ಬೆಂಗಳೂರು:
ನಗರದಲ್ಲಿ ಹೋರ್ಡಿಂಗ್ಸ್ ಅಳವಡಿಕೆಗೆ ನಿಷೇಧ ಜಾರಿಯಲ್ಲಿದ್ದರೂ ಅನಧಿಕೃತ ಹೋರ್ಡಿಂಗ್ಸ್ ಅಳವಡಿಕೆ ವಿರುದ್ಧ ಬಿಬಿಎಂಪಿ ಪೊಲೀಸರಿಗೆ 27 ದೂರುಗಳನ್ನು ದಾಖಲಿಸಿದೆ. ಈ ಸಂಬಂಧ ಹೆಚ್ಚಿನ ತನಿಖೆಗಾಗಿ ಪೊಲೀಸರು 12 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಅಕ್ರಮ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ ಒಂದು ದಿನದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಡೇಟಾವನ್ನು ಹಂಚಿಕೊಂಡಿದೆ.
ನಗರದಲ್ಲಿ ಅನುಮತಿಯಿಲ್ಲದೆ ಹಾಕಲಾಗಿದ್ದ 1,259 ಫ್ಲೆಕ್ಸ್‌ಗಳು, ಬ್ಯಾನರ್‌ಗಳು, ಎಲ್‌ಇಡಿ ಬೋರ್ಡ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಕ್ರಮ ಹೋರ್ಡಿಂಗ್‌ಗಳ ಛಾಯಾಚಿತ್ರಗಳನ್ನು 9480683939 ಗೆ ಕಳುಹಿಸುವ ಮೂಲಕ ಅಥವಾ ಸಹಾಯವಾಣಿ 1533 ಗೆ ಕರೆ ಮಾಡುವ ಮೂಲಕ ಮಾಹಿತಿ ಹಂಚಿಕೊಳ್ಳಲು ಬಿಬಿಎಂಪಿ ನಾಗರಿಕರನ್ನು ಕೇಳಿದೆ.