹನುಮನ ವಿಗ್ರಹಗಳೊಂದಿಗೆ 2 ಬೃಹತ್ ಶಿಲಾ ಶಾಸನಗಳವೆ.
ದೇವಾಲಯದ ಮುಖಮಂಟಪಕ್ಕೆ ಹೊಂದಿಕೊಡಂತೆ ವಿಶಾಲವಾದ ಹಜಾರ ಇದೆ. ಇದು 28 ಕಂಬಗಳಿಂದ ಕೂಡಿದೆ. ಇದನ್ನು ವಿಜಯನಗರದ ಕಾಲದಲ್ಲಿ ನಿರ್ಮಿಸಿರಬೇಕು ಎಂದು ಇತಿಹಾಸ ತಿಳಿಸುತ್ತದೆ. ಈ ತ್ರಕೂಟ ದೇವಾಲಯದಲ್ಲಿ 2 ಗೋಪುರಗಳು ಮಾತ್ರ ಸುಸ್ತಿತಿಯಲ್ಲಿದ್ದು 1 ಗೋಪುರ ನಶಿಸಿ ಹೋಗಿದೆ. ಈ ಗೋಪುರದಲ್ಲಿ ನಟರಾಜನ ವಿವಿದ ಭಂಗಿಗಳು ಶಿವನ ನಾಟ್ಯ ಸ್ವರೂಪದ ಭಂಗಿ ಸುತ್ತಲೂ ಕಾಣಬಹುದು. ಇದರಲ್ಲಿ ಹೊಯ್ಸಳರ ಲಾಂಛನವಿದೆ. 3 ಗರ್ಭಗುಡಿಯಲ್ಲಿ ಬೃಹದಾಕಾರದ ಶಿವಲಿಂಗಗಳಿವೆ ಅದರ ಎದುರು ಬಸವನ ಪ್ರತಿಮೆ ಇದೆ.
ಹೀಗೆ ರಟ್ಟೀಹಳ್ಳಿಯ 12 ನೇ ಶತಮಾನದಿಂದ ಇಂದಿನವರೆಗೂ ಅದು ತನ್ನದೇ ಆದ ಐತಿಹಾಸಿಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ತನ್ನದೇ ಆದ ಛಾಪನ್ನು ಮೈಗೂಡಿಸಿಕೋಡು ಬಂದಿದ್ದು ಈ ಮೂಲಕ ತಿಳಿಯಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
