ಗೂಗಲ್‌ ಗೆ 1,337ಕೋಟಿ ದಂಡ : ಎತ್ತಿ ಹಿಡಿದ ಎನ್ ಸಿಎಲ್ ಎಟಿ

ಬೆಂಗಳೂರು:

    ವಿಶ್ವದ ಅತಿ ದೊಡ್ಡ ಕಂಪನಿಗಳಲ್ಲಿ ಒಂದಾದ ಗೂಗಲ್ ಭಾರಿ ಹಿನ್ನಡೆ ಅನುಭವಿಸಿದ್ದು, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(ಎನ್ ಸಿಎಲ್ ಎಟಿ) ಅದಕ್ಕೆ ವಿಧಿಸಿದ್ದ ದಂಡವನ್ನು ಎತ್ತಿ ಹಿಡಿದಿದೆ. 

    ಗೂಗಲ್ 30 ದಿನಗಳಲ್ಲಿ 1,337 ಕೋಟಿ ರೂಪಾಯಿ ಪಾವತಿಸಬೇಕಾಗುತ್ತದೆ ಎಂದು   ಹೇಳಿದೆ. ಈ ಹಿಂದೆ, ಭಾರತದಲ್ಲಿನ ಕಂಪನಿಗಳ ನಡುವೆ ಸ್ಪರ್ಧೆಯನ್ನು ಕಾಪಾಡಿಕೊಳ್ಳಲು ಸಂಬಂಧಿಸಿದ ವಾಚ್‌ಡಾಗ್ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ , ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿ ಗೂಗಲ್‌ಗೆ ಭಾರಿ ದಂಡವನ್ನು ವಿಧಿಸಿತ್ತು.   ಮುಂದೆ ಗೂಗಲ್ ಈ ಆದೇಶವನ್ನು ಪ್ರಶ್ನಿಸಿತು.

    CCI ಯಿಂದ ಭಾರಿ ದಂಡ ಪಾವತಿಸುವಂತೆ ಆದೇಶಿಸಿದ ನಂತರ, ಗೂಗಲ್ ಇದನ್ನು ‘ತಪ್ಪು ಆರೋಪ’ ಎಂದು ಕರೆದಿತ್ತು. ಅಲ್ಲದೆ ಅದನ್ನು ಪರಿಶೀಲಿಸಲು ಮತ್ತು ಆದೇಶವನ್ನು ಸರಿಪಡಿಸಲು NCLAT ಗೆ ಮನವಿ ಮಾಡಿತ್ತು. ಅಲ್ಲದೆ ಮೊಬೈಲ್ ತಯಾರಕರೊಂದಿಗೆ ತನ್ನ ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದಗಳು ಇತರ ಅಪ್ಲಿಕೇಶನ್‌ಗಳನ್ನು ಪೂರ್ವ-ಸ್ಥಾಪಿಸಲು ಸಾಧ್ಯವಿಲ್ಲ ಎಂದು ಎಲ್ಲಿಯೂ ಹೇಳುವುದಿಲ್ಲ ಎಂದು ಗೂಗಲ್ ಹೇಳಿತ್ತು. ಸ್ಪರ್ಧಾತ್ಮಕ ಕಂಪನಿಗಳಿಂದ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಲು ಮೂಲ ಸಲಕರಣೆ ತಯಾರಕರಿಗೆ  ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಗೂಗಲ್ ಹೇಳುತ್ತದೆ.